ಪಶು ವಿವಿಯಲ್ಲಿ ವಿಸಿ ಬಿಟ್ಟರೆ ಎಲ್ಲಾ ಹುದ್ದೆಗಳು ಖಾಲಿ ಖಾಲಿ. ಹುದ್ದೆಗಳ ಭರ್ತಿಗೆ ಸರ್ಕಾರದ ಮೀನಾವೇಷ

ರಾಜ್ಯದ ಏಕೈಕ ಕರ್ನಾಟಕ, ಪಶು ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯವೆಂದೆ ಖ್ಯಾತಿ ಗಳಿಸಿರುವ ಬೀದರ್ ನ ಪಶು ವಿವಿಯಲ್ಲಿ ಈಗ ಖಾಲಿ ಖುರ್ಚಿಗಳದ್ದೇ ಕಾರುಬಾರು.ರಾಜ್ಯದ ಏಕೈಕ ವಿಶ್ವವಿದ್ಯಾನಿಯದಲ್ಲಿ ಸರ್ಕಾರ ಇತ್ತೀಚಿಗೆ ನಿಯುಕ್ತಿ ಮಾಡಿರುವ ಕುಲಪತಿ ಹುದ್ದೆ ಮಾತ್ರ ಖಾಯಂ ಬಾಕಿ ಎಲ್ಲವು ಇನ್ ಚಾರ್ಜ ಹುದ್ದೆಗಳೆ.!!ಇದನ್ನ ನಾವು ಹೇಳುತ್ತಿಲ್ಲ ಸ್ವತ: ಇಲ್ಲಿನ ಕುಲಪತಿ ನಾರಾಯಣ ಸ್ವಾಮಿ ಹೇಳಿದ್ದಾರೆ.ಬರುವ ಎರಡು ತಿಂಗಳಲ್ಲಿ ವಿಸಿ ಹೊರತು ಪಡಿಸಿ ಖಾಲಿ ಇರೋ ಎಲ್ಲಾ ಹುದ್ದೆಗಳನ್ನ ತುಂಬಲು ಕ್ರಮಕ್ಕೆ ಮುಂದಾಗುವ ಭರವಸೆ ಅವರದ್ದು.ಸಧ್ಯ ಖಾಲಿ ಹುದ್ದೆಗಳು ವಿಶ್ವವಿದ್ಯಾನಿಲಯದ  ಎಲ್ಲಾ ಕಾರ್ಯಚಟುವಟಿಕೆಗಳ ಮೇಲೆ ಪ್ರಭಾವ  ಬೀರಿದ್ದಂತು ಸತ್ಯ.ಈ ಕುರಿತ ವರದಿ ಇಲ್ಲಿದೆ.

ರಾಜ್ಯದ ಏಕೈಕ ಪಶು ವಿಶ್ವವಿದ್ಯಾನಿಲಯವೆಂದೆ ಖ್ಯಾತಿಗಳಿಸಿರುವ ಬೀದರ್  ಕರ್ನಾಟಕ ಪಶು ಹಾಗು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಖಾಯಂ ಹುದ್ದೆ ಅಂದ್ರೆ ವಿಸಿ ಹುದ್ದೆ ಮಾತ್ರ..! ಈಗ ಇಲ್ಲಿ ಎಲ್ಲಾ ಹುದ್ದೆಗಳು ಖಾಲಿ ಖಾಲಿ..!ಡೈರೆಕ್ಟರ್ ಆಫ್ ರಿಸರ್ಚ್,ಡೈರೆಕ್ಟರ್ ಆಫ್ ಎಕ್ಸ್ ಟೆನ್ಷನ್, ಡೈರೆಕ್ಟರ್ ಆಫ್ ಪಿಜಿ ಸ್ಟಡಿ,ರಜಿಸ್ಟಾರ್ ಕಂಟ್ರೋಲರ್,ಡಿನ್ ಬೀದರ್,ಡಿನ್ ಬೆಂಗಳೂರು,ಡಿನ್ ಗದಗ,ಡಿನ್ ಶಿವಮೊಗ್ಗ,ಡಿನ್ ಹಾಸನ,ಪಶು ಕಾಲೇಜು ಗದಗ,ಬೀದರ್,ಬೆಂಗಳೂರು,ಹಾಸನ ಶಿವಮೊಗ್ಗ ದಲ್ಲಿ ಎಲ್ಲಾ ಹುದ್ದೆಗಳು ಖಾಲಿ ಇವೆ.ಹದಿನೆಂಟು ತಿಂಗಳುಗಳ ಕಾಲ ಖಾಲಿ ಇದ್ದ ವಿಸಿ ಹುದ್ದೆಯನ್ನ ಸರ್ಕಾರ ಇತ್ತೀಚಿಗೆ ತುಂದಿದೆ.ಇಗ ಕುಲಪತಿಗಳು ಮೂಂದಿನ ಎರಡು ತಿಂಗಳಲ್ಲಿ ಹುದ್ದೆ ತುಂಬಲು ವಿಸಿ ನಾರಾಯಣ ಸ್ವಾಮಿ ಅಣಿಯಾಗುತ್ತಿದ್ದಾರೆ.

ರಾಜ್ಯದ ಏಕೈಕ ಪಶು ವಿಶ್ವವಿದ್ಯಾನಿಲಯದಲ್ಲಿ ಬಹುತೇಕ ಎಲ್ಲಾ ಹುದ್ದೆಗಳು ಖಾಲಿ ಇದ್ದು ಅವುಗಳನ್ನ ಸರ್ಕಾರ ತುಂಬಲು ಮೂಂದಾಗಿಲ್ಲ.ಇದರಿಂದಾಗಿ ಇಲ್ಲಿ ಎಲ್ಲವು ಇನ್ ಚಾರ್ಜ ಮೇಲೆ ಕೆಲಸ ನಡೆಯುತ್ತಿದ್ದವು.ಬಹುತೇಕ ಬೋಧಕ, ಬೋಧಕೇತರ ಹುದ್ದೆಗಳು ಎಲ್ಲವು ಖಾಲಿ ಖಾಲಿ. ಈಗ ಇವುಗಳನ್ನ ತುಂಬುವ ಕಾರ್ಯ ನಡೆಯಬೇಕಿದೆ.ಅದು ಆಗೋದು ಯಾವಾಗ..?
ಒಟ್ಟಾರೆ ರಾಜ್ಯದ ಏಕೈಕ ಪಶು ವಿಶ್ವವಿದ್ಯಾನಿಲಯದಲ್ಲಿ ಈಗ ಖಾಲಿ ಹುದ್ದೆಗಳಲ್ಲೆ ಕಾರುಬಾರು.ನೂತನ ಕುಲಪತಿಗಳ ನಿಯುಕ್ತಿಯಾಗಿದ್ದು ಅವರಾದ್ರು ಖಾಲಿ ಹುದ್ದೆಗಳನ್ನ ತುಂಬುತ್ತಾರಾ ಅನ್ನೋದು ಕಾದು ನೋಡಬೇಕಿದೆ. ಸದ್ಯ ಖಾಲಿ ಹುದ್ದೆಗಳಿಂದಾಗಿ ವಿಶ್ವ ವಿದ್ಯಾನಿಲಯ ಇನ್ ಚಾರ್ಜ ಮೇಲೆ ನಡೆಯುತ್ತಿದೆ. ಖಾಯಂ ಹುದ್ದೆಗಳು ತುಂಬೋದು ಯಾವಾಗ.?ಸರ್ಕಾರ ಖಾಲಿ ಹುದ್ದೆ ಭರ್ತಿಗೆ ಮುಂದಾಗಲಿ ಅನ್ನೋದು ಈ ಭಾಗದ ಜನರ ಆಶಯ.

ವರದಿ: ಓಂಕಾರ್ ಮಠಪತಿ ಬಿಟಿವಿ ಬೀದರ್