ಅವತ್ತು ದುಶ್ಯಾಸನ ಇದ್ದ ಇಂದು ದುಷ್ಟಶಾಸನ ಇದೆ- ಉಡುಪಿಯಲ್ಲಿ ಅನಂತಕುಮಾರ ಹೆಗಡೆ ವಾಗ್ದಾಳಿ!

Udupi: Union minister Ananth Kumar Hegde Speech About the common civil code.

ಅಂದು ದುರ್ಯೋಧನ ಇದ್ದ. ಇವತ್ತೂ ದುರ್ಯೋಧ, ಕಾಳಧನ ಇದೆ. ಅಷ್ಟೇ ಅಲ್ಲ ಅಂದು ದುಶ್ಯಾಸನ ಇದ್ದ. ಇಂದು ದುಷ್ಟಶಾಸನ ಇದೆ.

ಇವರೆಲ್ಲ ಕೃಷ್ಣಮಠವನ್ನೇ ಕೆಡಿಸಲು ಬಂದಿದ್ದರು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನಾಸ್ತಿಕರ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.  ಉಡುಪಿಯಲ್ಲಿ ಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅನಂತಕುಮಾರ್ ಹೆಗಡೆ, ಕೆಲವರಿಗೆ ಧರ್ಮ ಎಂದರೇ ಏನು ಎಂದೇ ತಿಳಿದಿಲ್ಲ. ಕೆಲವರು ಪೂಜೆ ಮಾಡೋದನ್ನೆ ಧರ್ಮ ಅಂದ್ಕೊಂಡಿದ್ದಾರೆಕೋಪ್ಡಿಗಳ ತಲೆಗೆ ಇದು ಅರ್ಥನೆ ಆಗಲ್ಲ ಎಂದರು.

 

 

ಇನ್ನು ದೇಶದಲ್ಲಿ ಸಮಾನ ನಾಗರೀಕ ಸಂಹಿತೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅನಂತಕುಮಾರ್ ಹೆಗಡೆ,ಎಷ್ಟೇ ಅಡ್ಡಿ ಆತಂಕ ಅಡೆತಡೆ ಬಂದರೂ ನಾನು ಹೆದರುವುದಿಲ್ಲ. ಗುರುವಿನ ಸಂಕಲ್ಪ ತಲೆಮೇಲೆ ಹೊತ್ತು ಕೆಲಸ ಮಾಡುತ್ತೇನೆ. ಅಲ್ಲದೇ ರಾಜಮಹಾರಾಜರು ನಮ್ಮ ದೇಶ ಕಟ್ಟಿಲ್ಲ .
ಬ್ರಿಟೀಷ್ ಮನಸ್ಥಿತಿಯ ಇತಿಹಾಸಕಾರರು ಸುಳ್ಳು ಬರೆದಿದ್ದಾರೆ. ಭಾರತ ಕಾವಿ ಬಟ್ಟೆಯ ಇತಿಹಾಸ ಹೊಂದಿದೆ ಎಂದು ಅವರು ಪುನರುಚ್ಛರಿಸಿದ್ದಾರೆ. ಒಟ್ಟಿನಲ್ಲಿ ಅನಂತಕುಮಾರ ಹೆಗಡೆ ಎಡಪಂಥೀಯ ವಿಚಾರಧಾರೆಗಳ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದು, ಧರ್ಮದ ಅರಿವಿಲ್ಲ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.