ಅನುಮತಿ ಇಲ್ಲದೆ ಟಿವಿ ಚರ್ಚೆಯಲ್ಲಿ ಪಾಲ್ಗೊಂಡಿದ್ದಕ್ಕೆ ಮಹಿಳಾ ಕಾರ್ಪೋರೇಟರ್ ಗೆ ಕಾಂಗ್ರೆಸ್ ಶೋಕಾಸ್ ನೋಟೀಸ್!!

ಅನುಮತಿಯಿಲ್ಲದೆ ಟಿವಿ ಚರ್ಚೆಯಲ್ಲಿ ಪಾಲ್ಗೊಂಡ ಮಂಗಳೂರಿನ‌ ಸುರತ್ಕಲ್​ನ ಮಹಿಳಾ ಕಾರ್ಪೊರೇಟರ್ ಪ್ರತಿಭಾ ಕುಳಾಯಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಶೋಕಾಸ್ ನೋಟಿಸ್ ನೀಡಿದೆ. ರಾಜ್ಯ ನಾಯಕರ ಅನುಮತಿಯಿಲ್ಲದೆ ಟಿವಿ ಚರ್ಚೆಯಲ್ಲಿ ಪಾಲ್ಗೊಂಡಿದ್ದು ಸರಿಯಲ್ಲ. ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಇದು ಪಕ್ಷಕ್ಕೆ ಮುಜುಗರ ತಂದಿದೆ.

ad


ಇನ್ನು 7 ದಿನಗಳೊಳಗೆ ಉತ್ತರಿಸುವಂತೆ ನೋಟಿಸ್​ ಜಾರಿ ಮಾಡಿದೆ. ಇನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ತಾರ್ ಕಿರುಕುಳ ಆರೋಪಿಸಿ, ಸ್ವತಃ ಶಾಸಕ ಮೊಯಿದ್ದೀನ್ ಬಾವಾ ಕಚೇರಿಯಲ್ಲೇ ಸತ್ತಾರ್​ಗೆ ಕುಳಾಯಿ ಥಳಿಸಿದ್ದರು. ಈ ಘಟನೆ ಬಹಿರಂಗವಾದ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸತ್ತಾರ್​​​ನನ್ನು ವಜಾ ಮಾಡಲಾಗಿದೆ.