ಇಲ್ಲಿ ಕೊತ ಕೊತ ಕುದಿತಿದೆ ಭೂಮಿ!! ಬಿಸಿ ಬುಗ್ಗೆಗೆ ಕಾರಣ ಏನು? ಇದು ಇರುವುದೆಲ್ಲಿ? ಎದೆಂತ ವಿಸ್ಮಯ?

ಬೆಂಕಿ ಜ್ವಾಲೆಗೆ ಕುದಿಯುತ್ತಿದೆ ಮಣ್ಣು, ಬೆಂಗಳೂರಿನ ಬೆಳ್ಳಂದೂರು ನಂತರ ಇದೀಗ ನೆಲಮಂಗಲ ಸರದಿ, ಭೂಮಿಯಲ್ಲಿ ಉಕ್ಕುತ್ತಿರುವ ಬೆಂಕಿ

 

ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡು ಪ್ರಕೃತಿಯಲ್ಲಿ ಕೌತುಕ ಮೂಡಿಸಿದೆ. ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಗಂಗಾಧರಯ್ಯನಪಾಳ್ಯ ಬಳಿ ನಡೆದಿದೆ. ಇಂದು ಬೆಳಗ್ಗೆ ಬಹಿರ್ದೆಸೆಗೆ ತೆರಳಿದ ಯುವಕ ಆಂಜಿನಪ್ಪನ ಕಾಲು ಬೆಂಕಿಯಿಂದ ಸುಟ್ಟು ಆಸ್ಪತ್ರೆಗೆ ತೆರಳಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

 

ಇನ್ನೂ ವಾತಾವರಣದಲ್ಲಿ ಬೇಸಿಗೆ ಸಮೀಪಿಸುತ್ತಿದಂತೆ ತಾಪಾ ಹೆಚ್ಚಾಗಿರುವ ಜೊತೆಗೆ, ಈ ರೀತಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನೆ ನಡೆದ ಗ್ರಾಮದ ಸುತ್ತ ಮುತ್ತ ಕೈಗಾರಿಕೆಗಳು ಇರುವದರಿಂದ ರಾಸಾಯನಿಕ ಪದಾರ್ಥಗಳು ಮಣ್ಣಿನಲ್ಲಿ ಬೆರೆತು ಇಂತಹ ಘಟನೆ ನಡೆದಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಇನ್ನೂ ಅಧಿಕಾರಿಗಳು ಭೇಟಿ ನೀಡಿ ಹೆಚ್ಚಿನ ಶೋಧ ನಡೆಸಿದಾಗ ಬೆಂಕಿಜ್ವಾಲೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲಿದೆ.

 

 

 

ವರದಿ: ಮಂಜುನಾಥ್​ ಜಿ ಬಿಟಿವಿ ನ್ಯೂಸ್​ ನೆಲಮಂಗಲ