ಮೃತ ಬಿಜೆಪಿ ಕಾರ್ಯಕರ್ತ ಸಂತೋಷ ಮನೆಗೆ ಕೇಂದ್ರ ಸಚಿವ ಅನಂತಕುಮಾರ್ ಭೇಟಿ!!

Santosh Assassination: Minister Ananth Kumar,Muralidhar Rao Visit His home

ಕಳೆದ ಕೆಲ ದಿನಗಳ ಹಿಂದೆ ಕೊಲೆಯಾದ ಬಿಜೆಪಿ ಕಾರ್ಯಕರ್ತ ಸಂತೋಷ ಮನೆಗೆ ಇಂದು ಕೇಂದ್ರ ಸಚಿವ ಅನಂತಕುಮಾರ್, ಮುರುಳಿಧರ್ ರಾವ್ ಭೇಟಿ ನೀಡಿದರು. ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಸಂತೋಷ ಕುಟುಂಬದವರಿಗೆ ಸಾಂತ್ವನ ಹೇಳಿದರು.

 

ಈ ವೇಳೆ ಭಾವುಕರಾದ ಸಂತೋಷ ತಾಯಿ ಅನಂತಕುಮಾರ್ ಎದುರು ಕಣ್ಣಿರಿಟ್ಟು ತಮ್ಮ ಮಗನನ್ನು ನೆನಪಿಸಿಕೊಂಡರು. ಅಲ್ಲದೇ ತಾವು ವಾಸವಾಗಿರುವ ಏರಿಯಾದಲ್ಲಿ ಗಾಂಜಾ ಮಾರಾಟ ಮೀತಿಮಿರಿದ್ದು, ವಾಸ ಮಾಡೋದೆ ಕಷ್ಟವಾಗಿದೆ ಅನ್ನೋದನ್ನು ಅನಂತಕುಮಾರ ಗಮನಕ್ಕೆ ತಂದರು. ಅಲ್ಲದೇ ಗಾಂಜಾ ಸೇದುವವರ ಸಂಖ್ಯೆಯೂ ವಿಪರೀತವಾಗಿರೋದರಿಂದ ಮಕ್ಕಳು ಟ್ಯೂಷನ್​ ಸೇರಿದಂತೆ ಎಲ್ಲೂ ಓಡಾಡೋದೆ ಕಷ್ಟವಾಗಿದೆ. ಪೊಲೀಸರು ಇತ್ತ ಗಮನ ಹರಿಸುತ್ತಿಲ್ಲ ಎಂದು ತಮ್ಮ ಸಂಕಷ್ಟ ಹೇಳಿಕೊಂಡರು.

 

 

ಅನಂತಕುಮಾರ್ ಭೇಟಿ ವೇಳೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿ ಸ್ಥಳೀಯ ಹಲವು ಬಿಜೆಪಿ ಮುಖಂಡರು ಹಾಜರಿದ್ದರು. ಭೇಟಿ ಬಳಿಕ ಮಾತನಾಡಿದ ಸಚಿವ ಅನಂತಕುಮಾರ್, ಇದೊಂದು ಬರ್ಬರ ಹತ್ಯೆಯಾಗಿದೆ. ಗಾಂಜಾ ಮಾರಾಟದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಕೊಲೆ ಮಾಡಿದ್ದಾರೆ. ಈ ಹೋರಾಟವನ್ನ ದೆಹಲಿಗೆ ತೆಗೆದುಕೊಂಡು ಹೋಗ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ರು. ಒಟ್ಟಿನಲ್ಲಿ ಸಂತೋಷ ಹತ್ಯೆಯನ್ನು ಸರ್ಕಾರ ಲಘುವಾಗಿ ಪರಿಗಣಿಸಿದ್ದರೂ ಬಿಜೆಪಿ ಮಾತ್ರ ಕಾರ್ಯಕರ್ತನ ಹತ್ಯೆಗೆ ನ್ಯಾಯಕೊಡಿಸುವ ಪ್ರಯತ್ನದಲ್ಲಿದೆ.