ದೋಸ್ತಿಗಳಲ್ಲಿ ಜೋರಾಗ್ತಿದೆ ಬೆಗ್ಗರ್ಸ್​ ಚರ್ಚೆ!

ದೋಸ್ತಿ ಸರ್ಕಾರದಲ್ಲಿ ಬೆಗರ್ಸ್ಗಳ ಚರ್ಚೆ ಜೋರಾಗಿದೆ . ಸೀಟು ಹಂಚಿಕೆಯ ವಿಚಾರಲ್ಲಿ   ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆಯ ಮೇಲೆ ರಾಜಕೀಯ ಮುಖಂಡರ ಟೀಕಾಪ್ರಹಾರಗಳು ಆರಂಭವಾಗಿದೆ.

ಕುಮಾರಸ್ವಾಮಿಯವರ ಹೇಳಿಕೆಗೆ – ಮಾಜಿ ಸಿ ಎಂ ಸಿದ್ಧರಾಮಯ್ಯ ನವರು ‘ಇಲ್ಲಿ ಯಾರಿಗೆ ಯಾರು ಬೆಗರ್ಸ್ ಅಲ್ಲ ‘ ಇದು ಅಲೇನ್ಸ್ ಇರುವ ಸರ್ಕಾರ ಎಂದು ಪ್ರತ್ಯುತರ ನೀಡಿದ್ದರು. ಹಾಗೆಯೇ ಕೆ ಪಿ ಸಿ ಸಿ ಅದ್ಯಕ್ಷರು ಗುಂಡೂರಾವ್ ಕೂಡಾ ಇದಕ್ಕೆ ಪ್ರತಿಕ್ರಿಯೆಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಗುಂಡೂರಾವ್ ಇಲ್ಲಿ ಯಾರೂ ಬೆಗ್ಗರ್ಸ್ ಅಲ್ಲ , ಯಾರು ಸರ್ವಾಧಿಕಾರಿಗಳಲ್ಲ.

gundurao

ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ನಾನು ದೇವೇಗೌಡರನ್ನ ಬೇಟಿ ಮಾಡುತ್ತೆನೆ , ತೀಕ್ಷ್ಣ ಪ್ರಶ್ನೆಗಳು ಬಂದಾಗ ಆ ರೀತಿ ಸಿ ಎಂ ಕುಮಾರಸ್ವಾಮಿ ಅವರು ಆ ರೀತಿ ಹೇಳಿಕೆಗಳನ್ನು ನೀಡಿರಬಹುದು , ಹೇಳಿಕೆಗಳ ಆಧಾರದ ಮೇಲೆ ರಾಜಕಾರಣ ಮಾಡಲು ಬರಲ್ಲ ಎಂದು – ಕೆ ಪಿ ಸಿ ಸಿ ಅದ್ಯಕ್ಷರು ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಮೈಸೊರಿನಲ್ಲಿ ಮಾತನಾಡಿದಕ್ಕೆ – ಗುಂಡೂರಾವ್ ಅವರು ಎರಡು ಪಾರ್ಟೀಗಳು ಪರಸ್ಪರ ವಿಶ್ವಾಸದಿಂದ ಹಾಗೂ ಹೊಂದಾಣಿಕೆ , ಸಮಾನತೆ ಇಂದ ನಮ್ಮ ಗುರಿ – ಭಾರತೀಯ ಜನತಾ ಪಕ್ಷವನ್ನ ಈ ರಾಜ್ಯದಲ್ಲಿ ಅತಿ ಕಡಿಮೆ ಸಂಖ್ಯೆಗೆ ಇಳಿಸಬೇಕು ಎಂದು ಹೇಳಿದರು.