ಸರ್ಕಾರದ ಸಾಧನೆ ತಿಳಿಸುವ ವಾಹನಕ್ಕೆ ಬೆಂಕಿ

ಸರ್ಕಾರದ ಸಾಧನೆ ತಿಳಿಸುವ ವಾಹನಕ್ಕೆ ಬೆಂಕಿ ಹತ್ತಿಕೊಂಡ ಘಟನೆ ವಿಜಯಪುರದ ಬಬಲೇಶ್ವರದಲ್ಲಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಮತಕ್ಷೇತ್ರ ಬಬಲೇಶ್ವರದಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಮಾಹಿತಿ ಬಿತ್ತರಿಸುವಾಗ ಬೆಂಕಿ ಹತ್ತಿಕೊಂಡಿದೆ.
ಅದೃಷ್ಟ ವಶಾತ್ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದು, ಯತೀಶ್ (6) ಹಾಗೂ ಗುರುಪ್ರಸಾದ(5) ಇಬ್ಬರು ಬಾಲಕರಿಗೆ ಸಣ್ಣ ಪುಟ್ಟ ಗಾಯಾಗಳಾಗಿವೆ.

ಇನ್ನು ಬೃಹತ್ ಎಲ್ ಇಡಿ ಮೂಲಕ ದೃಶ್ಯಾವಳಿ ಮೂಡಿಸುತ್ತಿದ್ದ ಅತ್ಯಾಧುನಿಕ ವಾಹನ ಸಂಪೂರ್ಣ ಭಸ್ಮವಾಗಿದ್ದು, ಕೋಟ್ಯಂತರ ರೂ.ಮೌಲ್ಯ ನಷ್ಟವಾಗಿದೆ. ಸ್ಥಳಕ್ಕೆ ಬಬಲೇಶ್ವರ ಪೋಲಿಸ್ ಠಾಣೆ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶ್ವಿಯಾಗಿದ್ದಾರೆ. ಆದ್ರೆ ವಾಹನದ ಮಾಲೀಕ ಪ್ರಕರಣ ದಾಖಲಿಸಲು ನಿರಾಕರಿಸಿದ್ದಾನೆ ಎನ್ನಲಾಗಿದೆ. ಇನ್ನು ಪೋಲಿಸ್ ರ ತನಿಖೆಯ ನಂತರ ಈ ಅನಾಹುತಕ್ಕೆ ನಿಖರ ಕಾರಣ ತಿಳಿದು ಬರಲಿದೆ…

ವರದಿ: ರುದ್ರೇಶ ಮುರನಾಳ, ಬಿಟಿವಿ ನ್ಯೂಸ್ ವಿಜಯಪುರ…