ಈ ತರಹದ ಮೀನನ್ನು ನೀವೆಲ್ಲಾದ್ರೂ ನೋಡಿದ್ದೀರಾ? ಇದರ ವಿಶೇಷತೆ ಇಲ್ಲಿದೆ ನೋಡಿ.

ಇದು ಅಂತಿತ ಮೀನಲ್ಲ ಕಣ್ರಿ.. ಇದು ನೋಡಲು ಥೇಟ್ ಏರೋಪ್ಲೇನ್ ತರಹನೇ ಇದೆ. ಸುಂದರವಾದ ಈ ಮೀನು ನೋಡಲು ಸಿಕ್ಕಿದ್ದು ಬೇರೆ ಯಾವ ದೇಶದಲ್ಲೂ ಅಲ್ಲ. ನಮ್ಮದೇ ರಾಜ್ಯ ಮಂಡ್ಯದಲ್ಲಿ.

ad


ಹೌದು. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇಶಹಳ್ಳಿ ಗ್ರಾಮದ ಕೆರೆಯಲ್ಲಿ ಏರೋಪ್ಲೇನ್ ಮಾದರಿಯ ಮೀನೊಂದು ಪತ್ತೆಯಾಗಿದೆ. ಮೀನಿನ ಬಣ್ಣ ಪೂರ್ತಿ ಕಂದು ಬಣ್ಣವಾಗಿದ್ದು, ತಿಮಿಂಗಿಲದ ರೀತಿ ಬಾಯಿ ದೊಡ್ಡದಾಗಿದೆ. ಇದು ಸಾಮನ್ಯವಾಗಿ ಉತ್ತರ ಭಾರತದಲ್ಲಿ ಕಾಣಿಸಿಕೊಳ್ಳುತ್ತೆ. ಆದ್ರೀಗ ನಮ್ಮಲ್ಲಿ ಪತ್ತೆಯಾಗಿರೋದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.