ವಿರಾಗಿಗೆ ಮಹಾಮಜ್ಜನ- ಸಮಾರಂಭಕ್ಕೆ ರಾಷ್ಟ್ರಪತಿ ಕೋವಿಂದ್​​ ರಿಂದ ಚಾಲನೆ!

Ram Nath Kovind Speech in Mahamastakabhisheka at Shravanabelagola.
Ram Nath Kovind Speech in Mahamastakabhisheka at Shravanabelagola.

 ಜೈನಕಾಶಿ ಶ್ರವಣಬೆಳಗೊಳದಲ್ಲಿಂದು 88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆಯಿತು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಧರ್ಮಪತ್ನಿ ಸವಿತಾ ಕೋವಿಂದ್ ಸಮೇತ ಆಗಮಿಸಿ ಬೆಳಗ್ಗೆ 11.02 ನಿಮಿಷಕ್ಕೆ ಭಗವಾನ್ ಬಾಹುಬಲಿ ಪ್ರತಿಮೆ ಅನಾವರಣ ಮತ್ತು ಜ್ಯೋತಿ ಬೆಳಗುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.  ಅಪರೂಪ ಕ್ಷಣಕ್ಕೆ ರಾಜ್ಯಪಾಲ ವಜುಭಾಯ್ ವಾಲಾ, ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮೊದಲಾದವರು ಸಾಕ್ಷಿಯಾದರು.

 

19 ದಿನಗಳ ಮಹೋತ್ಸವಕ್ಕೆ ಆರಂಭ ದೊರಕುತ್ತಿದ್ದಂತೆಯೇ ಚಾವುಂಡರಾಯ ಸಭಾಮಂಟಪದಲ್ಲಿ ನೆರೆದಿದ್ದ ಸಾವಿರಾರು ಮಂದಿ ಭಕ್ತರು ಜಿನಸ್ತುತಿ ಮೊಳಗಿಸಿ ಸಂಭ್ರಮಿಸಿದರು.
ಫೆಬ್ರವರಿ 17 ರಿಂದ ವಿಂಧ್ಯಗಿರಿಯ ಮೇಲೆ ವಿರಾಜ ಮಾನನಾಗಿರುವ ಬಾಹುಬಲಿ ಸ್ವಾಮಿಗೆ ಮಹಾ ಮಸ್ತಕಾಭಿಷೇಕ ನಡೆಯಲಿದೆ. ಇನ್ನು ಮಸ್ತಕಾಭಿಷೇಕ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಧನ್ಯತಾ ಭಾವದಿಂದ ಈ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದೇನೆ. ಮಹೋತ್ಸವದಲ್ಲಿ ಭಾಗಿ ಯಾಗಿರುವ ಎಲ್ಲರಿಗೂ ರಾಜ್ಯ ಸರ್ಕಾರದ ಪರವಾಗಿ ಸ್ವಾಗತ. ಮಸ್ತಕಾಭಿಷೇಕ ಆಚರಣೆಗೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಮಸ್ತಕಾಭಿಷೇಕ ಅಚ್ಚುಕಟ್ಟಾಗಿ, ದೇಶದ ಗಮನ ಸೆಳೆಯುವ ನಿಟ್ಟಿನಲ್ಲಿ ಆಚರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೆ. ಪೂರ್ವ ಸಿದ್ಧತಾ ಕಾರ್ಯ ಬಹುತೇಕ ಪೂರ್ಣವಾಗಿದೆ.ಇದಕ್ಕೆ ಕೈಜೋಡಿಸಿದ ಎಲ್ಲರಿಗೂ ಅಭಿನಂದನೆಗಳು. ಇಂಥ ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ, ದೇಶದಲ್ಲಿ ಸಂತರು, ದಾರ್ಶನಿಕರು, ಸೂಫಿಗಳಿಂದ ಶಾಂತಿ ನೆಲೆಸಿದೆ ಎಂದರು.

ಪ್ರತ್ಯುತ್ತರ ನೀಡಿ

Please enter your comment!
Please enter your name here