ದಾಸ್ ಅಭಿಮಾನಿಗಳು ಬರ್ತಡೇಗೆ ಹೇಗೆ ಸಜ್ಜಾಗಿದ್ದಾರೆ ಗೊತ್ತಾ?

Bengaluru: Fan's Preparation for Darshan's Birthday.
Bengaluru: Fan's Preparation for Darshan's Birthday.

ಸ್ಯಾಂಡಲ್​ವುಡ್​​ ಚಾಲೆಂಜಿಂಗ್​ ಸ್ಟಾರ್​ ದರ್ಶನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಈಗಾಗಲೇ ಸಜ್ಜಾಗಿದ್ದಾರೆ.

 

 

ಅದಾಗಲೇ ದರ್ಶನ ಪತ್ನಿ ವಿಜಯಲಕ್ಷ್ಮೀ ದರ್ಶನ ಹೆಸರು ಹಚ್ಚೆ ಹಾಕಿಸಿಕೊಂಡು ಪತಿಗೆ ಸಪ್ರೈಸ್​ ನೀಡಿರುವ ಬೆನ್ನಲ್ಲೇ ಇದೀಗ ಈ ಸಾಲಿಗೆ ಅಭಿಮಾನಿಗಳು ಸೇರ್ಪಡೆಯಾಗಿದ್ದಾರೆ. ಹೌದು ದಚ್ಚು ಫ್ಯಾನ್ಸ್​​ ಮೈತುಂಬ ದರ್ಶನ ಹೆಸರು, ಚಿತ್ರದ ಪೋಸ್ಟರ್​​ಗಳ ಹಚ್ಚೆ ರಾರಾಜಿಸುತ್ತಿದೆ.

 

 

 

ದರ್ಶನ ಹುಟ್ಟುಹಬ್ಬದ ದಿನ ರಾಜ್ಯದ ನಾನಾಕಡೆಯಿಂದ ಸಾವಿರಾರು ಅಭಿಮಾನಿಗಳು ದಚ್ಚು ಮನೆಯ ಮುಂದೇ ನೆರೆದು ನೆಚ್ಚಿನ ನಟನಿಗೆ ಶುಭಕೋರುತ್ತಾರೆ. ಜೊತೆಗೆ ಸಿಹಿ ತಿಂಡಿಗಳು, ಕೇಕ್​ ತಂದು ದರ್ಶನಗೆ ಕೊಟ್ಟು ತಮ್ಮ ಅಭಿಮಾನ ಪ್ರದರ್ಶಿಸುತ್ತಾರೆ. ಆದರೇ ಈ ಭಾರಿ ಕೊಂಚ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಲು ಮುಂಧಾಗಿರುವ ದರ್ಶನ ಫ್ಯಾನ್ಸ್​​​ ಮೈಮೇಲೆ ದರ್ಶನ್​​ ಸಂಗೊಳ್ಳಿ ರಾಯಣ್ಣ ಚಿತ್ರದ ಪಾತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

 

 

 

ಚಿಕ್ಕ ಹಚ್ಚೆ ಹಾಕಿಸಿಕೊಳ್ಳೋದೇ ಕಷ್ಟ. ಅಂತಹುದರಲ್ಲಿ ದರ್ಶನ ಅಭಿಮಾನಿಗಳು ತೋಳು ತುಂಬ ಸಂಗೊಳ್ಳಿ ರಾಯಣ್ಣ ನ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇನ್ನು ಕೆಲವರಂತು ಬಲಗೈಯಲ್ಲಿ ತೂಗುದೀಪ ಹಚ್ಚೆ ಹಾಗೂ ಎಡ ತೋಳಿಗೆ ದರ್ಶನ ಪೋಟೋ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಕೇವಲ ಪುರುಷ ಅಭಿಮಾನಿಗಳು ಮಾತ್ರವಲ್ಲ ಮಹಿಳಾ ಅಭಿಮಾನಿಗಳು ಕೂಡ ತಮ್ಮ ಕೈಕತ್ತಿನ ಮೇಲೂ ಕೂಡ ಹಚ್ಚೆ ಹಾಕಿಸಿಕೊಂಡಿದ್ದಾರೆ.

 

 

 

 

 

 

ಒಟ್ಟಿನಲ್ಲಿ ದರ್ಶನ ಈ ಹುಟ್ಟುಹಬ್ಬ ಹಿಂದೆಂದಿಗಿಂತ ವಿಭಿನ್ನವಾಗಿಸಲು ಅಭಿಮಾನಿಗಳು ನಿರ್ಧರಿಸಿದಂತಿದೆ. ಫೆ 16 ರಂದು ದರ್ಶನ ಹುಟ್ಟುಹಬ್ಬವಿದ್ದರೂ ಪ್ರತಿನಿತ್ಯ ಡಿಪಿ, ಪೇಸ್​ಬುಕ್​ನಲ್ಲಿ ದರ್ಶನ ಪೋಟೋ,ಹಚ್ಚೆ,ವಿಡಿಯೋ ಹಾಕಿ ಪ್ರೀತಿಯ ದಾಸನಿಗೆ ಗೌರವ ಸಲ್ಲಿಸುತ್ತಿದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here