ಯೋಗರಾಜ್ ಭಟ್ ಹಾಡು : ರಾಹುಲ್ ದ್ರಾವಿಡ್ ಹೀರೋ !! ಸಖತ್ ಕುತೂಹಲ ಮೂಡಿಸಿದ ಆಡಿಯೋ, ವಿಡಿಯೋ !!

Yograj Bhat & Rahul Drawid's Songs ,Video About Election

ಯೋಗರಾಜ್ ಭಟ್ ಹಾಡು ಬರೆದು ಹಾಡಿದ್ದಾರೆ. ರಾಹುಲ್ ದ್ರಾವಿಡ್ ಪ್ರಮೋಶನ್….. ಅರೆ ಇದ್ಯಾವ ಸಿನೇಮಾ ಅಂದ್ಕೊಂಡ್ರಾ ? ಇದು ಚುನಾವಣಾ ಆಯೋಗ ಜನರನ್ನು ಮತಗಟ್ಟೆಯತ್ತಾ ಸೆಳೆಯಲು ಮಾಡಿರೋ ಸಖತ್ ಪ್ಲ್ಯಾನ್ !

ad

ಹೌದು. ಈ ಬಾರಿ ಚುನಾವಣಾ ಆಯೋಗ ಹಿಂದೆಂದಿಗಿಂತಲೂ ಹೆಚ್ಚು ಅ್ಯಕ್ಟಿವ್ ಆಗಿದೆ. ಹಿರಿಯ ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಚುನಾವಣಾ ಆಯುಕ್ತರಾಗಿ ನೇಮಕವಾದ ಬಳಿಕ ಮೂರು ಗುರಿಗಳನ್ನು ಹೊಂದಿದ್ದಾರೆ. ನಿಷ್ಪಕ್ಷಪಾತ, ನ್ಯಾಯಬದ್ದ ಚುನಾವಣೆ ಮತ್ತು ಅತ್ಯಧಿಕ ಮತದಾನದ ಖಾತರಿ. ಮೊದಲೆರಡು ಗುರಿ ಸಾಧನೆಗಾಗಿ ಸರಣಿ ಸಭೆ ನಡೆಸಿರುವ ಆಯುಕ್ತರು, ಅತ್ಯಧಿಕ ಮತದಾನದ ಖಾತರಿಗಾಗಿ ಯೋಜನೆ ರೂಪಿಸಿದ್ದಾರೆ. ಅತ್ಯಧಿಕ ಮತದಾನ ಗುರಿಯನ್ನು ತಲುಪಲು ಹೆಚ್ಚು ಹೆಚ್ಚು ಜನಸಾಮಾನ್ಯರನ್ನು ಮತಗಟ್ಟೆಗೆ ಆಕರ್ಷಿಸಬೇಕು. ಅದಕ್ಕಾಗಿ ರಾಜ್ಯ ಚುನಾವಣಾ ಆಯೋಗವು ಖ್ಯಾತ ಸಿನೇಮಾ ನಟ, ಸಿನಿ ಸಾಹಿತಿ ಯೋಗರಾಜ್ ಭಟ್ಟರಿಂದ ಹಾಡು ರಚಿಸಿ ಹಾಡಿಸಿದೆ. ಅದು ವೈರಲ್ ಆದಷ್ಟೂ ಜನ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮತಗಟ್ಟೆಗೆ ಬರಲಿದ್ದಾರೆ.ಮತ್ತೊಂದೆಡೆ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ವಿಡಿಯೋ ಮತ್ತು ಪೋಸ್ಟರ್ ಬರಲಿದೆ. ಇಂದು ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ರಾಜಭಾರಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮತದಾನದ ಜಾಗೃತಿಗಾಗಿ ಸಿದ್ದಪಡಿಸಿರುವ ವೀಡಿಯೋ ಮತ್ತು ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಲಾಯಿತು.

 

 

ಎಲ್ಲರೂ ಚೆನ್ನಾಗಿ ಆಡಿದರೆ ಮ್ಯಾಚ್ ಗೆಲ್ಲಲಿದೆ. ಎಲ್ಲರೂ ಓಟ್ ಮಾಡಿದರೆ ಪ್ರಜಾಪ್ರಭುತ್ವ ಗೆಲ್ಲಲಿದೆ. ನಾನು ಓಟ್ ಮಾಡುತ್ತೇನೆ, ನೀವು ಓಟ್ ಮಾಡಿ ಎನ್ನುವ ದ್ರಾವಿಡ್ ಹೇಳಿಕೆಯ ಪ್ರಮೋಷನ್ ಇರುವ ವೀಡಿಯೋ ಕ್ಲಿಪ್ ಬಿಡಿಗಡೆ ಮಾಡಿದ್ದೇವೆ,ಇದನ್ನು ರಾಜ್ಯದ ಎಲ್ಲಾ ಮಲ್ಟಿಫ್ಲೆಕ್ಸ್ ಗಳಲ್ಲಿ ಪ್ರಸಾರ ಮಾಡಲಾಗುತ್ತೆ, ಟಿವಿಯಲ್ಲಿಯೂ ಪ್ರಸಾರ ಮಾಡಬಹುದಾಗಿದೆ. ರಾಯಭಾರಿಯಾಗಲು ರಾಹುಲ್ ದ್ರಾವಿಡ್ ಒಪ್ಪಿದ್ದು ಅವರ ಸಾಮಾಜಿಕ ಕಳಕಳಿಗೆ ಅಭಿನಂದನೆ ಸಲ್ಲಿಸುತ್ತೇವೆ. ಯುವಕರು ಹಾಗು ಇತರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು‌ ಮತ ಚಲಾಯಿಸಬೇಕು, ಪ್ರತಿಯೊಬ್ಬರೂ ಮತ ಹಾಕಿ ಅವರ ಜವಾಬ್ದಾರಿ ನಿರ್ವಹಿಸಿ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಕರೆ ನೀಡಿದರು.

ಯೋಗರಾಜ್ ಭಟ್ ಚುನಾವಣಾ ಗೀತೆ ರಚಿಸಿದ್ದಾರೆ. ಹರಿಕೃಷ್ಣ ಸಂಗೀತ ನೀಡಿದ್ದು ವಿಜಯ ಪ್ರಕಾಶ್ ಹಾಡಿದ್ದಾರೆ. ಇಮ್ರಾನ್ ಕೊರಿಯೋಗ್ರಾಫರ್ ಆಗಿದ್ದು,ಎಲ್ಲಾ ಮೂವತ್ತು ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಆಯಾ ಜಿಲ್ಲೆಯ ಸ್ಥಳೀಯ, ವಿಶೇಷ, ಸಾಂಸ್ಕೃತಿಕ, ಐತಿಹಾಸಿಕ ಅಂಶಗಳ ಅಂಶವನ್ನು ಚಿತ್ರೀಕರಣ ಮಾಡಲಾಗುತ್ತಿದೆ. 4 ನಿಮಿಷದ ವೀಡಿಯೋ ಇನ್ನು ಒಂದು ವಾರದಲ್ಲಿ ಬಿಡುಗಡೆಯಾಗಲಿದೆ ಎಂದರು.