ಅಕ್ರಮ ಆಸ್ತಿಗಳಿಕೆ ಅಪರಾಧಿ ಶಶಿಕಲಾ ಪತಿ ಇನ್ನಿಲ್ಲ- ಪೆರೋಲ್ ಮೇಲೆ ತೆರಳಿದ ಚಿನ್ನಮ್ಮ!

VK Sasikala's husband Natarajan Maruthappa Passes Away.
VK Sasikala's husband Natarajan Maruthappa Passes Away.

ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜಯಲಲಿತಾ ಪತ್ರೆ ಶಶಿಕಲಾ ನಟರಾಜನ್​​​​ ಪತಿ ನಟರಾಜನ್​ ಇನ್ನಿಲ್ಲ.

ad

ಚೆನ್ನೈನ ಗ್ಲೋಬಲ್​ ಹೆಲ್ತ್​ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟರಾಜನ್​​ ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯ ಹಾಗೂ ಶ್ವಾಸಕೋಶ ತೊಂದರೆಯಿಂದ ನಟರಾಜನ್​​ ಕೊನೆಯುಸಿರೆಳೆದಿದ್ದಾರೆ. ಕಳೆದ ವರ್ಷವಷ್ಟೇ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ ನಟರಾಜನ್​​​ ಅಂದಿನಿಂದಲೂ ಕೃತಕ ಉಸಿರಾಟದ ವ್ಯವಸ್ಥೆಯಲ್ಲೇ ಇದ್ದರು. ಇದೇ ಮಾರ್ಚ್​ 16ರಂದು ಮತ್ತೆ ಆಸ್ಪತ್ರೆ ಪಾಲಾಗಿದ್ದರು.

ಗಂಭೀರ ಸ್ಥಿತಿಗೆ ತಲುಪಿದ್ದ ಪತಿಯನ್ನು ನೋಡಲು ಅವಕಾಶ ಕೋರಿ ಶಶಿಕಲಾ ಪೆರೋಲ್​​​​ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದರು. ಅದರ ಬೆನ್ನಲ್ಲೇ ಇಂದು ಮುಂಜಾನೆ ಸಾವಿನ ಸುದ್ದಿ ಬಂದೆರಗಿತು. ಸುದ್ದಿ ತಿಳಿಯುತ್ತಿದ್ದಂತೆ ಜೈಲಿನಲ್ಲೇ ಶಶಿಕಲಾ ಕುಸಿದು ಬಿದ್ದಿದ್ದಾರೆ.  ಅಕ್ಟೋಬರ್​​ನಲ್ಲಿ ಕೊನೆಯ ಬಾರಿ ಪತಿ ನಟರಾಜನ್ ಅವ್ರನ್ನು​​​​ ಚಿನ್ನಮ್ಮ ಭೇಟಿಯಾಗಿದ್ದರು. ಇನ್ನು ಚೆನ್ನೈನಿಂದ ವಕೀಲರ ತಂಡ ಪರಪ್ಪನ ಅಗ್ರಹಾರಕ್ಕೆ ಬಂದು ಪೆರೋಲ್​​ಗೆ ಅರ್ಜಿ ಸಲ್ಲಿಸಲಿದ್ದಾರೆ. ಶಶಿಕಲಾ ತೆರಳಿದ ನಂತ್ರ ತಂಜಾವೂರಿಲ್ಲಿ ಪತಿಯ​​ ಅಂತ್ಯಕ್ರಿಯೆ ನಡೆಯಲಿದೆ.