ಮೋದಿಗೇ ಇಕ್ಕಟ್ಟು ತಂದಿಟ್ಟ ಸಿದ್ದರಾಮಯ್ಯರ ಕನ್ನಡ ಪೊಲಿಟಿಕ್ಸ್ !! ಕನ್ನಡದ ದ್ವಜಕ್ಕಿನ್ನು ಸೆಲ್ಯೂಟ್ ಹೊಡೆಯುವುದು ಕಾನೂನು !!

Tricolor new Flag Ready for the State.

ಸಿಎಂ ಸಿದ್ದರಾಮಯ್ಯ ಹಳ್ಳಿ ಸ್ಟೈಲ್ ನ ವರ್ಚಸ್ಸು ಹೊಂದಿದ್ದರೂ ರಾಜಕೀಯವಾಗಿ ಹೊಸ ಹೊಸ ಪಟ್ಟುಗಳನ್ನ ದಾಳವನ್ನಾಗಿ ಬಿಡುವುದರಲ್ಲಿ ಯಾವ ರಾಜಕೀಯ ಚತುರರಿಗಿಂತಲೂ ಕಡಿಮೆ ಏನಿಲ್ಲ.

ad

ಇದೀಗ ಪ್ರತ್ಯೇಕ ನಾಡಧ್ವಜದ ಅಸ್ತ್ರ ಬಳಸಿಕೊಳ್ಳಲು ಮುಂದಾಗಿರುವ ಸಿಎಂ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ ಮಾಡಲುಹೊರಟಿದ್ದಾರೆ.ಇಂದು ತನ್ನ ಗೃಹ ಕಚೇರಿ ಕೃಷ್ಣಾದಲ್ಲಿ ಕನ್ನಡ ಸಂಘಟನೆಗಳ ಜೊತೆ ಸಿಎಂ ಸಭೆ ನಡೆಸಿ ನಾಡಧ್ವಜವನ್ನ ಅಂತಿಮಗೊಳಿಸಿದ್ದಾರೆ. ಆದರೆ ಇದಕ್ಕೆ ಅನುಮತಿ ನೀಡಬೇಕಾದದ್ದು ಕೇಂದ್ರ ಸರ್ಕಾರ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಏಕಪಪಕ್ಷೀಯ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕೇಂದ್ರದ ಅನುಮತಿಗೆ ಕಳುಹಿಸಿರುವ ರಾಜ್ಯ ಸರ್ಕಾರ ಬಿಜೆಪಿ ನಿರ್ಧಾರವನ್ನ ಎದುರು ನೋಡುತ್ತಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ರಾಜ್ಯದ ಜನರ ಭಾವನಾತ್ಮಕ ವಿಷಯವನ್ನ ಕೇಂದ್ರ ಸರ್ಕಾರ ತುಂಬಾ ಸೂಕ್ಷ್ಮವಾಗಿ ನಿಭಾಯಿಸಬೇಕಿದೆ. ಚುನಾವಣೆಗೂ ಮೊದಲೇ ಅನುಮತಿ ಕೊಟ್ಟಿದ್ದೇ ಆದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಇದರ ಕ್ರೆಡಿಟ್ ಸಿಗಲಿದೆ. ಒಂದು ವೇಳೆ ಕೇಂದ್ರ ಸರ್ಕಾರದ ಅನುಮತಿ ಸಿಗದೇ ಇದ್ದಲ್ಲಿ ರಾಜ್ಯ ಸರ್ಕಾರ ನೇರವಾಗಿಯೇ ಕೇಂದ್ರದತ್ತ ಬೊಟ್ಟು ಮಾಡಲಿದೆ. ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಜನರ ಭಾವನೆಗೆ ಸ್ಪಂದಿಸಿಲ್ಲಾ ಎಂದು ಹೇಳುವ ಮೂಲಕ ಜನರ ಒಲವನ್ನ ತಮ್ಮತ್ತ ಸೆಳೆಯಲು ಮುಂದಾಗುತ್ತಾರೆ. ಇದು ಒಂದು ರೀತಿಯಲ್ಲಿ ಬಿಜೆಪಿ ನಾಯಕರ ಕೈಕಟ್ಟಿ ಹಾಕುವ ತಂತ್ರ ಎಂದೇ ರಾಜಕೀಯ ವಲಯದಲ್ಲಿ ಚರ್ಚೆ ಪ್ರಾರಂಭವಾಗಿದೆ.