ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಕೆಪಿಜೆಪಿ ಅಂದ್ರೆ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಸ್ಥಾಪಿಸಿದ್ದಾರೆ.

 

uppi kpjp

ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಕೆಪಿಜೆಪಿ ಅಂದ್ರೆ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಸ್ಥಾಪಿಸಿದ್ದಾರೆ. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಹೆಸರಿನ ರಾಜಕೀಯ ಪಕ್ಷ ಘೋಷಣೆ ಮಾಡಿದ್ರು. ಈ ಮೂಲಕ ಕರ್ನಾಟಕ ರಾಜಕಾರಣದಲ್ಲಿ ಮತ್ತೊಂದು ಪ್ರಾದೇಶಿಕ ಉದಯವಾದಂತಾಗಿದೆ. ಎಲ್ಲದರಲ್ಲೂ ಡಿಫರೆಂಟ್ ಚಿಂತನೆ ಮಾಡುವ ಉಪ್ಪಿ ತಮ್ಮ ಪಕ್ಷದ ಹೆಸರು ಘೋಷಣೆಯನ್ನು ವಿಭಿನ್ನವಾಗಿ ಮಾಡಿದ್ದಾರೆ. ವೇದಿಕೆ ಮೇಲೆ ಪತ್ರಕರ್ತರನ್ನು ಕೂರಿಸಿ, ವೇದಿಕೆ ಮುಂಭಾಗ ತಮ್ಮ ಕುಟುಂಬದವರ ಜೊತೆ ಆಸೀನರಾಗಿದ್ದರು.

uppendra politics

ಪ್ರಜಾಕೀಯ ಆರಂಭಿಸಿದಾಗಿನಿಂದ ಜನರು ಉತ್ತಮವಾಗಿ ನನ್ನನ್ನು ಬೆಂಬಲಿಸಿದ್ದಾರೆ. ರಾಜಕೀಯ ಕಾನ್ಸೆಪ್ಟ್ ಬದಲಾಯಿಸುವುದು ನಮ್ಮ ಉದ್ದೇಶ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆ ಅಗತ್ಯವಿದೆ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಉಪೇಂದ್ರ ಹೇಳಿದ್ರು.