ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ !! ಸಿಎಂ ಸಿದ್ದರಾಮಯ್ಯಗೆ ಹೀಗೊಂದು ಮನವಿ !!

Bahubali: Man Request Letter to CM Siddaramaiah At Shravanabelagola.

ಶ್ರವಣಬೆಳಗೊಳ ಸೇರಿದಂತೆ ರಾಜ್ಯದಲ್ಲಿರುವ ಗೊಮ್ಮಟೇಶ್ವರ ಮೂರ್ತಿಗೆ ಚಡ್ಡಿ ಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಲಾಗಿದೆ.

ಹೌದು. ಈ ರೀತಿಯ ವಿಚಿತ್ರ ಮನವಿ ಸಿಎಂ ಸಿದ್ದರಾಮಯ್ಯರ ಕಚೇರಿ ತಲುಪಿದ್ದು, ಪತ್ರಕರ್ತ ಆದಿ ಪ್ರಭು ಎಂಬವರು ಮನವಿದಾರರಾಗಿದ್ದಾರೆ.

ಗೊಮ್ಮಟೇಶ್ವರ ಅರ್ಥತ್ ಬಾಹುಬಲಿಯ ಮೂರ್ತಿ ನಗ್ನವಾಗಿರುವುದರಿಂದ ಮುಜುಗರಕ್ಕೆ ಈಡಾಗುವ ಪರಿಸ್ಥಿತಿ ಉದ್ಬವವಾಗುತ್ತದೆ. ಮಹಿಳೆಯರು ಮತ್ತು ಮಕ್ಕಳು ಬಾಹುಬಲಿಯ ಬಗ್ಗೆ ವಿವರಣೆ ಕೇಳಿದಾಗ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಈ ಕಾರಣದಿಂದ ಗೊಮ್ಮಟೇಶ್ವರನಿಗೆ ಬಟ್ಟೆ ತೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

 

1 ಕಾಮೆಂಟ್

  1. ನಿಮ್ಮ ಕಣ್ಣಿಗೆ ಬಾಹುಬಲಿ ಮೂರ್ತಿ ಒಂದೇ ಕಾಣುತ್ತಿದೆಯಾ.. ಐತಿಹಾಸಿಕ ಕಟ್ಟಡಗಳಲ್ಲಿ ಹೆಣ್ಣು ನಗ್ನ ಶಿಲೆಯಾಗಿ ನಿಂತಿರುವುದು ಕಾಣುತ್ತಿಲ್ಲವೆ.. ಅದು ನೋಡಲು ನಿಮಗೆ ಮುಜುಗರ ಅನಿಸುವುದಿಲ್ಲವೆ.. ಮೊದಲ ನಿಮ್ಮ ದೃಷ್ಟಿ ಚನ್ನಾಗಿರಲ್ಲಿ..

Comments are closed.