ನಾನು ಸ್ವ-ಇಚ್ಛೆಯಿಂದ ವಿವಾಹವಾಗಿದ್ದೇನೆ- ಮಾಸ್ತಿಗುಡಿ ವಿವಾಹ ಪ್ರಹಸನಕ್ಕೆ ಕೊನೆಗೂ ತೆರೆ-ಹೆತ್ತವರ ಕಣ್ಣೀರಿನ ನಡುವೆ ಸುಂದರ್​​ ಜೊತೆ ತೆರಳಿದ ಲಕ್ಷ್ಮಿ!

Bengaluru: Sundar Gowda Couple Reacts On Media
Bengaluru: Sundar Gowda Couple Reacts On Media

ಶಾಸಕರ ಪುತ್ರಿ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಯಲಹಂಕ ಪೊಲೀಸ್ ಠಾಣೆಗೆ ಪತಿ , ನಿರ್ದೇಶಕ ಸುಂದರ್ ಜೊತೆ ತೆರಳಿದ ಶಾಸಕರ ಪುತ್ರಿ ಲಕ್ಷ್ಮಿ ನಾಯ್ಕ್​ ತಾನು ಸ್ವಇಚ್ಛೆಯಿಂದ ಮದುವೆಯಾಗಿರೋದಾಗಿ ಹೇಳಿಕೆ ನೀಡಿದ್ದಾರೆ.

ಲಕ್ಷ್ಮೀ-ಸುಂದರ್ ಮನೆಯಿಂದ ಪೊಲೀಸ್ ಠಾಣೆಗೆ ತೆರಳುವರೆಗೂ ನಟ ದುನಿಯಾ ವಿಜಿ ಸಾಥ್​ ನೀಡಿದ್ದು, ಲಕ್ಷ್ಮೀ ಹೇಳಿಕೆ ಬಳಿಕ ನಾಪತ್ತೆ ಪ್ರಕರಣಕ್ಕೆ ತೆರೆ ಬಿದ್ದಂತಾಗಿದ್ದು, ಕುಟುಂಬಸ್ಥರ ಕಣ್ಣಿರಿಗೂ ಕರಗದೇ ಪತಿ ಜೊತೆ ಲಕ್ಷ್ಮೀ ತೆರಳಿದ್ದಾರೆ. ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್​ ಪುತ್ರ ಲಕ್ಷ್ಮೀ ನಾಯ್ಕ್​ ಬುಧವಾರ ಯಲಹಂಕ ನ್ಯೂಟೌನ್​ನಲ್ಲಿರುವ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು.

ಈ ಬಗ್ಗೆ ಶಾಸಕ ಶಿವಮೂರ್ತಿ ನಾಯ್ಕ್ ಪತ್ನಿ ಡಾ.ಗೀತಾ ಯಲಹಂಕ ನ್ಯೂ ಟೌನ್​ ಪೊಲೀಸ್ ಠಾಣೆಯಲ್ಲಿ ಪುತ್ರಿ ಲಕ್ಷ್ಮೀ ನಾಯ್ಕ್ ನಾಪತ್ತೆಯಾಗಿರೋ ಬಗ್ಗೆ ದೂರು ನೀಡಿದ್ದರು. ಇತ್ತ ಮಾಸ್ತಿಗುಡಿ ನಿರ್ದೇಶಕ ಸುಂದರ್​ ಗೌಡ್​ನನ್ನು ಪ್ರೀತಿಸಿದ್ದ ಶಾಸಕರ ಪುತ್ರಿ ಲಕ್ಷ್ಮೀ ಗೌಡ್​​ ಆತನ ಜೊತೆ ತೆರಳಿದ್ದು, ಚಿಕ್ಕಮಗಳೂರಿನ ಗೌರಿಗದ್ದೆಯ ಪಾರ್ವತಿ ದೇವಾಲಯದಲ್ಲಿ ಮದುವೆಯಾಗಿ ರೆಸಾರ್ಟ್​​ನಲ್ಲಿ ವಾಸವಾಗಿದ್ದರು.

ಪ್ರಕರಣದ ಕುರಿತು ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ಪೇಸ್​ಬುಕ್​ನಲ್ಲಿ ತಮ್ಮ ಹೇಳಿಕೆಯ ವಿಡಿಯೋವೊಂದನ್ನು ಅಪ್​ಲೋಡ್​ ಮಾಡಿದ್ದ ಲಕ್ಷ್ಮೀ ತಾನು ಸ್ವಇಚ್ಛೆಯಿಂದ ಸುಂದರ್ ಗೌಡ್​ ಜೊತೆ ತೆರಳಿದ್ದು, ಅವರೊಂದಿಗೆ ಮದುವೆಯಾಗಿದ್ದೇನೆ. ನಾನು ಯಾವ ಒತ್ತಡಕ್ಕೂ ಒಳಗಾಗಿಲ್ಲ ಎಂದಿದ್ದರು.  ಲಕ್ಷ್ಮೀ ನಾಯ್ಕ್​ ​ ಹಾಗೂ ಸುಂದರ್ ಗೌಡ್​ ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೇ ಸುಂದರ್​ ಗೌಡ್​ ಮೇಲೆ ಮಾಸ್ತಿಗುಡಿ ಚಿತ್ರದ ವೇಳೆ ನಡೆದ ದುರ್ಘಟನೆಯ ಪ್ರಕರಣ ದಾಖಲಾಗಿರೋದರಿಂದ ಲಕ್ಷ್ಮೀ ನಾಯ್ಕ್​ ಕುಟುಂಬಸ್ಥರು ಒಪ್ಪಿಕೊಂಡಿರಲಿಲ್ಲ.

ಇದಕ್ಕೆ ಲಕ್ಷ್ಮೀ ಹಾಗೂ ಸುಂದರ್ ಗೌಡ್​ ಮದುವೆಯಾಗಲು ಪ್ಲ್ಯಾನ್ ಮಾಡಿದ್ದು ಅದರಂತೆ ಓಡಿ ಹೋಗಿ ಮದುವೆಯಾಗಿದ್ದರು.
ಯಲಹಂಕದಲ್ಲಿ ಪ್ರಕರಣ ದಾಖಲಾಗಿದ್ದರಿಂದ ಕಾನೂನಿನಂತೆ ಇಂದು ಪೊಲೀಸ್ ಠಾಣೆಗೆ ಹಾಜರಾದ ಲಕ್ಷ್ಮೀ ನಾಯ್ಕ್​, ಪೊಲೀಸ್​ ಇನ್ಸಪೆಕ್ಟರ್​ ಎದುರು ತನ್ನ ಸ್ವಇಚ್ಛೆಯಂತೆ ಮದುವೆಯಾಗಿದ್ದು, ನನ್ನ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಮಚ್ಚಳಿಕೆ ಬರೆದುಕೊಟ್ಟಿದ್ದು, ಸುಂದರ್ ಗೌಡ್ ಜೊತೆ ಅವರ ನಿವಾಸಕ್ಕೆ ತೆರಳಿದ್ದಾರೆ. ಪೊಲೀಸ್ ಠಾಣೆಯಲ್ಲಿ ಲಕ್ಷ್ಮೀ ಹೆತ್ತವರು ಕಣ್ಣಿರಿಡುತ್ತಿದ್ದು, ಮಗಳು ಮನೆಗೆ ವಾಪಸ್ಸಾಗಲು ವಿರೋಧಿಸಿದ್ದರಿಂದ ಲಕ್ಷ್ಮೀ ನಾಯ್ಕ್ ಅಜ್ಜಿ ಅಸ್ವಸ್ಥರಾದ ಘಟನೆ ಕೂಡ ನಡೆಯಿತು. ಆದರೂ ಹೆತ್ತವರ ಕಣ್ಣಿರಿಗೆ ಕರಗದ ಲಕ್ಷ್ಮೀ ಪ್ರೀತಿಸಿದ ಸುಂದರ್ ಗೌಡ್ ಜೊತೆ ತೆರಳಿದ್ದಾರೆ. ಒಟ್ಟಿನಲ್ಲಿ ಶಾಸಕರ ಪುತ್ರಿ ವಿವಾಹ ಪ್ರಕರಣ ಸುಖಾಂತ್ಯ ಕಂಡಂತಾಗಿದೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here