ಕನ್ನಡಿಗರ ಎಳ್ಳು ಬೆಲ್ಲ ಸಂಭ್ರಮಕ್ಕೆ ಎಳ್ಳು ನೀರು ಬಿಟ್ಟ ತಮಿಳುನಾಡು ಸಿಎಂ !! ಬಾಕಿ ಉಳಿಸಿಕೊಂಡ ನೀರು ಬಿಡುವಂತೆ ಸಿದ್ದರಾಮಯ್ಯಗೆ ಸಂಕ್ರಾಂತಿಯ ಶುಭಾಶಯ ಪತ್ರ ಕಳುಹಿಸಿದ ಪಳನಿಸ್ವಾಮಿ !!

Tamil Nadu CM K. Palaniswami Wrote Letter to CM Siddaramaiah.
Tamil Nadu CM K. Palaniswami Wrote Letter to CM Siddaramaiah.

ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಮಿಳುನಾಡು ಮುಖ್ಯಮಂತ್ರಿ ಇ ಪಳನಿಸ್ವಾಮಿ ಸಂಕ್ರಾಂತಿ ಹಬ್ಬಕ್ಕೆ ಶುಭ ಕೋರಿ ಪತ್ರ ಬರೆದಿದ್ದಾರೆ.

ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದು ಒಕ್ಕಣೆ ಇರುವ ಪತ್ರವನ್ನು ಓದುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಕ್ ಆಗಿದೆ. ಕೆಲದಿನಗಳಿಂದ ತಣ್ಣಗಿದ್ದ ಕಾವೇರಿ ನೀರಿನ ವಿವಾದವನ್ನು ತಮಿಳುನಾಡು ಮತ್ತೆ ಆರಂಭಿಸಿರುವ ಮುನ್ಸೂಚನೆ ಆ ಪತ್ರದಲ್ಲಿತ್ತು. ಸಂಕ್ರಾಂತಿ ಶುಭಾಶಯ ಕೋರುವ ನೆಪದಲ್ಲಿ ಸಿಎಂ ಸಿದ್ದರಾಮಯ್ಯಗೆ ತಮಿಳುನಾಡು ಸಿಎಂ ಪಳನಿಸ್ವಾಮಿ ನೀರು ಕೋರಿ ಪತ್ರ ಬರೆದಿದ್ದಾರೆ. 68.224 ಟಿಎಂಸಿ ಅಡಿ ನೀರು ಬಿಡುವಂತೆ ಪತ್ರದಲ್ಲಿ ಪಳನಿ ಮನವಿ ಮಾಡಿದ್ದಾರೆ. 2007 ಫೆಬ್ರವರಿ 5 ರಂದು ಕಾವೇರಿ ಟ್ರಿಬ್ಯುನಲ್ ಆದೇಶ ಪಾಲನೆ ಆಗಿಲ್ಲ.

 

 

ಟ್ರಿಬ್ಯುನಲ್ ಆದೇಶದಂತೆ ಪ್ರತಿವರ್ಷ 192 ಟಿಎಂಸಿ ಅಡಿ ನೀರು ಹರಿಸಬೇಕು. ಆದರೆ 2018 ಜನವರಿ 9ರವರೆಗೆ 111 ಟಿಎಂಸಿ ಅಡಿ ನೀರು ಮಾತ್ರ ತಮಿಳುನಾಡಿಗೆ ಬಂದಿದೆ. ಉಳಿದ ನಮ್ಮ ಪಾಲನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಪಳನಿಸ್ವಾಮಿ ಪತ್ರದಲ್ಲಿ ಪಟ್ಟು ಹಿಡಿದಿದ್ದಾರೆ. ನಿಮ್ಮ ಜಲಾಶಯಗಳಲ್ಲಿ ನೀರಿನ ಕೊರತೆ ನಡುವೆ ನಮಗೆ 15 ಟಿಎಂಸಿ ಅಡಿ ನೀರು ನೀಡಬಹುದು. ತತ್ ಕ್ಷಣದಿಂದಲೇ 7 ಟಿಎಂಸಿ ನೀರು ಹರಿಸಲು ನಿಮ್ಮ ಅಧಿಕಾರಿಗಳಿಗೆ ಸೂಚಿಸಿ. ತಮಿಳುನಾಡಿನಲ್ಲಿ ಬೆಳೆಗೆ ನೀರಿನ ಅಭಾವವಿದ್ದು ತಕ್ಷಣ ನಮ್ಮ ಪಾಲಿನ ನೀರನ್ನು ಹರಿಸಿ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.