ಮಾತನಾಡಿ ಗೌರಿ ಕೊಲೆಯಾದ್ರು. ನಾವು ಸುಮ್ಮನಿದ್ರೆ ಆತ್ಮಹತ್ಯೆ ಮಾಡಿಕೊಂಡಂತೆ !! ಗೌರಿ ನೆನಪಲ್ಲಿ ದಿನೇಶ್ ಅಮೀನ್ ಮಟ್ಟು!

Senior Journalist Dinesh Amin Statements about Gauri Lankesh.
Senior Journalist Dinesh Amin Statements about Gauri Lankesh.

ಸೈದ್ದಾಂತಿಕ ಕಾರಣಗಳಿಗಾಗಿ ಗೌರಿ ಕೊಲೆಯಾದರು. ಗೌರಿಯೇನೋ ಅನ್ಯಾಯ ಅಸಮಾನತೆಯ ಬಗ್ಗೆ ಮಾತನಾಡಿ ಕೊಲೆಯಾದರು.

ad 

ಈಗ ನಾವು ಸುಮ್ಮನಿದ್ದರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ. ಗೌರಿ ಲಂಕೇಶ್ ಜನ್ಮ ದಿನದ ಅಂಗವಾಗಿ ಟೌನ್ ಹಾಲ್ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ದಿನೇಶ್ ಅಮೀನ್ ಮಟ್ಟು ಮಾತನಾಡುತ್ತಿದ್ದರು. ಗೌರಿ ಯಾವ ಆಶಯಗಳಿಗಾಗಿ ಪ್ರಾಣ ಕೊಟ್ಟಳೋ ಆ ಆಶಯಗಳನ್ನು ಜೀವಂತವಾಗಿಡಬೇಕಾದ ಜವಾಬ್ದಾರಿ ನಮ್ಮದು. ನಾವು ಸುಮ್ಮನಿದ್ದರೆ ಆತ್ಮಹತ್ಯೆ ಮಾಡಿಕೊಂಡಂತೆ. ಕೇವಲ ಗೌರಿಯ ಕೊಲೆಗಾರರನ್ನು ಶಿಕ್ಷಿಸಿದರೆ ನಮ್ಮ ಕೆಲಸ ಮುಗಿಯುವುದಿಲ್ಲ ಎಂದರು.

 

 

ಗೌರಿದಿನ ಕಾರ್ಯಕ್ರಮ ಸಿದ್ದರಾಮಯ್ಯ ಪ್ರಾಯೋಜಿತ ಎಂಬುದು ದಿನೇಶ್ ಅಮೀನ್ ಮಟ್ಟು ಭಾಗವಹಿಸುವಿಕೆಯಿಂದ ಗೊತ್ತಾಗುತ್ತದೆ ಎಂದು ಗೌರಿ ಸಹೋದರ ಇಂದ್ರಜಿತ್ ಲಂಕೇಶ್ ಹೇಳಿಕೆಗೆ ದಿನೇಶ್ ಅಮೀನ್ ಮಟ್ಟು ಪರೋಕ್ಷ ತಿರುಗೇಟು ನೀಡಿದ್ರು. ಇಂದು ಗೌರಿಗೆ ವಿಶ್ವದಾದ್ಯಂತ ಅನುಯಾಯಿಗಳಿದ್ದಾರೆ. ಗೌರಿ ಯಾರ ಸೊತ್ತೂ ಅಲ್ಲ. ಸಾವಿರಾರು ಜನ ಅವಳ ವಾರಸುದಾರರು ಇದ್ದಾರೆ. ಅಮ್ಮ ಅಕ್ಕ ಎಂದು ಕರೆಯುವ ಲಕ್ಷಾಂತರ ಜನ ವಿಶ್ವದಾದ್ಯಂತ ಹರಡಿದ್ದಾರೆ. ನಾನೂ ಕೂಡಾ ಗೌರಿಯ ಗೆಳೆಯನಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಇದಕ್ಕೆ ಯಾವ ಸರಕಾರಗಳ ಪ್ರಾಯೋಜಕತ್ವವೂ ಇಲ್ಲ. ಅದರ ಅಗತ್ಯವೂ ಇಲ್ಲ ಎಂದರು.