ರಾಷ್ಟ್ರಪತಿಗಳನ್ನು ಅವಮಾನಿಸಿದ್ರಾ ನರೇಂದ್ರ ಮೋದಿ ? ವೈರಲ್ ಆದ ವಿಡಿಯೋದ ಅಸಲಿಯತ್ತೇನು ?

ರಾಷ್ಟ್ರಪತಿಗಳು ಮತ್ತು ಪ್ರಧಾನಮಂತ್ರಿಗಳು ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಸಾಕಷ್ಟು ಶಿಷ್ಟಾಚಾರ ಪಾಲಿಸಲಾಗುತ್ತದೆ. ಆದರೇ ಇತ್ತೀಚೆಗೆ ಪ್ರಧಾನಮಂತ್ರಿಗಳು ಮತ್ತು ರಾಷ್ಟ್ರಪತಿಗಳು ಒಟ್ಟಾಗಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಗೆ ಅವಮಾನ ಮಾಡಲಾಯ್ತಾ? ಇಂತಹದೊಂದು ವಿಡಿಯೋ ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಷ್ಟಕ್ಕೂ ಈ ವಿಡಿಯೋದ ಸತ್ಯಾಸತ್ಯತೇ ಏನು ಅಂತ ನೋಡೋದಾದ್ರೆ, ಕಳೆದ 5ನೇ ತಾರೀಕು ಪ್ರಧಾನಿ ನರೇಂದ್ರ ಮೋದಿ ದಿನತಂತಿಯ 75ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ತೆರಳಿದ್ದರು. ಇದೇ ವೇಳೆ ಪ್ರಧಾನಿ ಮೋದಿಯವರು ಮಾಜಿ ಸಿಎಂ ಕರುಣಾನಿಧಿಯವರ ನಿವಾಸಕ್ಕೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದರು.ಅಷ್ಟೇ ಅಲ್ಲ ದೆಹಲಿಯ ಐಎಎಸ್​​ ಆಫೀಸರ ಸೋಮನಾಥರವರ ಪುತ್ರಿಯ ವಿವಾಹದಲ್ಲೂ ಪಾಲ್ಗೊಂಡಿದ್ದರು.

ಈ ಮದುವೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಭಾಗವಹಿಸಿದ್ದು, ಅವರಿಗೆ ಅವಮಾನ ಮಾಡಲಾಗಿದೆ ಎಂಬ ವಿಡಿಯೋ ಚರ್ಚೆ ಹುಟ್ಟುಹಾಕಿದೆ. ಆದರೇ ನಿಜವಾದ ವಿಷ್ಯ ಏನೆಂದರೇ, ವಿಡಿಯೋದಲ್ಲಿ ಪ್ರಧಾನಿ ಮೋದಿ ಐಎಎಸ್ ಅಧಿಕಾರಿಯ ಕುಟುಂಬಸ್ಥರ ಜೊತೆ ಫೋಟೋ ಸೆಷನ್ ನಲ್ಲಿ ಪಾಲ್ಗೊಳ್ಳುತ್ತಾರೆ. ಈ ವೇಳೆ ಕೋವಿಂದ್​ ಕೂಂಚ ದೂರದಲ್ಲಿ ನಿಂತಿರುತ್ತಾರೆ. ಇಲ್ಲಿ ರಾಷ್ಟ್ರಪತಿಗಳಿಗೆ ಅವಮಾನ ಮಾಡಲಾಗಿದೆ ಎಂಬುದು ಆರೋಪ.

ಆದರೇ ವಿಡಿಯೋದಲ್ಲಿರೋರು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅಲ್ಲ. ಬದಲಾಗಿ ತಮಿಳುನಾಡು ಗವರ್ನರ್ ಭಂವಾರಿಲಾಲ್ ಪುರೋಹಿತ್. ರಾಮನಾಥ್​ ಕೋವಿಂದ್​ ಮತ್ತು ಭಂವಾರಿಲಾಲ್ ನೋಡಲು ಒಂದೇ ರೀತಿ ಇರೋದ್ರಿಂದ ಸಾಮಾಜಿಕ ಜಾಲತಾಣದಲ್ಲಿ ಈ ಅವಾಂತರವಾಗಿದ್ದು, ಸೂಕ್ಷ್ಮವಾಗಿ ಪರಿಶೀಲಿಸಿದ ವೇಳೆ ಸಂಗತಿ ಬೆಳಕಿಗೆ ಬಂದಿದೆ. ಈ ಸೂಕ್ಷ್ಮತೆಯ ಅರಿವಿಲ್ಲದ ಕಿಡಿಗೇಡಿಗಳು ಇದನ್ನು ತಪ್ಪಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಗಾಸಿಪ್ ಸೃಷ್ಟಿಸುತ್ತಿದ್ದಾರೆ.

 

ಪ್ರತ್ಯುತ್ತರ ನೀಡಿ

Please enter your comment!
Please enter your name here