ಬಾಜು ಮನೆ ಮಕ್ಕಳಿಗೆ ಕೈ ಹಾಕುವುದು ಸರಿಯಲ್ಲ

ಬಿಜೆಪಿಗರು ರೆಸಾರ್ಟ್ ರಾಜಕಾರಣ ಮಾಡ್ತಾ ಇರೋದು ಸರಿಯಲ್ಲ ಎಂದು ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಹೇಳಿದ್ರು. ಧಾರವಾಡದಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರು ಬೆಂಗಳೂರಿನಲ್ಲೇ ಇದ್ದಾರೆ. ಬೇರೆ ಎಲ್ಲಿಯೂ ಹೋಗಿಲ್ಲ. ಸುರಕ್ಷತೆ ದೃಷ್ಟಿಯಿಂದ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ಕರೆದುಕೊಂಡು ಹೋಗಿದ್ದು ನಿಜ ಎಂದರು. ಇನ್ನು ಬಿಜೆಪಿಯವರಿಗೆ ಕೇಂದ್ರ ಸರ್ಕಾರ ಅವರ ಕೈಯಲ್ಲಿ ಇದೆ.

ad


ಅದಕ್ಕಾಗಿ ಆಡಳಿತ ಹಾಗೂ ಕಾನೂನು ದುರುಪಯೋಗ ಮಾಡಿಕೊಳ್ಳುತ್ತಾರೆ. ಹಾಗೇ ಅವರ ಮಕ್ಕಳ ಸಂಖ್ಯೆ ಕಡಿಮೆ ಇದೆ. ಅದಕ್ಕಾಗಿ ಬಾಜು ಮನೆಯ ಮಕ್ಕಳ ಕೈಗೆ ಹಾಕುವುದು ಸರಿಯಲ್ಲ. ತಮ್ಮ ಮಕ್ಕಳ ಸಂಖ್ಯೆ ಹೆಚ್ಚಿಗೆ ಮಾಡಿಕೊಳ್ಳಿ. ಅದನ್ನ ಬಿಟ್ಟು ಪ್ರಜಾಪ್ರಭುತ್ವ ವಿರುದ್ಧವಾಗಿ ಆಪರೇಷನ್ ಮಾಡುವುದು ಸರಿಯಲ್ಲ. ಜನರು ಇದನ್ನು ಒಪ್ಪುವುದಿಲ್ಲ. ಅಲ್ಲದೇ, ನಾಳೆಯೇ ಚುನಾವಣೆ ಆಗ್ಲಿ. ಅವರಿಗೆ ಬಹುಮತ ಬಂದ್ರೆ ಸರ್ಕಾರ ರಚನೆ ಮಾಡಿಕೊಳ್ಳಲಿ ಎಂದಿದ್ದಾರೆ