ಉಪೇಂದ್ರ ಇಂದಿರಾ ಕ್ಯಾಂಟೀನ್ ಹೊಗಳಿದ್ದರ ಹಿಂದಿನ ಮರ್ಮವೇನು ? ಬಿಜೆಪಿಯಿಂದ ಕಾಂಗ್ರೆಸ್ ನತ್ತಾ ನೋಡಿದ್ಯಾಕೆ ಬುದ್ದಿವಂತ ?

Upendra's Opinion abouts all Political parties

ರಿಯಲ್ ಸ್ಟಾರ್ ಉಪೇಂದ್ರ ಬಿಜೆಪಿ ಸೇರುತ್ತಾರೆ ಎಂದು ನಿನ್ನೆಯಿಂದ ಮಾಧ್ಯಮಗಳಲ್ಲಿ ಸುದ್ದಿ ಬಂದರೂ ಬಿಜೆಪಿಗರು ಸರಿಯಾದ ಸ್ಪಂದನೆ ಕೊಡದಿರೋ ಹಿನ್ನಲೆಯಲ್ಲಿ ಉಪ್ಪಿ ಕಾಂಗ್ರೆಸ್ ನತ್ತಾ ಮುಖ‌ಮಾಡಿದ್ದಾರಾ ?

ಇವತ್ತಿನ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನ ಮಹತ್ವಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ಅನ್ನು ಬಾಯ್ತುಂಬ ಹೊಗಳಿರೋದು ಇಂತಹ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪ್ರಜಾಕೀಯದ ಘೋಷಣೆ ಮಾಡಿದರೂ ಅದು ಕಾಂಗ್ರೆಸ್ ಪರವಾಗಿರಲಿದೆಯೇ ಎಂಬ ಬಗ್ಗೆ ಮಾತುಗಳು ಬರಲಾರಂಬಿಸಿದೆ. ನಾವು ಪ್ರಜಾಕೀಯ ಮಾಡಿತ್ತೇವೆ, ಆ ಕಾನ್ಸೆಪ್ಟ್ ಬಿಟ್ಟು ನಾವು ಹೊರಬರಲ್ಲ.ಬಿಜೆಪಿ,ಕಾಂಗ್ರೆಸ್, ಜೆಡಿಎಸ್ ಕೂಡ ಮುಂದೆ ಪ್ರಜಾಕೀಯ ಮಾಡಬಹುದು, ಈಗಾಗಲೇ ನಮ್ಮಲ್ಲಿ 200 ಜನ ಅಭ್ಯರ್ಥಿಗಳು ಇದ್ದಾರೆ,ಅದರಲ್ಲಿ 150 ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮಾಡಿದ್ದೇವೆ, ಇನ್ನೂ 100 ಜನ ಬರುವವರಿದ್ದಾರೆ ಎಂದರು.

ಸ್ಥಾನ, ಹೆಸರಿಗೆ ಪ್ರಜಾಕೀಯ ಅಲ್ಲ, ಪ್ರಜೆಗಳಿಗೆ ಪ್ರಜಾಕೀಯ ಇದೆ, ನಮ್ಮ ನಾಯಕರು ರಿಪೋರ್ಟಿಂಗ್ ಅಧಿಕಾರಿಗಳ ರೀತಿ ಕೆಲಸ ಮಾಡಲಿದ್ದಾರೆ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ಜನ ಮಾಡಬೇಕು ಅಂತಹ ಆಡಳಿತ ನೀಡಬೇಕು, ವ್ಯವಸ್ಥೆ ಬದಲಾಗಬೇಕು ಅದನ್ನು ಜನರ ಮುಂದಿಡುತ್ತೇವೆ ಎಂದರು. ಇಂದಿರಾ ಕ್ಯಾಂಟೀನ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ 4 ತಿಂಗಳಲ್ಲೇ ಮಾಡಿದರು. ಒಳ್ಳೆಯ ಕೆಲಸ.ಅದೇ ರೀತಿ ಶಿಕ್ಷಣ ಸಂಸ್ಥೆಗಳ ಶಾಲೆಗಳ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.