ಹೆಗಡೆ,ಸಿಂಹ, ಬಿಎಸ್ ವೈ ವಿರುದ್ದ ಸಿದ್ದು ಪಂಚ್ !! ಹುಣಸೂರು ಘಟನೆಗೆ ಡಿಸಿ, ಎಸ್ಪಿಗೆ ಆದೇಶ ನೀಡಿದ್ದೇ ನಾನು ಅಂದ್ರು ಸಿಎಂ !!

CM Siddaramaiah Outrage against BJP Leaders at Karwar.
CM Siddaramaiah Outrage against BJP Leaders at Karwar.

ಬಿಜೆಪಿ ಮತ್ತು ಕಾಂಗ್ರೆಸ್​ ನಡುವಿನ ವಾಕ್ಸಮರ್​​ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಂಗೇರುತ್ತಲೇ ಇದೆ. ಸದಾ ಬಿಜೆಪಿ ನಾಯಕರನ್ನು ಟೀಕಿಸುತ್ತಲೇ ಇರುವ ಸಿಎಂ ಸಿದ್ಧರಾಮಯ್ಯ ನಿನ್ನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಸ್​ವೈ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಪ್ರತಾಪ ಸಿಂಹ ವಿರುದ್ಧ ಗುಡುಗಿದ್ದು, ನಿಮ್ಮೂರಿನ ಅನಂತಕುಮಾರ್ ಹೆಗಡೆ ಗೇ ಸಂಸ್ಕೃತಿ ಇಲ್ಲ ಎಂದು ಹರಿಹಾಯ್ದಿದ್ದಾರೆ.


ಅನಂತಕುಮಾರ್ ಹೆಗಡೆ, ಐದು ಬಾರಿ ಲೋಕಸಭಾ ಸದಸ್ಯರಾಗಿದ್ದರೂ ಕ್ಷೇತ್ರಕ್ಕೆ ಏನೂ ಮಾಡ್ಲಿಲ್ಲ. ಧರ್ಮ,ಜಾತಿ ಹೆಸರಲ್ಲಿ ಜನರನ್ನ, ಅವರ ಭಾವನೆಗಳನ್ನ ಕೆರಳಿಸಲಾಗ್ತಿದೆ. ಅನಂತಕುಮಾರ್ ಎಲ್ಲಾ ಕಡೆ ಬರೀ ಬೆಂಕಿ ಹಾಕ್ತಾರೆ, ನಮ್ಮೂರಿಗೂ ಬಂದಿದ್ರು, ಹುಣಸೂರಿಗೆ ಬೆಂಕಿ ಹಾಕಲು ಬಂದಿದ್ರು. ನಾನು ಹುಣಸೂರಿನಲ್ಲಿ ಬಿಜೆಪಿಯವರು ಬೆಂಕಿ ಹಾಕಲು ಬಿಡಲಿಲ್ಲ. ಯಾವ್ದೇ ಹಿಂಸೆ ನಡೀಬಾರ್ದು ಅಂತಾ ಡಿಸಿ, ಎಸ್​ಪಿಗೆ ಹೇಳಿದ್ದೆ. ಹನುಮ ಜಯಂತಿ ಮಾಡಬೇಡಿ ಅಂತಾ ನಾನು ಹೇಳೋದಿಲ್ಲ. ಹನುಮ ಜಯಂತಿ, ರಾಮನವಮಿ ಇವರದೇನು ಗುತ್ತಿಗೇನಾ? ಎಂದು ಟೀಕಿಸಿದರು.

 

 

ಎಂದಿನಂತೆ ತಮ್ಮ ಹಾಸ್ಯ ಮಿಶ್ರಿತ ವ್ಯಂಗ್ಯ ಮಾತುಗಳಲ್ಲಿ ಬಿಜೆಪಿ ನಾಯಕರನ್ನು ಟೀಕಿಸಿದ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪನವರೇ ನೀವೇನ್​​ ಮಾಡಿದ್ದೀರಿ..? ಎರಡೇ ಎರಡು ಕಾರ್ಯಕ್ರಮ ಯಡ್ಯೂರಪ್ಪ ಮಾಡಿದ್ದುಒಂದು ಸೈಕಲ್​​​ ಕೊಟ್ಟಿದ್ದು.ಇನ್ನೊಂದು ಸೀರೆ ಕೊಟ್ಟಿದ್ದು. ಸೈಕಲ್​​ ಕೊಟ್ಟೆ.ಸೀರೆ ಕೊಟ್ಟೆ..ಅನ್ನೋದ್ ಬಿಟ್ಟು ಏನೂ ಹೇಳ್ಲಿಲ್ಲ. ಮೂರನೇದು.. ಜೈಲಿಗೋಗಲಿಲ್ವಾ ಅಂತಾ ಹೇಳ್ಬೇಕಿತ್ತು.

ಜನ ಜೈಲಿಗೋದೋರ್ನ ಮರೀತಾರೆ..ಕೆಲಸ ಮಾಡ್ದೋರ್ನ ಮರೆಯಲ್ಲ ಎಂದು ಬಿಎಸ್​ವೈಯನ್ನು ಸಿದ್ದು ಟೀಕಿಸಿದರು. ಒಟ್ಟಿನಲ್ಲಿ ಬಿಜೆಪಿ ನಾಯಕರ ವಿರುದ್ಧ ಸಿದ್ದು ವಾಗ್ದಾಳಿ ಮುಂದುವರೆದಿದ್ದು, ಎಲೆಕ್ಷನ್​ ವೇಳೆಗೆ ಈ ವಾಕ್ಸಮರಗಳು ಯಾವ ಹಂತ ತಲುಪುತ್ತೆ ಕಾದು ನೋಡಬೇಕಿದೆ.