ಕಾಂಗ್ರೆಸ್ ಅಧಿಕೃತ ಹೈಕಮಾಂಡ್ ಆಗಲಿದ್ದಾರೆ ರಾಹುಲ್ ಗಾಂಧಿ ! ಡಿಸೆಂಬರ್ 11 ಕ್ಕೆ ಅಧ್ಯಕ್ಷ ಘೋಷಣೆ !!

ಕಾಂಗ್ರೆಸ್ ಅಧಿಕೃತ ಹೈಕಮಾಂಡ್ ಆಗಲಿದ್ದಾರೆ ರಾಹುಲ್ ಗಾಂಧಿ ! ಡಿಸೆಂಬರ್ 11 ಕ್ಕೆ ಅಧ್ಯಕ್ಷ ಘೊಷಣೆ !!

ಡಿಸೆಂಬರ್ 11 ರಂದು ರಾಹುಲ್ ಗಾಂಧಿ ಕಾಂಗ್ರೆಸ್ ನ ಅತ್ಯುನ್ನತ ಹುದ್ದೆಗೇರಲಿದ್ದಾರೆ. ಇಲ್ಲಿಯವರೆಗೆ ಎಐಸಿಸಿ ಉಪಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಇಂದು ಪಕ್ಷದ ಆಂತರಿಕ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಹುದ್ದೆಗೆ ಇಂದು ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್​ನ ಕಾರ್ಯಕಾರಿ ಸಮಿತಿಯ ಮುಖಂಡರು, ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಪಂಜಾಬ್ ಸಿಎಂ ಅಮರೀಂದರ್ ಸಿಂಗ್, ಪಾಂಡಿಚೇರಿಯ ಸಿಎಂ ವಿ.ನಾರಾಯಣಸ್ವಾಮಿ ಹಾಗೂ ವಿವಿಧ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರು ಮತ್ತು ಹಿರಿಯ ಮುಖಂಡರು ಎಐಸಿಸಿ ಪ್ರಧಾನ ಕಚೇರಿಯಲ್ಲಿ ರಾಹುಲ್ ಪರ ನಾಮಪತ್ರಕ್ಕೆ ಅನುಮೋದನೆ ನೀಡಿದ್ದಾರೆ.

ಸಿದ್ದರಾಮಯ್ಯ ಜೊತೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್, ಸಚಿವರಾದ ಡಿ ಕೆ ಶಿವಕುಮಾರ್, ಕೆ.ಜೆ.ಜಾರ್ಜ್ ಇದ್ದಾರೆ.

ಇನ್ನು ರಾಹುಲ್​ ಗಾಂಧಿ ವಿರುದ್ಧ ಯಾರೂ ಸ್ಪರ್ಧಿಸದಿದ್ದರೆ ಡಿಸೆಂಬರ್ 11ರಂದು ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.