ಅಯ್ಯೋ…. ದಮ್ಮಯ್ಯ.. ಯಾರಾದ್ರೂ ಕಾಪಾಡಿ… ಅನ್ನುವಂತಿದ್ದ ಅವನು ಕಾಪಾಡಿದ ಮೇಲೆ ಏನ್ಮಾಡಿದ ಗೊತ್ತಾ?

ನಮ್ಮನ್ನ ಕಷ್ಟದಿಂದ ಪಾರು ಮಾಡಿದ ಜನರ ವಿರುದ್ಧವೇ ನಾವು ಮುಗಿಬಿದ್ದರೇ ಹೇಗಿರುತ್ತೇ…? ಸಾಮಾನ್ಯವಾಗಿ ಬುದ್ಧಿವಂತ ಪ್ರಾಣಿಯಾದ ಮನುಷ್ಯ ಹಾಗೇ ಮಾಡಲಾರ. ಆದರೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಾದೀಹಳ್ಳಿಯಲ್ಲಿ ಮರಿಯಾನೆ ರಾತ್ರಿಯಿಡೀ ಕೆಸರಿನಲ್ಲಿ ಸಿಲುಕಿಕೊಂಡು ಪರದಾಡುತ್ತಿತ್ತು.. ಅಯ್ಯೋ, ಪಾಪ ಈ ಕಷ್ಟವನ್ನ ನೋಡಲು ಸಾಧ್ಯವಿಲ್ಲ ಅಂತಾ ಜೆಸಿಬಿ ಜೊತೆಗೆ ಓಡೋಡಿ ಬಂದ ಅರಣ್ಯ ಇಲಾಖೆ ಸಿಬ್ಬಂದಿ, ಮರಿಯಾನೆಯನ್ನ ಮೇಲೆತ್ತುವ ಅಪರೇಷನ್​ನ್ನ ಶುರು ಮಾಡಿದ್ರು.

ಕೊನೆಗೂ ಕಷ್ಟಪಟ್ಟು ಮರಿಯಾನೆಯನ್ನ ಜೆಸಿಬಿ ಸಿಬ್ಬಂದಿ ಮೇಲೆಕ್ಕೆತ್ತಿಯೇ ಬಿಟ್ರು.. ಆದರೆ ಅದ್ ಎಲ್ಲಿತ್ತೋ ಕೋಪ ಆ ಮರಿಯಾನೆಗೆ, ಪಾರುಮಾಡಿದ ಜೆಸಿಬಿ ಸಿಬ್ಬಂದಿ ಮೇಲೆ ಅಟ್ಯಾಕ್ ಮಾಡಲು ಮುಂದಾಯ್ತು. ಬದುಕಿದೆಯಾ ಬಡಜೀವ ಅಂತಾ ಯೋಚಿಸಿದ ಜೆಸಿಬಿ ಮೇಲೆ ಕುಳಿತ ಮಂದಿ ಪಕ್ಕಕ್ಕೇ ಹಾರಿ ಜೀವವನ್ನ ಉಳಿಸಿಕೊಂಡರು. ಮರಿಯಾನೆ ಅಂತಾ ಸ್ವಲ್ಪ ಯಾಮಾರಿದ್ರೂ ಕೂಡ ಇಬ್ಬರ ಪ್ರಾಣಕ್ಕೆ ಕುತ್ತು ತರೋ ಸಂಭವ ಸೃಷ್ಠಿಯಾಗಿತ್ತು.

 

ಕೊನೆಗೆ ಸುತ್ತಲೂ ಸೇರಿದ ಜನರನ್ನ ನೋಡಿ ಗಾಬರಿಯಾದ ಮರಿಯಾನೆಯೂ ಕೂಡ ಕಾಲಿಗೆ ಬುದ್ಧಿ ಹೇಳಿ ಕಾಡು ಸೇರಿಕೊಂಡಿತು. ಕೆಸರಿನಿಂದ ಎದ್ದು ಒಡಿದ ಬಳಿಕ ಜನರು ಕೂಡ ನಿಟ್ಟುಸಿರು ಬಿಟ್ಟರು.