ಕೋಲಾರದಲ್ಲಿ ಬಿಳಿ ವಜ್ರ ಇರುವ ಕಲ್ಲು ಬಂಡೆ ಪತ್ತೆ

ಕೆಜಿಎಫ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ.. ಇಡೀ ಪ್ರಪಂಚದಲ್ಲಿ ಅತಿ ಅಳವಾದ ಚಿನ್ನದ ಗಣಿ ಹೊಂದಿರುವ ಪ್ರದೇಶ ಕೆಜಿಎಫ್. ಸದ್ಯ ಚಿನ್ನ ಖಾಲಿಯಾಗಿ ದಶಕಗಳು ಕಳೆದಿವೆ ಅನ್ನುವಷ್ಟರಲ್ಲಿ ಈಗ ಚಿನ್ನದ ಜೊತೆಗೆ ಅತ್ಯಂತ ಹೆಚ್ಚು ಬೆಲೆಬಾಳುವ ಅಪರೂಪದಲ್ಲಿ ಅಪರೂಪವಾದ ಬಿಳಿವಜ್ರ, ಖನಿಜ ಸಂಪತ್ತು ಇರುವ ಬೃಹತ್​ ಬಂಡೆಯೊಂದು ಪತ್ತೆಯಾಗಿರುವ ಸ್ಟೋರಿ ಇಲ್ಲಿದೆ ನೋಡಿ…

ad

  
ಹೌದು ಹೀಗೆ ಬಿಳಿವಜ್ರ ನಿಕ್ಷೇಪ ಇದೆ ಎಂದು ಹೇಳಲಾಗುವ ಬೃಹತ್ ಗಾತ್ರದ ಕಪ್ಪು ಕಲ್ಲುಬಂಡೆ.. ಮತ್ತೊಂದೆಡೆ ಕಲ್ಲುಬಂಡೆಯಲ್ಲಿ ನೈಸರ್ಗಿಕವಾಗಿ ಬಂದಿರುವ ಬಿಳಿ ಗೆರೆಯನ್ನು ವೀಕ್ಷಣೆ ಮಾಡುತ್ತಿರುವ ಸ್ಥಳೀಯರು ಹಾಗೂ ಕಲ್ಲುಬಂಡೆ ಇರುವ ಸ್ಥಳವನ್ನು ಜಿಯೋಲಾಜಿಕಲ್ ಸರ್ವೇ ಅಫ್ ಇಂಡಿಯಾ ಸಂಸ್ಥೆಗೆ ಸೇರಿದೆ ಎಂದು ಬೋರ್ಡ್ ಹಾಕಿರುವುದು.. ಇನ್ನು ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಚಿನ್ನದನಾಡು ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಿನ್ನದಗಣಿಗೆ ಹೊಂದಿಕೊಂಡಂತೆ ಇರುವ ಪೆದ್ದಪಲ್ಲಿ ಎಂಬ ಗ್ರಾಮದರಲ್ಲಿ. ಹೌದು ಕೆಜಿಎಫ್ ಪಟ್ಟಣದಿಂದ ಕೊಗಳತೆ ದೂರದಲ್ಲಿರುವ ಈ ಪೆದ್ದಪಲ್ಲಿ ಗ್ರಾಮದ ಸರ್ವೇ 15 ಖರಬು ಜಮೀನು ಹಾಗೂ ಸರ್ವೇ ನಂ. 17 ರ ಹಿಡುವಳಿ ಜಮೀನಿನಲ್ಲಿ ಅಮೂಲ್ಯವಾದ ಖನಿಜ ಸಂಪತ್ತು ಇದೆ ಎನ್ನಲಾಗುತ್ತಿದೆ. ಕಳೆದ ಹದಿನೈದು ವರ್ಷಗಳಿಂದ ಈ ಗ್ರಾಮದ ಹೊರವಲಯದಲ್ಲಿರುವ ಸರ್ವೇ ನಂ 15 ಖರಾಬು ಜಮೀನಿನಲ್ಲಿರುವ ಬೃಹತ್ ಗಾತ್ರದ ಕಪ್ಪು ಬಣ್ಣದ ಕಲ್ಲುಬಂಡೆಗಳ ಇರುವ ಸ್ಥಳಕ್ಕೆ ಕೇಂದ್ರದ ಅಧಿಕಾರಿಗಳು, ವಿಜ್ಞಾನಿಗಳ ತಂಡ ಪದೇ ಪದೇ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗುತ್ತಿದ್ರು. ಒಮ್ಮೊಮ್ಮೆ ಬಂಡೆಗಳ ಕಲ್ಲುಚೂರನ್ನು ತಮ್ಮೊಂದಿಗೆ ಪರೀಕ್ಷೆಗೆ ಒಳಪಡಿಸಲು ಕೊಂಡೈಯತ್ತಿದ್ರು. ಇನ್ನು ಅಧಿಕಾರಿಗಳು ಪದೇ ಪದೇ ಬರುತ್ತಿದ್ದ ಹಿನ್ನಲೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ಈ ಜಮೀನಿನಲ್ಲಿ ಖನಿಜ ಸಂಪತ್ತ ಇದೆ, ಕಲ್ಲು ಬಂಡೆಗಳ ಭೂಮಿಯ ಕೆಳ ಭಾಗದಲ್ಲಿ ಬಿಳಿವಜ್ರ ನಿಕ್ಷೇಪ ಇದೆ ಎಂದು ಗ್ರಾಮಸ್ಥರು ಮಾತಾಡಿಕೊಂಡ್ರು. ಈ ಭಾಗದಲ್ಲಿ ಹೇರಳವಾದ ಖನಿಜ ಸಂಪತ್ತು ಇರುವುದನ್ನು ಅಧಿಕಾರಿಗಳು ಖಚಿತಪಡಿಸಿಲ್ಲವಾದರೂ ಗ್ರಾಮಸ್ಥರ ಮಾತನ್ನು ಅಲ್ಲೆಗೆಳೆಯುವಂತಿಲ್ಲ‌. ಆದ್ರೆ ಈ ಜಮೀನಿನಲ್ಲಿರುವ ಬೃಹತ್ ಗಾತ್ರದ ಕಲ್ಲುಬಂಡೆಗಳು ಮಾತ್ರ ಪ್ರಪಂಚದಲ್ಲಿ ಬೇರೆ ಎಲ್ಲಿ ಸಿಗದ ಅಪರೂಪದಲ್ಲಿ ಅಪರೂಪವಾದ ಕಲ್ಲುಬಂಡೆ ಎಂದು ಕೇಂದ್ರ ಸರ್ಕಾರದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಂಸ್ಥೆ ಗುರ್ತಿಸಿ ಈ ಸ್ಥಳವನ್ನು ಭಾರತದ ನೈಸರ್ಗಿಕ ಅದ್ಬುತ ಎಂದು ಡಿಕ್ಲೇರ್ ಮಾಡಿದೆ.

ಇನ್ನು ಸರ್ವೇ ಆಫ್ ಇಂಡಿಯಾ ಸಂಸ್ಥೆ ಈ ಪ್ರದೇಶವನ್ನು ವಿಜ್ಞಾನ ಪ್ರವಾಸಿಕೇಂದ್ರ ತಾಣವನ್ನಾಗಿ ಮಾಡಲು ಮುಂದಾಗಿದೆ. ಈಗಾಗಲೇ ಅಪರೂಪದ ಕಲ್ಲುಬಂಡೆ ಇರುವ ಜಮೀನಿನಲ್ಲಿ ಈ ಜಾಗ ಜಿಯೋಲಾಜಿಕಲ್ ಸರ್ವೇ ಆಪ್ ಇಂಡಿಯಾ ಅಧೀನದಲ್ಲಿ ಪಡೆದಿರುವುದಕ್ಕೆ ಬೋರ್ಡ್ ಗಳನ್ನು ಹಾಕಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಪರೂಪದ ಕಲ್ಲುಬಂಡೆ ಇರುವ ಜಮೀನುಗಳು ಸರ್ವೇ ನಡೆಸಿ ಹೋಗಿದ್ದಾರೆ.

ಇನ್ನು ಇಷ್ಟೂಕ್ಕೂ ಕುತೂಹಲಕ್ಕೆ ಕಾರಣವಾಗಿರುವ ಕಲ್ಲುಬಂಡೆಯನ್ನು ವೈಜ್ಞಾನಿಕವಾಗಿ ಫೈರಕ್ಲಾಸ್ಟಿಕ್ ಎನ್ನುತ್ತಾರೆ. 2500 ವರ್ಷಗಳ ಹಿಂದೆ ಈ ಭಾಗದಲ್ಲಿ ವಾಲ್ಕೆನೋ‌ ಸಂಭವಿಸಿದಾಗ ಈ ಅಪರೂಪದ ಕಲ್ಲುಬಂಡೆ ಉದ್ಭವವಾಗಿರಬಹುದು ಎಂದು ಭೂ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಭೂಮಿಯ ತಳಭಾಗದಲ್ಲಿ ಪದರಗಳು ಏರುಪೇರು ಸಂಭವಿಸಿದಾಗ ಒತ್ತಡ ತಾಳಲಾರದೆ ಜ್ವಾಲಾಮುಖಿ ಸ್ಫೋಟ ಸಂಭವಿಸಿ ಭೂಮಿಯಿಂದ ಕೆಂಪುಲಾವರಸ ಹೊರ ಬರುತ್ತದೆ. ಈ ಕೆಂಪುಲಾವರಸ ಹೊರಬಂದ ಕಲ್ಲಿನ ಪದರವೇ ಫೈರಕ್ಲಾಸ್ಟಿಕ್ ಜಮೀನಿನಲ್ಲಿ ಕಂಡು ಬಂದಿರುವ ಕಲ್ಲುಬಂಡೆಗಳು. ಇನ್ನು ಈ ಫೈರಕ್ಲಾಸ್ಟಿಕ್ ಕಲ್ಲುಬಂಡೆಯಲ್ಲಿ ಕೆಂಪು ಲಾವರಸ ಉಕ್ಕಿದಾಗ ಉಂಟಾಗಿರುವ ಗೇರೆಗಳು ಈಗಲೂ ಆಗೇ ಉಳಿದಿರುವುದು ನೈಸರ್ಗಿಕ ಅದ್ಭುತಕ್ಕೆ ಸಾಕ್ಷಿ.

ಈ ಕಲ್ಲುಬಂಡೆ ಅಪಾರ ಪ್ರಮಾಣದಲ್ಲಿ ಬೆಲೆ ಬಾಳಲಿದೆ ಎನ್ನುಲಾಗುತ್ತಿದೆ. ಈ ಭಾಗದಲ್ಲಿ ವಾಲ್ಕೆನೋ ಸಂಭವಿಸಿದಾಗ ಕೆಜಿಎಫ್ ನಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಯಿತು ಎಂದು ಹೇಳುವ ಭೂ ವಿಜ್ಞಾನಿಗಳು ಈ ಅಪರೂಪದ ಕಲ್ಲುಬಂಡೆಗಳು ಇರುವ ಜಮೀನಿನಲ್ಲಿ ಬಿಳಿವಜ್ರ ಸೇರಿದಂತೆ ಹಲವು ಖನಿಜ ಸಂಪತ್ತು ಇರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಂಸ್ಥೆ ನೈಸರ್ಗಿಕ ಅದ್ಭುತ ಎನ್ನಿಸಿರುವ ಅಪರೂಪದ ಕಲ್ಲುಬಂಡೆ ಇರುವ ಜಮೀನನ್ನು ತನ್ನ ವಶಕ್ಕೆ ಪಡೆದು ವಿಜ್ಞಾನ ಪ್ರವಾಸೋದ್ಯಮವಾಗಿ ಮಾಡುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಗ್ರಾಮಸ್ಥರು ಕಲ್ಲುಬಂಡೆ ಇರುವ ಕೆಳಗಡೆ ಬಿಳಿವಜ್ರ ಸೇರಿದಂತೆ ಹೇರಳವಾದ ಖನಿಜ ಸಂಪತ್ತು ಇದೆ ಎಂದು ಅಧಿಕಾರಿಗಳು ನಮ್ಮಗೆ ಮಾಹಿತಿ ನೀಡಿದ್ದಾರೆಂದು ಬಲವಾಗಿ ನಂಬಿದ್ದಾರೆ. ಆದ್ರೆ ಸರ್ವೇ ಆಫ್ ಇಂಡಿಯಾ ಸಂಸ್ಥೆ ಅಧಿಕಾರಿಗಳು ಯಾವುದೇ ಗುಟ್ಟುನ್ನು ಬಿಟ್ಟುಕೊಡದಿರುವುದು ಸ್ಥಳದ ಬಗ್ಗೆ ಸಾರ್ವಜನಿಕರಲ್ಲಿ ಬಹಳಾ ಕುತೂಹಲ ಮೂಡಿಸಿರುವುದಂತ ನಿಜ. ಎರಡು ಸರ್ವೇ ನಂಬರ ಜಮೀನಿನಲ್ಲಿ ಸುಮಾರು 14 ಎಕರೆಯಷ್ಟು ಈ ನೈಸರ್ಗಿಕ ಅಧ್ಬುತ ಕಲ್ಲುಬಂಡೆಗಳ ಸೃಷ್ಟಿಯಾಗಿದೆ.

 

ಒಟ್ಟಾರೆ ಒಂದು ಕಾಲದಲ್ಲಿ ಇಡೀ ಪ್ರಪಂಚಕ್ಕೆ ಚಿನ್ನಕೊಟ್ಟ ಕೆಜಿಎಫ್​ ಈಗ ಚಿನ್ನಕ್ಕಿಂತ ಬೆಲೆಬಾಳು ಅಪರೂಪದ ಕಲ್ಲುಬಂಡೆ ಕಂಡು ಬಂದಿದೆ. ಇನ್ನು ಸುತ್ತಮುತ್ತ ಗ್ರಾಮದ ಜನರಿಗೆ ಈ ಬಂಡೆಯಲ್ಲಿ ನಿಜವಾಗ್ಲೂ ಏನಿದೆ ಅಂತಾ ತಿಳಿಯಲು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಂಡೆಯಲ್ಲಿ ಏನೀದೆ ಅಂತಾ ಜನರಿಗೆ ಮಾಹಿತಿ ನೀಡಿ ಆ ಬಂಡೆಯನ್ನು ಸಂರಕ್ಷಿಸಲು  ಮುಂದಾಗ್ಲಿ ಎಂಬುವುದು ಎಲ್ಲರ ಆಶಯ..