ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದೆ ಈ ಗ್ರಾಮ.. ಯಾವುದದು? ಏನು ಸುದ್ದಿ?

ಚುನಾವಣೆ ಬಂತಂದ್ರೆ ಸಾಕು ರಾಜಕಾರಣಿಗಳು ಕಾಲಿಗೆ ಗಾಲಿ ಕಟ್ಟಿಕೊಂಡವರಂತೆ ಎಲ್ಲಾ ಕಡೆ ಓಡಾಡಿ ಸಾವಿರಾರು ಭರವಸೆ ನೀಡಿ ಬರತ್ತಾರೆ, ಆದ್ರೆ ಅಲ್ಲಿನ ಮತದಾರರು ಅವರನ್ನ ಗೆಲ್ಲಿಸಿದ ಮೇಲೆ ಅತ್ತಕಡೆ ಯಾವ ರಾಜಕಾರಣಿಯೂ ಸುಳಿಯೋದಿಲ್ಲ ಹೀಗಾಗಿ ಆ ಜನರಿಗೆ ನೀಡಿರೋ ಭರವಸೆಗಳು ಭರವಸೆಯಾಗಿಯೆ ಉಳಿದುಕೊಳ್ಳುತ್ತವೆ. ರಾಜಕಾರಣಿಗಳ ಆಶ್ವಾಸನೆಯಿಂದ ಬೇಸತ್ತು ಹೋಗುವ ಆ ಗ್ರಾಮದ ಜನ ಬರಲಿರುವ ಚುನಾವಣೆಯಲ್ಲಿ ಮತ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ, ಹಾಗಾದ್ರೆ ಆ ಗ್ರಾಮ ಯಾವುದು?. ಅಲ್ಲಿ ಇನ್ನೂ ಜೀವಂತವಾಗಿರೋ ಸಮಸ್ಯೆ ಆದ್ರೂ ಏನು ಅಂತಾ ನಾವು ಹೇಳ್ತೀವಿ ನೋಡಿ.  

ad


ಇದು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿಚ್ಚಡ ಎಂಬ ಪುಟ್ಟ ದ್ವೀಪ ಗ್ರಾಮ. ಸರಕಾರದಿಂದ ಜನಪರ ಯೋಜನೆ ಒದಗಿ ಬಂದರೂ ಕೂಡ ಇಲ್ಲಿಯ ಜನರು ಮೂಲಭೂತ ಸೌಕರ್ಯದಿಂದ ಇನ್ನೂ ವಂಚಿತರಾಗಿದ್ದಾರೆ. ಈ ದ್ವೀಪ ಗ್ರಾಮದಲ್ಲಿ ಸುಮಾರು 45ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿದೆ. ಈ ಗ್ರಾಮ ಗಂಗಾವಳಿ ನದಿಯ ಮಧ್ಯದಲ್ಲಿ ದ್ವೀಪವಾಗಿರುವುದರಿಂದ ಇಲ್ಲಿಯ ಜನರು ಮೀನುಗಾರಿಕೆ ಕೃಷಿಯನ್ನೆ ತಮ್ಮ ಜೀವನವನ್ನಾಗಿ ಅವಲಂಬಿಸಿಕೊಂಡಿದ್ದಾರೆ.

 

ನಿತ್ಯದ ಕಾರ್ಯಕ್ಕೆ ಬರಬೇಕಾದರೆ ಈ ನದಿ ದಾಟಿಯೆ ಬರಬೇಕಾಗಿದೆ. ಶಾಲಾ, ಕಾಲೇಜುವಿಧ್ಯಾರ್ಥಿಗಳು ದೋಣಿಯನ್ನೆ ನಂಬಿಕೊಂಡು ಇರಬೇಕು. ಇನ್ನೂ ಅನಾರೋಗ್ಯಕ್ಕೆ ಒಳಗಾದ್ರೆ ಅವರ ಪಾಡು ಹೇಳದಂತಾಗಿದೆ.

ಆದ್ರೆ ನಾಲ್ಕು ವರ್ಷಗಳಿಂದ ಈ ಭಾಗದ ಜನರು ದೋಣಿಯ ಸೌಕರ್ಯದಿಂದಲೂ ವಂಚಿತರಾಗಿದ್ದಾರೆ. ಹಿಂದೆ ಸರಕಾದಿಂದ ಒಂದು ದೋಣಿ ಆದ್ರೆ ಅದು ಸಹ ಈಗ ದುರಸ್ಥಿಗೆ ಬಂದು ತಲುಪಿದೆ. ಇದ್ರಿಂದ ಇಲ್ಲನ ಜನ ದೋಣಿ ದಾಟುವಾಗ ಪ್ರಾಣಭಯದೊಂದಿಗೆ ಸಾಗಬೇಕಾಗಿದೆ. ಈ ರಾಜಕಾರಣಿಗಳ ಭರವಸೆಯಿಂದ ಬೇಸತ್ತಿರುವ ಗ್ರಾಮಸ್ಥರು ಬರುವ ಚುನಾವಣೆಯಲ್ಲಿ ಮತ ಬಹಿಷ್ಕಾರ ಮಾಡೋದಕ್ಕೆ ತೀರ್ಮಾನಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಈ ಭಾಗದ ಶಾಸಕರು ಹೊಸದಾಗಿ ಸರಕಾರದಿಂದ ಬಂದಿರುವ ಲಕ್ಷಾಂತರ ಮೌಲ್ಯದ ಯಾಂತ್ರಿಕ ದೋಣಿಯನ್ನು ಉದ್ಘಾಟಿಸಿದ್ರು. ಆಗ ಅಲ್ಲಿನ ಜನರ ಮುಖದಲ್ಲಿ ಸಂತಸ ಮೂಡಿತ್ತು. ಆದ್ರೆ ಕಾಲ ಕ್ರಮೇಣ ಈ ಯಾಂತ್ರಿಕ ದೋಣಿಯನ್ನ ಸ್ಥಗಿತಗೊಳಿಸಿ ಪಕ್ಕದ ಅಗ್ರಗೋಣ ನದಿಯ ದಡದಲ್ಲಿ ಇರಿಸಲಾಗಿದೆ. ಈ ಬಗ್ಗೆ ಸಂಭಂಧ ಪಟ್ಟ ಇಲಾಖೆಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದ್ರೂ ಸಮಸ್ಯೆ ಹಾಗೆ ಉಳಿದುಕೊಂಡಿದೆ. ಕೇವಲ ಚುನಾವಣೆಯ ಸಮಯದಲ್ಲಿ ಆಶ್ವಾಸನೆ ನೀಡೋ ರಾಜಕಾರಣಿಗಳ ವಿರುದ್ಧ ಗ್ರಾಮಸ್ಥರು ಈಗ ತಿರುಗಿ ಬಿದ್ದಿದ್ದಾರೆ.

ಚುನಾವಣೆಗೆ ಇನ್ನೂ ಮೂರು ತಿಂಗಳು ಮಾತ್ರ ಬಾಕಿ ಇದೆ, ಸ್ಥಳೀಯ ಜನಪ್ರತಿನಿಧಿಗಳು ಮನಸ್ಸು ಮಾಡಬಹುದು. ಇಲ್ಲವಾದ್ರೆ ಗ್ರಾಮಕ್ಕೆ ಗ್ರಾಮದ ಜನರ ಮತಗಳೆ ಕೈ ತಪ್ಪಿಹೋಗೊದ್ರಲ್ಲಿ ಯಾವುದೆ ಅನುಮಾನವಿಲ್ಲ. ಆದಷ್ಟು ಬೇಗ ಈ ದ್ವೀಪ ಗ್ರಾಮದ ಜನರ ಸಮಸ್ಯೆಗೆ ಒಂದು ಪರಿಹಾರ ಸಿಗಲಿ ಅನ್ನೋದೇ ನಮ್ಮ ಆಶಯ..

ವರದಿ: ಉದಯ ಬರ್ಗಿ, ಬಿಟಿವಿ ಕಾರವಾರ