ರಾಜ್ಯದಲ್ಲಿರೋದು ಪುಂಡ,ಪೋಕರಿಗಳಿಗೆ ರಕ್ಷಣೆ ನೀಡೋ ಸರ್ಕಾರ- ಆರ್.ಅಶೋಕ್ ವಾಗ್ದಾಳಿ!

R. Ashok's Reactions about Crimes Cases.
R. Ashok's Reactions about Crimes Cases.

ರಾಜ್ಯದಲ್ಲಿ ಕಾಂಗ್ರೆಸ್​ ನಾಯಕರು ಹಾಗೂ ಅವರ ಸಂಬಂಧಿಗಳು ನಡೆಸುತ್ತಿರುವ ದೌರ್ಜನ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಮಾಜಿ ಡಿಸಿಎಂ ಆರ್.ಅಶೋಕ್​ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಆಡಳಿತದಲ್ಲಿರುವ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಪುಂಡ ಪೋಕರಿಗಳಿಗೆ ,ರೌಡಿಗಳ ರಕ್ಷಣೆಗೆ ಸದಾ ಸಿದ್ದವಾಗಿರುವ ಸರ್ಕಾರವಾಗಿದೆ. ಶಾಂತಿ ತೋಟವಾದ ಬೆಂಗಳೂರು ಅಶಾಂತಿಯ ತೋಟವಾಗಿದೆ. ಇದು ಸಿದ್ಧು ಭಾಗ್ಯ, ಅಪರಾಧಿಗಳ ಸ್ವರ್ಗ ನಮ್ಮ ರಾಜ್ಯವಾಗಿದೆ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.  ವಿದ್ವತ್ ಮೇಲಿನ ಹಲ್ಲೆ ಪ್ರಕರಣ ನೋಡಿದ್ರೆ ನಶೆಯಲ್ಲಿ ಹಲ್ಲೆ ಮಾಡಿದಂತೆ ಕಾಣಿಸುತ್ತಿದೆ. ಸೆಲ್ಲರ್ ನಲ್ಲಿ ಎದೆ ಮೇಲೆ ಬೂಟ್ ಕಾಲ್ ನಿಂದ ಹೊಡೆದಿದ್ದಾರೆ. ಅವನಿಗೆ ಎಂಟು ಕಡೆ ಫ್ಯಾಚ್ಚರ್ ಆಗಿದೆ. ಮೂಗಿನ ಎರಡು ಮೂಳೆ ಮುರಿದಿದೆ. ಕಾಲು ಸ್ವಲ್ಪ ಮುರಿದಿತ್ತು ಮತ್ತೆ ಮುರಿದಿದ್ದಾರೆ ಎಂದು ವಿವರಿಸಿದ್ರು.

ಈಗಾಗಲೇ ಸಿಸಿಟಿವಿ ಕ್ಯಾಮಾರದಲ್ಲಿರುವ ದೃಶ್ಯಗಳನ್ನು ಪೋಲೀಸರ ನೇತೃತ್ವದಲ್ಲೆ ಹಾಳು ಮಾಡಿದ್ದಾರೆ ಅನ್ನೋದು ಆರೋಪವಿದೆ. ಪೊಲೀಸರಿಗೆ ಧೈರ್ಯ ಇದ್ರೆ ಸಿಸಿಟಿವಿ ದೃಶ್ಯವನ್ನು ಮಾಧ್ಯಮಗಳಿಗೆ, ಕೋರ್ಟ್ ಗೆ ಕೊಡಲಿ ಎಂದರು.
ಇನ್ನು ನಾರಾಯಣಸ್ವಾಮಿ ಪ್ರಕರಣದ ಕುರಿತು ಮಾತನಾಡಿದ ಆರ್.ಅಶೋಕ್​, ಈ ವಿಡಿಯೋ ನೋಡಿದ್ರೆ ಸರ್ಕಾರ ಪರ್ಸಂಟೇಜ್ ಸರ್ಕಾರ ಅನ್ನೋದು ಖಚಿತವಾಗುತ್ತದೆ‌. ಸಿಎಂ ಆದೇಶ ಮಾಡಿದ್ರೂ ನಾರಾಯಣಸ್ವಾಮಿ ಬಂಧನವಾಗಿಲ್ಲ. ಒಬ್ಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷನಿಗೆ ಅಷ್ಟೊಂದು ಶಕ್ತಿ ಇದೆಯಾ.ರಾಜರಾಜೇಶ್ವರಿ ನಗರದಲ್ಲಿ ಗೋಡೆಗಳ ಮೇಲೆ ಬಿಜೆಪಿ ಚಿತ್ರ ಬರೆಯುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಮುಖಂಡ ವೆಂಕಟೇಶ ಧಮಕಿ ಹಾಕಿದ್ದಾರೆ ಎಂದರು.

 

 

ಅಮಿತ್ ಶಾ ಕಾರ್ಯಕ್ರಮದ ವೇಳೆ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಅಮಿತ್ ಶಾ ಕಾರ್ಯಕ್ರಮ ಬಳಿಕ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ.ರಾಜ್ಯದಲ್ಲಿ ಗುಂಡಾಗಿರಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ.ಕಾಂಗ್ರೆಸ್ ಅಂದ್ರೆ ಗುಂಡಾಗಿರಿ, ಗುಂಡಾಗಿರಿ ಅಂದ್ರೆ ಕಾಂಗ್ರೆಸ್ ಎನ್ನುವಂತ್ತಾಗಿದೆ. ಕಾನೂನು ಸುವ್ಯವಸ್ಥೆ ಸರ್ಕಾರ ಕೈಯಲ್ಲಿದೆಯೋ ಅಥವಾ ಗುಂಡಾಗಳ ಕೈಯಲ್ಲಿದೆಯೋ ಎಂಬ ಪ್ರಶ್ನೆ ಮೂಡಿದೆ ಎಂದರು. ಅಲ್ಲದೇ ರಾಜರಾಜೇಶ್ವರಿ ನಗರದಲ್ಲಿ ನಡೆದ ರೌಡಿಸಂನ ವಿಡಿಯೋ ಬಿಡುಗಡೆ ಮಾಡಿದರು. ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರ ಅವಾಂತರಗಳಿಂದ ರಾಜ್ಯ ಸರ್ಕಾರ ತೀವ್ರ ಮುಜುಗರ ಎದುರಿಸುವಂತಾಗಿದ್ದು, ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.