ಇಂದು ಜಮೀರ್, ಅಖಂಡ, ಚೆಲುವರಾಯಸ್ವಾಮಿ ಭವಿಷ್ಯ ನಿರ್ಧಾರ !! ಸೋತ ಅಭ್ಯರ್ಥಿಗಳ ಟಿಕೆಟ್ ಕಂಟಕ !!

TICKET- Decision about 7 former MLAs belonging to Congress from JDS
TICKET- Decision about 7 former MLAs belonging to Congress from JDS

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರುಗಳ ಸಭೆ ನಡೆಯಲಿದೆ. ಸಭೆಯಲ್ಲಿ 2013 ರಲ್ಲಿ ಸೋತ ಕೈ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಸಂಬಂಧ ಈ ಸಭೆ ನಡೆಸಲಾಗ್ತಿದೆ.

ad

2013 ರಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದ ಏಳು ಮಾಜಿ ಶಾಸಕರ ಕ್ಷೇತ್ರಗಳ ಹೆಸರುಗಳೂ ಇವೆ.ಜೆಡಿಎಸ್ ನಿಂದ ರಮೇಶ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಎಚ್.ಸಿ.ಬಾಲಕೃಷ್ಣ (ಮಾಗಡಿ), ಚೆಲುವರಾಯಸ್ವಾಮಿ (ನಾಗಮಂಗಲ), ಇಕ್ಬಾಲ್ ಅನ್ಸಾರಿ (ಗಂಗಾವತಿ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ, ಬೆಂಗಳೂರು) ಶಾಸಕ ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ) ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರು.

ಇವರ ವಿರುದ್ದ ಸ್ಪರ್ಧಿಸಿ ಸೋತಿದ್ದ ಕೈ ಪರಾಜಿತ ಅಭ್ಯರ್ಥಿಗಳು ಈ ಬಾರಿ ಅವರದ್ದೇ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದಾರೆ.ಅರ್ಜಿ ಸಲ್ಲಿಸಿರುವ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ 2013 ರ ಕೈ ಪರಾಜಿತ ಅಭ್ಯರ್ಥಿಗಳ ಹೆಸರನ್ನು ಪರಿಶೀಲನೆ ಮಾಡಿ ಇಂದು ಉಸ್ತುವಾರಿ ಸಚಿವರ ಸಭೆ ಹೈಕಮಾಂಡ್ ಗೆ ಶಿಫಾರಸ್ಸು ಮಾಡಲಿದೆ. ಏಳು ಸೇರ್ಪಡೆ ಶಾಸಕರ ಕ್ಷೇತ್ರಗಳಲ್ಲಿ ಪರಾಜಿತ ಕೈ ಅಭ್ಯರ್ಥಿಗಳ ಹೆಸರನ್ನು ಕೈ ಬಿಡುತ್ತಾರೋ ಅಥವಾ ಅವರ ಹೆಸರನ್ನೂ ಸೇರಿಸಿ ಹೈಕಮಾಂಡ್ ಗೆ ಶಿಫಾರಸ್ಸು ಮಾಡುತ್ತಾರೋ ಅನ್ನೋದರ ಮೇಲೆ ಅವರ ರಾಜಕೀಯ ಭವಿಷ್ಯ ನಿಂತಿದೆ.