ಸ್ಟೀಲ್ ಬ್ರಿಡ್ಜ್ ಲಂಚಕ್ಕೆ ಲೇಔಟ್ !! ಸಿಎಂ ಸಿದ್ದರಾಮಯ್ಯ ತಲೆಗೆ ಬರಲಿದೆ ಅಧಿಕಾರಿಗಳ ಕೋಟಿ ಕೋಟಿ ಲಂಚದ ಹಗರಣ !!

Siddu's Government Gifted to Steel Bridge Company.
Siddu's Government Gifted to Steel Bridge Company.

ಸ್ಟೀಲ್ ಬ್ರಿಡ್ಜ್ ಹೆಸರಲ್ಲಿ ಸರ್ಕಾರ ಪಡೆದಿದ್ದು ಕೋಟಿಗಟ್ಟಲೇ ‘ಕಮಿಷನ್’ ಪಡೆದ ಆರೋಪಕ್ಕೊಳಗಾಗಿದ್ದ ಸರಕಾರ ಇದೀಗ ಮತ್ತೆ ವಿವಾದಕ್ಕೆ ಒಳಗಾಗಿದೆ.

ad

300 ಕೋಟಿಯಿಂದ 1600 ಕೋಟಿಗೆ ಅನುದಾನ ಏರಿಕೆಯ ಸ್ಟೀಲ್ ಬ್ರಿಡ್ಜ್ ಹಿಂದೆ ಬೃಹತ್ ಲಂಚದ ಕೈವಾಡ ಇದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿದ್ದವು. ವಿಧಾನಸಭೆಯಲ್ಲೂ ಈ ಆರೋಪ ಭಾರೀ ಚರ್ಚೆಗೆ ಈಡಾಗಿತ್ತು. ಕೊನೆಗೆ ಜನಸಾಮಾನ್ಯರ ಬಾರೀ ವಿರೋಧದಿಂದ ಸ್ಟೀಲ್ ಬ್ರಿಡ್ಜ್ ಯೋಜನೆ ರದ್ದಾಗಿ ಹೋಯ್ತು. ಆದರೆ ಅಷ್ಟೊತ್ತಿಗಾಗಲೇ ಎಲ್ ಅಂಡ್ ಟಿ ಕಂಪನಿ ಸ್ಟೀಲ್ ಬ್ರಿಡ್ಜ್ ಗುತ್ತಿಗೆ ಪಡೆದುಕೊಂಡು ಸಿದ್ದತೆ ಮಾಡಿಕೊಂಡಿತ್ತು‌.

1600 ಕೋಟಿ ಸ್ಟೀಲ್ ಬ್ರಿಡ್ಜ್​ನಿಂದ ಸರ್ಕಾರಕ್ಕೆ 300 ಕೋಟಿ ಲಂಚವನ್ನು ಎಲ್ ಅ್ಯಂಡ್ ಟಿ ಕಂಪನಿ ನೀಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಸ್ಟೀಲ್ ಬ್ರಿಡ್ಜ್ ಕ್ಯಾನ್ಸಲ್ ಆಗಿದ್ರಿಂದ ಕಮಿಷನ್ ಪಡೆದ ಸರ್ಕಾರಕ್ಕೆ ತೀವ್ರ ಇಕ್ಕಟ್ಟು ಎದುರಾಗಿತ್ತು. ಆದ್ದರಿಂದಲೇ ಸೇತುವೆ ಬದಲಿಗೆ ಸಿಕ್ತು ಲೇಔಟ್ ನಿರ್ಮಾಣದ ‘ಭಾಗ್ಯ’ವನ್ನು ಸಿಎಂ ಸಿದ್ದರಾಮಯ್ಯ ಸರಕಾರದ ಅಧಿಕಾರಿಗಳು ಸಿದ್ದಗೊಳಿಸಿದ್ದಾರೆ. ಸ್ಟೀಲ್ ಬ್ರೀಡ್ಜ್ ಟೆಂಡರ್ ಬದ್ಲು ಕೆಂಪೇಗೌಂಡ ಲೇಔಟ್​ನಲ್ಲಿ 1 ಸಾವಿರ ಕೋಟಿಯ ಗುತ್ತಿಗೆಯನ್ನು ಎಲ್ ಅಂಡ್ ಟಿ ಕಂಪನಿಗೆ ನೀಡಲಾಗಿದೆ.

ಕೆಂಪೇಗೌಡ ಲೇಔಟ್​ನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಟೆಂಡರ್ ಕರೆದಿದ್ದು,
ರಾತ್ರೋರಾತ್ರಿ ಎಲ್ ಅಂಡ್ ಟಿ ಕಂಪನಿಗೆ ಸಾವಿರ ಕೋಟಿ ಟೆಂಡರ್ ಸಿದ್ದಗೊಳಿಸಲಾಗಿದೆ. ಬಿಡಿಎ ಅಧ್ಯಕ್ಷ ವೆಂಕಟೇಶ್, ಬಿಡಿಎ ಆಯುಕ್ತ ರಾಕೇಶ್ ಸಿಂಗ್, ಚೀಫ್ ಇಂಜೀನಿಯರ್ ರವೀಂದ್ರ ಬಾಬು, ಇಇ ರಘು ಸೇರಿಕೊಂಡು ಈ ರೀತಿ ಎಲ್ ಅ್ಯಂಡ್ ಟಿ ಕಂಪನಿಯ ಲಂಚಕ್ಕೆ ಪುನರ್ವಸತಿ ಕಲ್ಪಿಸಿದ್ದಾರೆ. ಸಿದ್ದರಾಮಯ್ಯ ಆಪ್ತ ಬಿಡಿಎ ಇಇ ರಘು ಟೆಂಡರ್ ಭಾಗ್ಯದ ಮೂಲ ಪುರುಷರಾಗಿದ್ದಾರೆ.‌ ಕಳೆದ 5 ವರ್ಷಗಳಿಂದ ಕೆಂಪೇಗೌಡ ಲೇಜೌಟ್​ನಲ್ಲಿ ಇಇ ಆಗಿರೋ ರಘು, 500 ಕೋಟಿ ಟೆಂಡರ್​ನ್ನು 300 ಕೋಟಿಗೆ ಹೆಚ್ಚಿಸಿ 806 ಕೋಟಿ ಟೆಂಡರ್ ಕರೆದಿದ್ದಾರೆ.

ಟೆಕ್ನಿಕಲ್ ಬಿಡ್​ನಲ್ಲಿ ನೂರಾರು ಕಂಪನಿಗಳನ್ನು ರಿಜೆಕ್ಟ್ ಮಾಡಿ ಎಲ್ ಅಂಡ್ ಟಿಗೆ ಟೆಂಡರ್ ನೀಡಲಾಗಿದೆ. ಎಲ್ ಅ್ಯಂಡ್ ಟಿಗೆ ಟೆಂಡರ್ ಕರೆದು ವರ್ಕ್ ಆರ್ಡರ್ ನೀಡಿದ್ದೆ ಕಡು ಭ್ರಷ್ಟ ಇಇ ರಘು ! ಈಗಾಗಲೇ ಬಿಡಿಎಯ ಭ್ರಷ್ಟ ಅಧಿಕಾರಿಗಳಾದ ಸಿಇ ರವೀಂದ್ರ ಬಾಬು ಹಾಗು ಇಇ ರಘು ಮೇಲೆ ಐಟಿ ಕಣ್ಣು ಬಿದ್ದಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇವರಿಬ್ಬರ ಮೇಲೆ ಯಾವಾಗ ಬೇಕಾದ್ರೂ ಇಡಿ, ಸಿಬಿಐ ತನಿಖೆ ನಡೆಸಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯನವ್ರೇ ಮೊದಲು ಟೆಂಡರ್​ನ್ನು ರದ್ದುಪಡಿಸಿ ರಘುವಿನಂತಹ ಅಧಿಕಾರಿಗಳು ಹೆಣದ ಲಂಚದ ಬಲೆಯಿಂದ ಹೊರಬನ್ನಿ. ಇಲ್ಲದೇ ಇದ್ದರೆ ಈ ಹಗರಣ ಐಟಿ, ಇಡಿ, ಸಿಬಿಐ ತನಿಖೆಗೆ ಒಳಪಟ್ಟು ಈ ಅಧಿಕಾರಿಗಳ ಜೊತೆ ತಮ್ಮ ಹೆಸರೂ ಥಳಕು ಹಾಕಿಕೊಳ್ಳಲಿದೆ. ಅದಕ್ಕೂ ಮುಂಚೆ ಸಿಎಂ ಸಿದ್ದರಾಮಯ್ಯ ಎಚ್ಚೆತ್ತುಕೊಂಡರೆ ಒಳ್ಳೆಯದು.