ರಾಗಾ ಕೃಷ್ಣ ಮಠಕ್ಕೆ ಬೇಟಿ ನೀಡಲ್ವಂತೆ!!!

ಕರಾವಳಿ ಜಿಲ್ಲೆಗಳ ಪ್ರವಾಸದ ವೇಳೆ ರಾಹುಲ್ ಗಾಂಧಿ ಟೆಂಪಲ್ ರನ್ ಮಾಡ್ತಾರೆ. ಉಡುಪಿಯ​​ ಕೃಷ್ಣಮಠಕ್ಕೇ ರಾಹುಲ್ ಭೇಟಿ ನೀಡಲ್ವಂತೆ. ಹೀಗಂತ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಯಾಕಂದ್ರೆ ಮಾರ್ಚ್ 20,21 ರಂದು ನಡೆಯುವ ಕರಾವಳಿ ಪ್ರವಾಸದ ವೇಳೆ ರಾಹುಲ್ ಗಾಂಧಿ ಕೃಷ್ಣಮಠಕ್ಕೆ ಭೇಟಿ ನೀಡಲ್ಲ. ಈ ಮೊದಲು ಎಷ್ಟೇ ಬಾರಿ ಉಡುಪಿಗೆ ಬಂದ್ರೂ ಕೃಷ್ಣಮಠಕ್ಕೆ ಸಿಎಂ ಭೇಟಿ ಮಾಡ್ತಿರ್ಲಿಲ್ಲ. ಈಗ ಅದನ್ನೇ ರಾಹುಲ್ ಗಾಂಧಿಯವರೂ ಮಾಡುತ್ತಿದ್ದಾರೆ.


ಇನ್ನು ಇದೇ ವೇಳೆ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಮೋದ್​ ಮಧ್ವರಾಜ್​​ ವಾಗ್ದಾಳಿಯನ್ನೂ ನಡೆಸಿದ್ರು. ರಾಹುಲ್ ಕೃಷ್ಣ ಮಠಕ್ಕೆ ಬಂದ್ರೆ ಬಡಿಗೆ ತಗೊಳ್ಳಿ ಅಂತ ಶೋಭಾ ಇತ್ತೀಚೆಗೆ ಕಿಡಿಕಾರಿದ್ದನ್ನು ಉಲ್ಲೇಖಿಸಿದ್ರು.