ಆಕೆ ಭಾರ ಎತ್ತುವಲ್ಲಿ ಚಾಂಪಿಯನ್.!! ಕಡು ಬಡತನ ಈಕೆಗಾಗಲಿಲ್ಲ ಅಡ್ಡಿ!!

ಮಗುವಿನ ಆಸೆ ಕನಸಿಗಾಗಿ ತಾಯಂದಿರು ತಮ್ಮ ಬದುಕನ್ನೇ ಮುಡುಪಾಗಿಡುತ್ತಾರೆ.ಅದ್ರೆ ಇಲ್ಲೊಬ್ಬಳು ಮಗಳು ಅಮ್ಮನ ಬದುಕಿನ ಭಾರ ಇಳಿಸುವಾಸೆಯಿಂದ ಭಾರವೆತ್ತುವ ಪಣ ತೊಟ್ಟಿದ್ದಾಳೆ. ಸ್ವಾತಿ ಎಂಬ ಕಾರ್ಕಳದ ಈ ಬಾಲಕಿ ಪವರ್ ಲಿಪ್ಟಿಂಗ್ನಲ್ಲಿ ಎರಡು ಕಂಚಿನ ಪದಕ ಪಡೆದು ಮಿಂಚಿದ್ದಾಳೆ.ಈ ಮುದ್ದು ಮುಖದ ಬಾಲೆಯ ಹೆಸರು ಸ್ವಾತಿ.ಈಕೆ ಓದಿರುವುದು ಪದವಿ.ಮನೆಯಲ್ಲಿ ತುಂಬ ಬಡತನ ತುಂಬಿದ್ರು ಕನಸಿನ ಹಾಗೂ ಛಲದ ಶ್ರೀಮಂತಿಕೆ ಈಕೆ ಪಾಲಿಗೆ ವರವಾಗಿದೆ.

ಸ್ವಾತಿ ತಾಯಿ ಗೀತಾ ಪೂಜಾರಿ ಕಾರ್ಕಳದಲ್ಲಿ ಮನೆಯಲ್ಲೆ ನೆಲೆಸಿಕೊಂಡು ,ಕಾರ್ಕಳದಲೊಂದು ಬಾಡಿಗೆ ಅಂಗಡಿ ಪಡೆದುಕೊಂಡು ಬಟ್ಟೆ ವ್ಯಾಪಾರ ನಡೆಸುತ್ತಿದ್ದಾರೆ .ಬಟ್ಟೆ ವ್ಯಾಪಾರ ಮಾಡಿ ಬದುಕು ಕಟ್ಟಿಕೊಳ್ಳುವುದಕ್ಕೆ ಪರದಾಟ ಮಾಡಿದ್ರು ಮಗಳು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು ಅನ್ನುವುದು ಅಮ್ಮನಾಸೆ.ಸ್ವಾತಿ ಪದವಿ ಪಡೆದಿರುವುದು ಕಾರ್ಕಳದ ಎಸ್ ವಿಟಿ ಕಾಲೇಜಿನಲ್ಲಿ. ಪವರ್ ಲಿಪ್ಟಿಂಗ್ ಮೂಲಕ‌ ಸಾಧಸಿ‌ ತಾಯಿಗೆ ನೆರವಾಗುವುದು ಸ್ವಾತಿಯ ಧ್ಯೇಯ. ಪದವಿ ಮುಗಿಸಿರುವ ಸ್ವಾತಿ ಕೆಎಎಸ್ ಪರೀಕ್ಷೆ ತಯಾರಿ ನಡೆಸುವುದರ ಜೊತೆ ಮತ್ತೊಂದು ಕಡೆ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ.ಇದೆಲ್ಲರ ಮಧ್ಯೆ ರಾಂಚಿಯಲ್ಲಿ ನಡೆದ ಪವರ್ ಲಿಪ್ಟಿಂಗ್ ನಲ್ಲಿ ಎರಡು ಕಂಚು ಗಿಟ್ಟಿಸಿಕೊಂಡ ಸ್ವಾತಿಗೆ ಸಪ್ಟೆಂಬರ್ ನಲ್ಲಿ ದುಬೈನಲ್ಲಿ ನಡೆಯುವ ಸ್ಫರ್ಧೆಯಲ್ಲಿ ಭಾಗಿಯಾಗುವ ಗುರಿ ಹೊಂದಿದ್ದಾರೆ.

ಕಾಲೇಜು ದಿನಗಳಲ್ಲಿ ಕುಸ್ತಿಯಲ್ಲಿ ಮಂಗಳೂರು ವಿವಿ ಮಟ್ಟದಲ್ಲಿ ಚಿನ್ನ ಹಾಗೂ ಒಂದು ಕಂಚಿನ ಪದಕ ಪಡೆದುಕೊಂಡಾಕೆ.ಥ್ರೋಬಾಲ್ ಹಾಗೂ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಪದಕ ಪಡೆದವರು.ಅದ್ರೆ ಸಾಧನೆಗಾಗಿ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಪವರ್ ಲಿಪ್ಟಿಂಗ್.ಪವರ್ ಲಿಪ್ಟಿಂಗ್ ಮೂಲಕ ಸಾಧನೆ ಮಾಡುವುದ ಜೊತೆ ಕೆಎಎಸ್ ಪಾಸ್ ಮಾಡಿ ಉದ್ಯೋಗ ಪಡೆದು ತಾಯಿ ಸಹಾಯ ಮಾಡೋದು ಸ್ವಾತಿಯ ಕನಸ್ಸು. ಬಡತನದ ನಡುವೆ ಸಾಧನೆಗಿಳಿದ ಸ್ವಾತಿಗೆ ಮತ್ತಷ್ಟು ಪ್ರೊತ್ಸಾಹ ದೊರಕಬೇಕಿದೆ.