ಯಮಕನಮರಡಿಯಲ್ಲಿ ಕಾಂಗ್ರೆಸ್​ ಸೀಟ್​​ ಯಾರಿಗೆ? ಕುತೂಹಲ ಮೂಡಿಸಿದ ಜಾರಕಿಹೊಳಿ ಬದ್ರರ್ಸ್​ ಫೈಟ್!!​​

Ticket Fighting: Ramesh Jarkiholi to give tTicket Fighting: Ramesh Jarkiholi to give tickets to Lakhan Jarakki Plan.
Ticket Fighting: Ramesh Jarkiholi to give tickets to Lakhan Jarakki Plan.

ಬೆಳಗಾವಿಯ ಬಹುತೇಕ ವಿಧಾನಸಭಾ ಕ್ಷೇತ್ರಗಳು ಯಾವಾಗಲು ರಾಜಕೀಯದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವ ಜಾರಕಿಹೊಳಿ ಸಹೋದರರ ಪಾಲು. ಆದರೇ ಈ ಭಾರಿ ಸಹೋದರರಲ್ಲೇ ದಾಯಾದಿ ಕಲಹ ಆರಂಭವಾಗಿದ್ದು, ಸತೀಶ್​ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ನಡುವೆ ಯಮಕನಮರಡಿ ಕ್ಷೇತ್ರಕ್ಕಾಗಿ ಜಿದ್ದಾಜಿದ್ದಿನ ಹೋರಾಟ ಆರಂಭವಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೆರಿ ತಾಲೂಕಿನ ಯಮಕನಮರಡಿ ಎಸ್ ಟಿ ‌ಮೀಸಲು ಕ್ಷೇತ್ರದಿಂದ 2008 ಮತ್ತು 2013 ರಲ್ಲಿ‌ ಕಾಂಗ್ರೆಸ್ ನಿಂದ ಸತೀಶ ಜಾರಕಿಹೊಳಿ ಜಯಶಾಲಿಯಾಗಿದ್ದು, ಮಂತ್ರಿಯಾಗಿ ಸಹ ಕಾರ್ಯನಿರ್ವಹಿಸಿದ್ದಾರೆ. ಆದರೇ ಗೋಕಾಕ ವಿಭಜನೆಯ ಸಂದರ್ಭದಲ್ಲಿ ಯಮಕನಮರಡಿ ಕ್ಷೇತ್ರದಿಂದ ಚುನಾವಣೆಯ ಕಣಕ್ಕಿಳಿಯಲು ಸತೀಶ್ ಸಹೋದರ ಲಖನ್ ಜಾರಕಿಹೊಳಿ ಹರಸಾಹಸಪಟ್ಟಿದ್ದರು. ಆಗ ಹಿರಿಯರ ಸಮಾಲೋಚನೆಯಿಂದ ಲಖನ್​ ಆ ಕ್ಷೇತ್ರವನ್ನು ಸಹೋದರನ ಸ್ಪರ್ಧೆಗೆ ಬಿಟ್ಟುಕೊಟ್ಟಿದ್ದರು.
ಆದರೇ ಕಳೆದ ಒಂದು ವರ್ಷದಿಂದ ಸತೀಶ್ ಮತ್ತು ಲಖನ ಜಾರಕಿಹೊಳಿ ಮಧ್ಯೆ ಮನಸ್ಥಾಪವಾಗಿದ್ದು, ಈಗ ಲಖನ್ ಜಾರಕಿಹೊಳಿ ಸಹೋದರನ ವಿರುದ್ಧವೇ ತೊಡೆತಟ್ಟಿ ನಿಂತಿದ್ದು, ಸತೀಶ್ ಸ್ಥಾನ ಕಸಿದುಕೊಂಡು ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಲಖನ್​ ಈ ಪ್ಲಾನ್​ಗೆ ರಮೇಶ್ ಜಾರಕಿಹೊಳಿ ಸಪೋರ್ಟ್​ ಇದೆ ಎನ್ನಲಾಗುತ್ತಿದೆ.

 

 

ಸತೀಶ್​ ವಿರುದ್ಧ ನಿಂತು ಲಖನ್ ಗೆ ಸಪೋರ್ಟ್​ ಮಾಡುತ್ತಿರುವ ರಮೇಶ್ ಜಾರಕಿಹೊಳಿ ಲಖನ್​ಗೆ ಟಿಕೇಟ್​ ಕೊಡಿಸಲು ಹೈಕಮಾಂಡ್​ಗೆ ಲಾಭಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಲಖನ್​ ಚುನಾವಣೆಗೆ ನಿಲ್ಲಲೇ ಬೇಕೆಂದು ನಿರ್ಧರಿಸಿರುವ ಲಖನ್​​ ಜಾರಕಿಹೊಳಿ ಕಾಂಗ್ರೆಸ್​​ನಿಂದ ಸೀಟ್​ ಸಿಗದೇ ಇದ್ದರೇ ಬಿಜೆಪಿ ಬಾಗಿಲು ತಟ್ಟಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಒಟ್ಟಿನಲ್ಲಿ ಯಮಕನಮರಡಿ ಸೇರಿದಂತೆ ಬೆಳಗಾವಿಯ ಈ ಭಾರಿಯ ಚುನಾವಣೆ ಸಹೋದರರ ಸವಾಲ್​ ಆಗಲಿದೆ.