ಸಿದ್ದರಾಮಯ್ಯ ” ಲಫಂಗ ರಾಜಕೀಯ” ಹೇಳಿಕೆಗೆ ಆಯನೂರು ನೀಡಿದ ತಿರುಗೇಟೇನು ಗೊತ್ತಾ?

ಬಿಜೆಪಿಯವರು ಲಫಂಗ ರಾಜಕೀಯ ಮಾಡುತ್ತಿದ್ಧಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಎಂಎಲ್​ಸಿ ಆಯನೂರು ಮಂಜುನಾಥ್ ತಿರುಗೇಟು ನೀಡಿದ್ದು, ಹಾಸಿಗೆ ದಿಂಬು ತಿಂದವರು, ಮರಳು ನುಂಗಿದಂತಹವರನ್ನು ಕಟ್ಟಿಕೊಂಡು ಮುಖ್ಯಮಂತ್ರಿಯಾದವರು ಲಫಂಗರಲ್ಲವೇ ಎಂದು ಶಿವಮೊಗ್ಗದಲ್ಲಿ ಪ್ರಶ್ನೆ ಮಾಡಿದ್ದಾರೆ.

adಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಬಿಜೆಪಿ ಲಫಂಗ ರಾಜಕೀಯ ಮಾಡ್ತಾ ಇದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಹಿಂದೆ ಲಫಂಗರ ತಂಡವನ್ನೇ ಕಟ್ಟಿಕೊಂಡು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ರು. ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ 37 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರವಾಗಿದೆ. ಸಿಐಜೆ ವರದಿ ಸಹ ನೀಡಿದೆ. ಅದರ ಲೆಕ್ಕವೇ ಇನ್ನೂ ಸಿಕ್ತಾ ಇಲ್ಲ.. ಅದರ ಬಗ್ಗೆ ತನಿಖೆ ನಡೀತಾ ಇದೆ. ಇಂತಹವರು ಮಾತನಾಡುವಾಗ ನಾಲೆಗೆಯ ಮೇಲೆ ಹಿಡಿತ ಇರಲಿ ಎಂದು ಆಯನೂರು ಕುಟುಕಿದರು.