ಕರುನಾಡಲ್ಲಿ ಕೆರೆ ರಕ್ಷಣೆ- ಕೇರಳದಲ್ಲಿ ಕೆರೆ ಭಕ್ಷಣೆ- ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ ವಿರುದ್ಧ ಕೆರೆ ಒತ್ತುವರಿ ಆರೋಪ!!

Resort Owned by NDA MP Rajeev Chandrasekhar Accused of Land Encroachment.
Resort Owned by NDA MP Rajeev Chandrasekhar Accused of Land Encroachment.

ಬೆಂಗಳೂರಲ್ಲಿ ಕೆರೆ ಒತ್ತುವರಿ ವಿರುದ್ಧ ಹೋರಾಟ, ಕೇರಳದಲ್ಲಿ ಸ್ವತಃ ಹೋರಾಟಗಾರರಿಂದಲೇ ಕೆರೆ ಒತ್ತುವರಿ ಇಂತಹದೊಂದು ಆರೋಪ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್​ ವಿರುದ್ಧ ಕೇಳಿಬಂದಿದೆ. ಹೌದು ರಾಜೀವ ಚಂದ್ರಶೇಖರ್ ವಿರುದ್ಧ ಕೇರಳದ ಕೊಟ್ಟಾಯಂನ ಕುಮರಗಂ ಕೆರೆ ನುಂಗಿ ರೆಸಾರ್ಟ್​ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Resort Owned by NDA MP Rajeev Chandrasekhar Accused of Land Encroachment.
Resort Owned by NDA MP Rajeev Chandrasekhar Accused of Land Encroachment.

ಕೇರಳದ ಕೊಟ್ಟಾಯಂನ ಕುಮರಗಂನಲ್ಲಿ ಕೆರೆ ನುಂಗಿ ನಿರಾಮಯಾ ರಿಟ್ರೀಟ್​ ರೆಸಾರ್ಟ್ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೇರಳದ ಭೂ ಕಾಯ್ದೆ ಉಲ್ಲಂಘಿಸಿ ರಾಜೀವ್ ಚಂದ್ರಶೇಖರ್ ಒಡೆತನದ ಜ್ಯುಪಿಟರ್​ ಕ್ಯಾಪಿಟಲ್​ ಗ್ರೂಪ್​ನಿಂದ ನಿರಾಮಯಾ ರಿಟ್ರೀಟ್​ ರೆಸಾರ್ಟ್ ನಿರ್ಮಿಸಲಾಗುತ್ತಿದೆ. ಕೊಟ್ಟಾಯಂನ ಉಪ ತಹಶೀಲ್ದಾರ್ ಸರ್ವೇ ವೇಳೆ ಕೂಡಾ ಕೆರೆ ಒತ್ತುವರಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 15 ದಿನದೊಳಗೆ ರೆಸಾರ್ಟ್ ಕ್ಲೋಸ್ ಮಾಡಲು ಉಪತಹಶೀಲ್ದಾರ ನೋಟಿಸ್ ನೀಡಿದ್ದಾರೆ. ಒಂದ್ವೇಳೆ ರೆಸಾರ್ಟ್​ ನಿರ್ಮಾಣ ಕೈಬಿಡದಿದ್ದರೇ ಸ್ವತಃ ನಾವೇ ತೆರವುಗೊಳಿಸ್ತೀವಿ ಅಂತ ಎಚ್ಚರಿಕೆಯ ನೋಟಿಸ್​ ನೀಡಲಾಗಿದೆ.
ಇನ್ನು ಇತ್ತೀಚೆಗಷ್ಟೇ ನಿರಾಮಯಾ ರಿಟ್ರೀಟ್​ ರೆಸಾರ್ಟ್ ನಿರ್ಮಾಣ ವಿರುದ್ಧ ಡಿವೈಎಫ್​ಐ ಕಾರ್ಯಕರ್ತರು ಹೋರಾಟ ನಡೆಸಿದ್ದರು. ಅಷ್ಟೆ ಅಲ್ಲ ರೆಸಾರ್ಟ್ ಮೇಲೆ ದಾಳಿ ಕೂಡ ನಡೆಸಿದ್ದರು. ದಾಳಿಯಲ್ಲಿ ಕಿಟಕಿ, ಬಾಗಿಲು ಗಾಜು ಪುಡಿಪುಡಿ ಮಾಡಿದ್ದಲ್ದೇ ಪೀಠೋಪಕರಣಗಳನ್ನ ಧ್ವಂಸಗೊಳಿಸಿದ್ದರು.

Resort Owned by NDA MP Rajeev Chandrasekhar Accused of Land Encroachment.
Resort Owned by NDA MP Rajeev Chandrasekhar Accused of Land Encroachment.

ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನಲ್ಲಿ ಕೆರೆ ಒತ್ತುವರಿ ವಿಚಾರ ಬಂದಾಗ ಸ್ವತಃ ರಾಜೀವ ಚಂದ್ರಶೇಖರ್​ ಭಾರಿ ಹೋರಾಟ ನಡೆಸಿದ್ದರು. ಇದೀಗ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಒಡೆತನದ ಸಂಸ್ಥೆಯಿಂದ ನಡೆದಿದೆ ಎನ್ನಲಾದ ಕೆರೆ ಒತ್ತುವರಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.

Watch Here: https://youtu.be/-pRJLulDs7A