ಬಂದ ಅತಿಥಿ ಕಂಡು ಕಂಗಾಲಾದ್ರು ಮನೆಯವರು!

Davangere: Snake Found in Puja Mandir At House.
Davangere: Snake Found in Puja Mandir At House.

ದಾವಣಗೆರೆಯ ಹಳೆ ಕುಂದವಾಡದ ಚಂದ್ರಪ್ಪನವರ ಮನೆಯಲ್ಲಿಂದು ವಿಶೇಷ ಅತಿಥಿ ಭೇಟಿ ಕೊಟ್ಟಿದ್ರು.

ಹೌದು ಇಂದು ಮದ್ಯಾಹ್ನ ಚಂದ್ರಪ್ಪನವರ ಮನೆಯ ದೇವರ ಕೋಣೆಯಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿತ್ತು. ದೊಡ್ಡದಾದ ನಾಗರಹಾವು ಸುಮಾರು ನಾಲ್ಕು ಗಂಟೆಗಳ ಕಾಲ ಹೆಡೆ ಎತ್ತಿ ನಿಂತು ಮನೆಯವರ ಎದೆಯಲ್ಲಿ ನಡುಕ ಮೂಡಿಸಿತ್ತು.
ಸುಮ್ಮನೇ ಅದನ್ನು ಹೆದರಿಸುವ ಪ್ರಯತ್ನ ಮಾಡಿದರೂ ನಾಗಪ್ಪ ಜಾಗ ಬಿಟ್ಟು ಕದಲಿರಲಿಲ್ಲ.

ಕೊನೆಗೂ ಹೆದರಿನ ಮನೆಯವರು ಸ್ನೇಕ್​ ಪ್ರದೀಪ್​ಗೆ ಪೋನ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪ್ರದೀಪ್​ ಹಾವನ್ನು ಹಿಡಿದು ಕಾಡಿಗೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.  ಇನ್ನು ಇದೇ ಏರಿಯಾದಲ್ಲಿ ಹಲವು ಮನೆಗಳಿಗೆ ಕಳೆದ ಆರು ತಿಂಗಳಲ್ಲಿ ಹತ್ತಾರು ಹಾವುಗಳು ಕಾಣಿಸಿಕೊಳ್ಳುತ್ತಲೇ ಇದ್ದು ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಮಕ್ಕಳು ಸಂಚರಿಸುವ ದಾರಿಯಲ್ಲೇಲ್ಲ ಹೀಗೆ ಹಾವುಗಳು ಕಾಣಿಸಿಕೊಳ್ಳುತ್ತಿರೋದರಿಂದ ಜನರು ಆತಂಕಕ್ಕಿಡಾಗಿದ್ದು, ದೇವರ ಮೊರೆ ಹೋಗಲು ನಿರ್ಧರಿಸಿದ್ದಾರೆ.