ರೈತನಾಯಕ ಪುಟ್ಟಣಯ್ಯ ಹಸಿರುಶಾಲಿಗೆ ಸಿಕ್ಕಿದ ಉತ್ತರಾಧಿಕಾರಿ – ರೈತ ಹೋರಾಟಕ್ಕೆ ಹೆಗಲು ಕೊಡಲಿದ್ದಾರೆ ದರ್ಶನ !

https://youtu.be/1PkbN-DV-PU
https://youtu.be/1PkbN-DV-PU

ಇತ್ತೀಚೆಗೆ ನಿಧನರಾದ ಮೇಲುಕೋಟೆ ಶಾಸಕ ದಿ.ಪುಟ್ಟಣ್ಣಯ್ಯ ನಂತ್ರದ ಉತ್ತರಾಧಿಕಾರಿಯಾರಾಗ್ತಾರೆ ಅನ್ನೋದಕ್ಕೆ ಕಡೆಗೂ ಇತ್ತರ ಸಿಕ್ಕಿದೆ.

ಇದಕ್ಕಾಗಿ ಇಂದು ಸಭೆ ಸೇರಿದ ರೈತಸಂಘದ ಕಾರ್ಯಕರ್ತರು ಕಡೆಗೂ ತಮ್ಮ ಒಮ್ಮತದ ಅಭ್ಯರ್ಥಿಯನ್ನು ಘೋಷಿಸಿದ್ದು ಮುಂದಿನ ವಿಧಾನಸಭೆ ಚುನಾವಣೆಗೆ ಸ್ವರಾಜ್ಯ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ನಿರ್ಧಾರ ಮಾಡಿದ್ದಾರೆ. ಆಗಿದ್ರೆ ಯಾರು ಆ ಒಮ್ಮತದ ಉತ್ತರಾಧಿಕಾರಿ ಅನ್ನೋದ್ರ ಕಂಪ್ಲೀಟ್ ಇಲ್ಲಿದೆ ನೋಡಿ‌.
ಹೌದು, ಕಡೆಗೂ ಮೇಲುಕೋಟೆ ಕ್ಷೇತ್ರ ಉತ್ತಾರಾಧಿಯಾಗಿ ದರ್ಶನ್​ ಪುಟ್ಟಣ್ಣಯ್ಯ ಹೆಸ್ರು ಅಂತಿಮವಾಗಿದೆ‌. ಫೆಬ್ರವರಿ 18ರಂದು ನಿಧನರಾಗಿದ್ದ ಶಾಸಕ ಕೆ.ಎಸ್​.ಪುಟ್ಟಣ್ಣಯ್ಯ ಸ್ಥಾನಕ್ಕೆ ಪತ್ನಿ ಸುನೀತಾ ಮತ್ತು ಮಗ ದರ್ಶನ್ ಇಬ್ಬರಲ್ಲಿ ಒಬ್ಬರು ಉತ್ತರಾಧಿಕಾರಿಯಾಗ್ತಾರೆ ಅಂತಾ ಹೇಳಲಾಗ್ತಿತ್ತು.

ಆದ್ರೆ ಅಂತಿಮವಾಗಿರಲಿಲ್ಲ. ಆದ್ರೆ ಇಂದು ಈ ವಿಚಾರವಾಗಿ ಜಿಲ್ಲೆಯ ತಾಲೂಕಿನ ರೈತ ಸಂಘದ ಕಾರ್ಯಕರ್ತರು ಸೇರಿ ಪುಟ್ಟಣ್ಣಯ್ಯ ಸಮಾಧಿ ಮುಂದೆ ಪುಟ್ಟಣ್ಣಯ್ಯ ಮಗ ದರ್ಶನ್ ಹೆಸ್ರನ್ನು ಅಂತಿಮ ಗೊಳಿಸಿ ಪುಟ್ಟಣ್ಣಯ್ಯ ಉತ್ತರಾಧಿಕಾರಿಯಂತ ಅನುಮೋದಿಸಿದ್ರು.ಅಲ್ದೆ ಮುಂದಿನ ಚುನಾವಣೇಲಿ ದರ್ಶನ್ ಬೆಂಬಲಿಸಿ ಗೆಲ್ಲಿಸುವ ಪ್ರತಿಜ್ಞೆ ಮಾಡಿದ್ರು.
ಇನ್ನೂ ಇದಕ್ಕೂ ಮುನ್ನ ಪುಟ್ಟಣ್ಣಯ್ಯ ಸಮಾಧಿಗೆ ಮಗ ದರ್ಶನ್ ಸೇರಿ ಹಲವು ರೈತ ನಾಯಕ್ರು ಪುಟ್ಟಣ್ಣಯ್ಯ ಸಮಾಧಿಗೆ ಪೂಜೆ ಸಲ್ಲಿಸಿದ್ರು. ಬಳಿಕ ರೈತ ಸಂಘದ ಹಲವಾರು ನಾಯಕರೊಂದಿಗೆ ಸಭೆ ನಡೆಸಿ ತಮ್ಮ ಮುಂದಿನ ಅಭ್ಯರ್ಥಿಯನ್ನಾಗಿ ದರ್ಶನ್ ಪುಟ್ಟಣ್ಣಯ್ಯನ್ನು ಒಮ್ಮತವಾಗಿ ಆರಿಸಿದ್ರು.

ಅಲ್ದೆ ಪುಟ್ಟಣ್ಣಯ್ಯ ಪತ್ನಿ ಸುನೀತಾ ಕೂಡ ಮಗನನ್ನು ಹೋರಾಟದ ಮಡಿಲಿಗೆ ಹಾಕೋದಾಗಿ ಹೇಳೋ ಮೂಲಕ ದರ್ಶನ್ ಪುಟ್ಟಣ್ಣಯ್ಯ ತನ್ನ ಪತಿಯಂತೆ ಹೋರಾಟಗಾರನಾಗಲಿ ಅಂತಾ ಹೋರಾಟದ ಮಡಿಲಿಗೆ ಹಾಕುತ್ತಿರೋದಾಗಿ ಭಾವುಕರಾಗಿ ಹೇಳೋ ಮೂಲಕ ಮಗನ ಆಯ್ಕೆಯನ್ನು ಸಮ್ಮಿತಿಸಿದ್ರು. ಮಗ ದರ್ಶನ್ ಕೂಡ ಅಪ್ಪನ ಸಮಾಧಿಗೆ ಪೂಜೆ ಸಲ್ಲಿಸಿ ತಾನೂ ಅಪ್ಪನ ಹೋರಾಟದ ಹಾದಿಯಲ್ಲಿ ಮುನ್ನೆಡೆಯಲು ಸಿದ್ದನಿದ್ದು ಎಲ್ಲರ ಒಪ್ಪಿಗೆಯಂತೆ ನಾನು ಸ್ವರಾಜ್ ಇಂಡಿಯಾದ ಅಭ್ಯರ್ಥಿಯಾಗಲು ಸಮ್ಮತಿಸಿದ್ರು. ಒಟ್ಟಾರೆ, ಮೇಲುಕೋಟೆ ಕ್ಷೇತ್ರಕ್ಕೆ ಪುಟ್ಟಣ್ಣಯ್ಯರ ಮಗ ದರ್ಶನ್​ ಪುಟ್ಟಣ್ಣಯ್ಯರನ್ನು ಉತ್ತರಾಧಿಕಾರಿಯನ್ನಾಗಿ ‌ಮಾಡಲಾಗಿದ್ದು, ಮುಂದಿನ‌ ಚುನಾವಣೇಲಿ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ಖಚಿತವಾಗಿದೆ. ಅಲ್ದೆ ಈಗಾಗಲೇ ಕಾಂಗ್ರೆಸ್ ಪಕ್ಷವು ಕೂಡ ರೈತ ಸಂಘದ ಒಮ್ಮತದ ಅಭ್ಯರ್ಥಿಗೆ ಬೆಂಬಲ ಘೋಷಿಸುವ ಬಗ್ಗೆ ತಿಳಿಸಿದೆ. ಇನ್ನೇನ್ನಿದ್ರು ದರ್ಶನ್ ಪುಟ್ಟಣ್ಣಯ್ಯ ಚುನಾವಣೆಯನ್ನು ಹೇಗೆ ಫೇಸ್ ಮಾಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
—-