ಮತ್ತೆ ಪೋನ್ ಕಂಟಕ ತಂದುಕೊಂಡ ಮಾಜಿಸಚಿವ- ಪಿಎಸ್ ಐ ಗೆ ಮತ್ತೆ ಧಮಕಿ ಹಾಕಿ ಸುದ್ದಿಯಾದ್ರು ಪರಮೇಶ್ವರ್!

Threat to PSI in police station premises at movie style
Threat to PSI in police station premises at movie style

ಸಚಿವರ ಪೋನ್ ರಿಸೀವ್ ಮಾಡದಕ್ಕೆ ಡಿವೈಎಸ್ ಪಿ ಅನುಪಮಾ ಶಣೈಗೆ ಹಿಂದೆ ಪಿ ಟಿ ಪರಮೇಶ್ವರ್ ನಾಯ್ಕ ದಮ್ಕಿ ಹಾಕಿದ ಸುದ್ದಿ ಸಾಕಷ್ಟು ಕೋಲಾಹಲ ಸೃಷ್ಟಿ ಮಾಡಿತ್ತು.

ad

ಆ ಘಟನೆಯಿಂದಲೇ ಸಚಿವ ಸ್ಥಾನ ಕಳೆದುಕೊಂಡ ಆ ಮಾಜಿ ಸಚಿವರು ಇದೀಗ ಮತ್ತೊಮ್ಮೆ ಸಿನಿಮಾ ಸ್ಟೈಲ್ ನಲ್ಲೆ ಪೊಲೀಸ್ ಠಾಣೆಯ ಆವರಣದಲ್ಲೆ ಪಿಎಸ್ ಐಗೆ ದಮ್ಕಿ ಹಾಕಿದ ಘಟನೆ ನಡೆದಿದೆ.
ಇಂತಹ ಮಹಾನ ಕಾರ್ಯ ಮಾಡಿದ್ದು ಮತ್ಯಾರು ಅಲ್ಲ ಅದೇ ಮಾಜಿ ಸಚಿವ ಹಾಲಿ ಹಡಗಲಿ ಶಾಸಕ ಪರಮೇಶ್ವರ ನಾಯ್ಕ್ ಪಿಎಸ್ಐಗೆ ದಮ್ಕಿ ಹಾಕಿದ್ದಾರೆ, ಹಿರೇಹಡಗಲಿ ಠಾಣೆಯ ಪಿಎಸ್ ಐ ರಾಘವೇಂದ್ರ ರವರಿಗೆ ಶಾಸಕ ಮಾಜಿ ಸಚಿವ ಪರಮೇಶ್ವರ ನಾಯ್ಕ್ ದಮ್ಕಿ ಹಾಕಿ ಮತ್ತೆ ದರ್ಪ ಮೆರೆದಿದ್ದಾರೆ, ಹಿರೇಹಡಗಲಿ ಗ್ರಾಮದ ಸಹೋದರರಿಬ್ಬರು ಕುಲ್ಲಕ್ ಕಾರಣಕ್ಕೆ ಜಗಳ ಮಾಡಿಕೊಂಡಿದ್ದರು. ಮಾಜಿ ಸಚಿವರ ಬೆಂಬಲಿಗ ತಮ್ಮ ಅಣ್ಣನಿಗೆ ಹೊಡೆದ ಪ್ರಕರಣ ಠಾಣೆಯ ಮೇಟ್ಟೇರಿತ್ತು, ಹೀಗಾಗಿ ಬೆಂಬಲಿಗನ ಪರವಾಗಿ ಹಿರೇಹಡಗಲಿ ಠಾಣೆಗೆ ಹೋದ ಪರಮೇಶ್ವರ ನಾಯ್ಕ್ ನಾನು ಹೇಳಿದ ಹಾಗೆ ರಾಜಿ ಮಾಡು.

ನನ್ನ ಬೆಂಬಲಿಗನನ್ನು ಯಾಕೆ ಹೊಡೆದೆ ಅಂತಾ ಪಿಎಸ್ಐ ಗೆ ದಮ್ಕಿ ಹಾಕಿದ್ದಾರೆ,
ಅಲ್ಲದೇ ಎಲ್ಲ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲೆ ನಡೆದ ಈ ಘಟನೆಯ ಬಗ್ಗೆ ಪಿಎಸ್ ಐ ರಾಘವೇಂದ್ರ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ಮುಟ್ಟಿಸಿದ್ದಾರೆ, ಆದ್ರೆ ಪಿಎಸ್ ಐ ರಕ್ಷಣೆ ಗೆ ನಿಲ್ಲಬೇಕಾದ ಹಿರಿಯ ಅಧಿಕಾರಿಗಳು ಇದೂ ಚುನಾವಣೆ ಸಮಯ. ಗದ್ದಲ ಮಾಡಿಕೊಳ್ಳುವುದು ಬೇಡವೆಂದ ಪರಿಣಾಮ ಪಿಎಸ್ಐ ಸುಮ್ಮನಾಗಿದ್ದಾರೆ, ಆದ್ರೆ ಸ್ಥಳಿಯ ಪತ್ರಕರ್ತರೊಬ್ಬರ ಬಳಿ ಪಿಎಸ್ ಐ ಘಟನೆಯ ಬಗ್ಗೆ ಮಾತಾಡಿದ್ದು ಪ್ರಕರಣ ಕೈ ಬಿಟ್ಟು ಬಿಡಿ ಎಂದು ಅಲವತ್ತುಕೊಂಡಿದ್ದಾರೆ.