ಸಭೆಯ ಮಧ್ಯದಲ್ಲೇ ಕಾಲ್ಕಿತ್ತ ಅನ್ಸಾರಿ. ಮಹಿಳೆಯರಿಂದ ಪೂಜೆ ಹೇಗಿತ್ತು ಗೊತ್ತಾ?

Women Outrage Against MLA Iqbal Ansari in Koppal.

ಕೆಲದಿನಗಳಿಂದ ಶಾಸಕ ಇಕ್ಬಾಲ್ ಅನ್ಸಾರಿಗೆ ಅದೃಷ್ಟವೇ ಸರಿ ಇದ್ದಂತಿಲ್ಲ.

ಹಲವು ಹೇಳಿಕೆಗಳಿಂದ ವಿವಾದ ಸೃಷ್ಟಿಸಿದ ಇಕ್ಬಾಲ್​ ಅನ್ಸಾರಿಗೆ ಇದೀಗ ಸ್ವಕ್ಷೇತ್ರದಲ್ಲೇ ತೀವ್ರ ವಿರೋಧ ಎದುರಾಗಿದ್ದು ಮುಜುಗರ ಅನುಭವಿಸುವಂತಾಗಿದೆ. ಹೌದು ವಾರ್ಡ್​ ವಿಸಿಟ್​ ಗೆ ತೆರಳಿದ ವೇಳೆ ಮಹಿಳೆಯರೇ ಶಾಸಕ ಅನ್ಸಾರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ತೀವ್ರ ಅವಮಾನ ಅನುಭವಿಸಿದ್ದಾರೆ. ‘ ಕೊಪ್ಪಳ ಜಿಲ್ಲೆ ಗಂಗಾವತಿಯ ವಾರ್ಡ್​ವೊಂದಕ್ಕೆ ನಿನ್ನೆ ಶಾಸಕ ಇಕ್ಬಾಲ್ ಅನ್ಸಾರಿ ಭೇಟಿ ನೀಡಿದ್ದರು. ಈ ವೇಳೆ ಶೌಚಾಲಯ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದ ಸ್ಥಳೀಯ ನಿವಾಸಿಗಳು ಶಾಸಕರ ಎದುರು ತಮ್ಮ ಆಕ್ರೋಶ ತೋಡಿಕೊಂಡಿದ್ದಾರೆ.

 

 

 

ಇಕ್ಬಾಲ್​ ಅನ್ಸಾರಿ ಭಾಷಣಕ್ಕೆ ತಂಬಿಗೆ ಹಿಡಿದುಕೊಂಡು ಬಂದ ಮಹಿಳೆಯರು ಅಡ್ಡಿ ಪಡಿಸಿದ್ದಾರೆ. ಅಲ್ಲದೇ ಭಾಷಣ ಮಾಡುತ್ತಿದ್ದ ಇಕ್ಬಾಲ್ ಅನ್ಸಾರಿ ಮೇಲೆ ಚಪ್ಪಲಿ, ತಂಬಿಗೆ,ಕೊಡ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜನರ ಆಕ್ರೋಶದಿಂದ ಬೆದರಿದ ಶಾಸಕ ಅನ್ಸಾರಿ ಭಾಷಣ ಅರ್ಧದಲ್ಲೇ ಮೊಟಕುಗೊಳಿಸಿ ವಾಪಸ್ಸಾದರು. ಇನ್ನು ಆಕ್ರೋಶಗೊಂಡಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು. ಅಲ್ಲದೇ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಒಟ್ಟಿನಲ್ಲಿ ಇತ್ತೀಚೆಗಷ್ಟೇ ತಮ್ಮ ಹೇಳಿಕೆ ಹಾಗೂ ಎರಡನೇ ವಿವಾಹದ ವಿಚಾರದಿಂದ ಸಾಕಷ್ಟು ವಿವಾದ ಸೃಷ್ಟಿಸಿದ್ದ ಅನ್ಸಾರಿಗೆ ಮತ್ತೊಮ್ಮೆ ಮುಜುಗರ ಎದುರಾಗಿದ್ದು ಅನ್ಸಾರಿ ಮೇಲೆ ಚಪ್ಪಲಿ ಎಸೆತದ ವಿಡಿಯೋ ಈಗ ಸಖತ್​ ವೈರಲ್​ ಆಗಿದೆ.