ಬಿಜೆಪಿಯಲ್ಲಿ ಮತ್ತೆ ಭಿನ್ನಮತ- ಟಿಕೇಟ್​​ಗೆ ಪಟ್ಟು ಹಿಡಿದ ಸೋಮಣ್ಣ ಬೇವಿನಮರದ್​!

Somanna M. Bevinamarada Outrage Against Basavaraj Bommai

ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಟಿಕೇಟ್​ ಫೈಟ್​​ ಹಾಗೂ ಅಸಮಧಾನ ಭುಗಿಲೆದ್ದಿದೆ.

ad


ಪಕ್ಷದ ಮುಖಂಡರು ಟಿಕೇಟ್​ ಆಕಾಂಕ್ಷಿಗಳ ಅಸಮಧಾನ ಬಗೆಹರಿಸಲು ಸರ್ಕಸ್​ ಆರಂಭಿಸಿದ್ದಾರೆ. ಅದರಲ್ಲೂ ಬಿಜೆಪಿಯಲ್ಲಂತೂ ಪ್ರತಿನಿತ್ಯ ಅಸಮಧಾನ ಹೆಚ್ಚುತ್ತಲೇ ಇದ್ದು, ಹಾಲಪ್ಪ ನಂತರ ಇದೀಗ ಸೋಮಣ್ಣ ಬೇವಿನಮರದ್​ ಅಸಮಧಾನಗೊಂಡಿದ್ದಾರೆ.
ಬಿಜೆಪಿಯಲ್ಲಿ ಈಗಾಗಲೇ ಟಿಕೇಟ್​​ಗಾಗಿ ಪಟ್ಟು ಹಿಡಿದಿದ್ದ ಹಾಲಪ್ಪ ಕಾಂಗ್ರೆಸ್​ನತ್ತ ಮುಖಮಾಡಿದ್ದಾರೆ ಎಂಬ ವದಂತಿಗಳು ದಟ್ಟವಾಗುತ್ತಿರುವ ಬೆನ್ನಲ್ಲೇ ಸೋಮಣ್ಣ ಬೇವಿನಮರದ್​ ಟಿಕೇಟ್​ಗಾಗಿ ಪಟ್ಟು ಹಿಡಿದಿದ್ದಾರೆ.

ಹಾವೇರಿ ಶಿಗ್ಗಾವಿ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿರುವ ಸೋಮಣ್ಣ ಬೇವಿನಮರದ್​ ಟಿಕೇಟ್ ತನಗೇ ನೀಡುವಂತೆ ಪಟ್ಟು ಹಿಡಿದಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿರುವ ಸೋಮಣ್ಣ ಬೇವಿನಮರದ್​ ಇದೀಗ ಎಮ್​ಎಲ್​​ಎ ಸೀಟಗೆ ಪಟ್ಟು ಹಿಡಿದಿದ್ದು, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ಎಮ್​ಎಲ್​ಸಿ ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ಭಾರಿ ಶಿಗ್ಗಾವಿ ಕ್ಷೇತ್ರದಿಂದ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಸ್ಪರ್ಧಿಸಿ ಗೆಲುವು ಪಡೆದಿದ್ದಾರೆ. ಆದರೇ ಇದೀಗ ಸೋಮಣ್ಣ ಬೇವಿನಮರದ್​ ಟಿಕೇಟ್​ಗಾಗಿ ಬಿಗಿಪಟ್ಟು ಹಿಡಿದಿರೋದು ಬಿಜೆಪಿ ನಾಯಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.