ಮಧು ಬಂಗಾರಪ್ಪ ವಿರುದ್ಧ ದೌರ್ಜನ್ಯದ ಆರೋಪ- ಪ್ರೆಸ್ಮಿಟ್​ನಲ್ಲೇ ಕಣ್ಣೀರಿಟ್ಟ ತಾ.ಪಂ ಅಧ್ಯಕ್ಷೆ ನಯನಾ!

Zilla Panchayat President Accused against Madhu Bangarappa.
Zilla Panchayat President Accused against Madhu Bangarappa.

ಸೊರಬದಲ್ಲಿ ಅಣ್ಣ-ತಮ್ಮಂದಿರ ರಾಜಕಾರಣ ಜೋರಾಗಿದೆ. ಹೌದು ಮಧು ಬಂಗಾರಪ್ಪ ಮೇಲೆ ಕುಮಾರ ಬಂಗಾರಪ್ಪ ಸಾಕಷ್ಟು ಟೀಕೆ ಮಾಡಿದ ಬೆನ್ನಲ್ಲೇ ಇದೀಗ ಕುಮಾರ ಬಂಗಾರಪ್ಪ ಉಪಸ್ಥಿತಿಯಲ್ಲೇ ಮಧು ಬಂಗಾರಪ್ಪ ವಿರುದ್ಧ ತಾ.ಪಂ ಅಧ್ಯಕ್ಷೆಯೊಬ್ಬಳ್ಳು ಕಣ್ಣಿರಿಟ್ಟು ಆರೋಪ ಎಸಗಿದ ಘಟನೆ ಶಿವಮೊಗ್ಗದ ಸೊರಬದಲ್ಲಿ ನಡೆದಿದೆ.

ad

ಹೌದು ಸೊರಬದಲ್ಲಿ ಜೆಡಿಎಸ್​ನಿಂದಲೇ ತಾಲೂಕು ಪಂಚಾಯ್ತಿ ಅಧ್ಯಕ್ಷಯಾಗಿರುವ ನಯನ ಶ್ರೀಪಾದ್​ರವರು ಶಾಸಕ ಮಧು ಬಂಗಾರಪ್ಪ ದೌರ್ಜನ್ಯ ಆರೋಪ ಮಾಡಿದ್ದಾರೆ. ಅಲ್ಲದೇ ಮಧು ಬಂಗಾರಪ್ಪ ದೌರ್ಜನ್ಯದ ವಿವರಣೆ ನೀಡಿ ಕಣ್ಣಿರಿಟ್ಟರು. ಕಳೆದ ಎರಡು ದಿನಗಳ ಹಿಂದೆ ಏಪ್ರಿಲ್ 4 ರಂದು ಸೊರಬ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಾಳಗುಪ್ಪದಲ್ಲಿ ಬಿಜೆಪಿ ಮುಖಂಡ ಶ್ರೀಪಾದ್ ಹೆಗಡೆಯವರು ತಮ್ಮ ಮೇಲೆ ಜೆಡಿಎಸ್​ನ ಲೋಕೇಶ್ ಎಂಬುವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತಂತೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕುಮಾರ ಬಂಗಾರಪ್ಪ ಮತ್ತು ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ತಮ್ಮ ಪತಿ ಶ್ರೀಪಾದ್ ಹೆಗಡೆಯವರ ಮೇಲೆ ಜೆಡಿಎಸ್​ನವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವೋಟ್ ಕೇಳಲು ಹೋದಾಗ ಹಲ್ಲೆ ಮಾಡಿದ್ದಾರೆ. ಶಾಸಕ ಮಧು ಬಂಗಾರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ತಾಲೂಕು ಪಂಚಾಯ್ತಿ ಸಭೆಗಳಲ್ಲೂ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ನಯನಾ ಕಣ್ಣೀರಿಟ್ಟರು. ಇದು ನಿಜಕ್ಕೂ ದೌರ್ಜನ್ಯವೋ ಅಥವಾ ಅಣ್ಣ-ತಮ್ಮಂದಿರ ರಾಜಕಾರಣಕ್ಕೆ ಇವರೆಲ್ಲ ಬಳಕೆಯಾಗುತ್ತಿದ್ದಾರೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.