ಈ ದೇವರಿಗೆ ಮದ್ಯವೇ ಅಭಿಷೇಕ!! ಸಿಗರೇಟ್ ಧೂಪದಿಂದಲೇ ಆರತಿ!! ಕೋಳಿ ರಕ್ತವೇ ನೈವೇದ್ಯ!! ಆ ದೇವರ ಮೂಲ ಯಾವ್ದು ಗೊತ್ತಾ?

ಸಾಮಾನ್ಯವಾಗಿ ದೇವರಿಗೆ ನೈವೇದ್ಯ ಅಂತಾ ಹಣ್ಣು, ಹಂಪಲನ್ನ, ತಿಂಡಿ ತಿನಿಸುಗಳನ್ನು ಇಡುತ್ತಾರೆ. ಇನ್ನೂ ಹೆಚ್ಚಾಗಿ ಹಾಲು ತುಪ್ಪದಿಂದ ಅಭಿಷೇಕವನ್ನು ಮಾಡಿ ತುಪ್ಪದ ದೀಪದಿಂದ ಆರತಿ ಮಾಡಲಾಗುತ್ತದೆ. ಆದರೆ ಇಲ್ಲೊಂದು ದೇವರು ಮಾತ್ರ ಉಳಿದೆಲ್ಲಾ ದೇವರಿಗಿಂತ ಫುಲ್ ಡ್ರಿಫ್ರೆಂಟ್.. ಮತ್ತೇರಿಸುವ ಮದ್ಯದಿಂದಲೇ ಈ ದೇವರಿಗೆ ಅಭಿಷೇಕ ಮಾಡಿದರೆ, ಬೀಡಿ ಸಿಗರೇಟ್ ನಿಂದಲೇ ಆರತಿಯನ್ನ ಮಾಡ್ತಾರೆ. ಇದ್ರ ಜೊತೆಗೆ ಕೋಳಿಯ ರಕ್ತವನ್ನು ಸಹ ಈ ದೇವರಿಗೆ ನೈವೇದ್ಯವನ್ನ ಮಾಡಲಾಗುತ್ತದೆ. ಅರೇ ಯಾವುದಪ್ಪಾ ಈ ಡಿಫ್ರೆಂಟ್ ದೇವರು ಅಂದುಕೊಂಡ್ರಾ.. ಈ ವರದಿ ಓದಿ.. 

ಒಂದೆಡೆ ತರ ತರ ಬಾಟಲಿಯಿಂದ ತಂದಂತಹ ಮತ್ತೇರಿಸುವ ಮದ್ಯವನ್ನ ದೇವರಿಗೆ ಅಭಿಷೇಕದ ರೀತಿಯಲ್ಲಿ ಸುರಿಯುತ್ತಿರುವುದು. ಮತ್ತೊಂದೆಡೆ ಅದೇ ದೇವರಿಗೆ ಬೀಡಿ ಸಿಗರೇಟಿನಿಂದ ಆರತಿ ಮಾಡ್ತಾ ಇರೋದು.. ಅರೇ ಇದೇನಪ್ಪಾ ಫುಲ್ ಡಿಫ್ರೆಂಟ್ ಸಂಪ್ರದಾಯ ಅಲ್ವಾ ಅಂದುಕೊಂಡ್ರಾ. ಹೌದು ಈ ದೃಶ್ಯಗಳ ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೋಡಿಬಾಗದಲ್ಲಿ ನಡೆಯುವ ಖಾಪ್ರಿ ದೇವರ ಜಾತ್ರೆಯಲ್ಲಿ. ಸಾಮಾನ್ಯವಾಗಿ ಜಾತ್ರೆಗಳಲ್ಲಿ ದೇವರಿಗೆ ಹಣ್ಣು ಹಂಪಲು ಗಳನ್ನು ನೈವೇದ್ಯ ಮಾಡುತ್ತಾರೆ. ಇದಲ್ಲದೇ ಹಾಲಿನ ಅಭಿಷೇಕ, ಎಣ್ಣೆ , ಬೆಣ್ಣೆಯ ನೈವೇದ್ಯ ಸಹ ಮಾಡಲಾಗುತ್ತದೆ. ಆದರೆ ಈ ಖಾಪ್ರಿ ದೇವರ ಜಾತ್ರೆಯಲ್ಲಿ ಮಾತ್ರ ಸಮ್ ಥಿಂಗ್ ಸ್ಪೇಷಲ್. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಖಾಪ್ರಿ ದೇವರಿಗೆ ಹರಕೆಯನ್ನ ಇಟ್ಟುಕೊಂಡು ಬಂದಂತಹ ಭಕ್ತರು ಸಿಗರೇಟಿನಿಂದ ಆರತಿಯನ್ನ ಮಾಡೋದರ ಜೊತೆಗೆ ಮದ್ಯದಿಂದ ದೇವರಿಗೆ ಅಭಿಷೇಕವನ್ನ ಸಹ ಮಾಡ್ತಾರೆ. ಇದಲ್ಲದೇ ದೇವರಿಗೆ ಕೋಳಿ ಬಲಿಯನ್ನ ಕೊಟ್ಟು ರಕ್ತದಿಂದ ಸಹ ನೈವೇದ್ಯ ಮಾಡಲಾಗುತ್ತದೆ. ಖಾಪ್ರಿ ದೇವರು ಶಕ್ತಿ ದೇವರು ಆಗಿರುವುದರಿಂದ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಈ ರೀತಿಯ ಹರಕೆಯನ್ನು ಮಾಡಲಾಗುತ್ತದೆ.

ಖಾಪ್ರಿ ದೇವರಿಗೆ ತನ್ನದೇ ಆದ ಇತಿಹಾಸವೇ ಇದೆ. ಈ ದೇವರು ಆಫ್ರಿಕಾ ಮೂಲದೆನ್ನಲಾಗುತ್ತದೆ. ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ 300 ವರ್ಷಗಳ ಹಿಂದೆ ಇಲ್ಲಿಗೆ ಬಂದು ದೇವರನ್ನ ತಂದು ಪೂಜಿಸುತ್ತಿದ್ದನಂತೆ. ಆದಾದ ನಂತರ ಆತ ಕಣ್ಮರೆಯಾದನಂತೆ. ನಂತರ ಇಲ್ಲಿನ ಪರಸಪ್ಪ ಮನೆತನದವರು ಇದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಗಿತ್ತಂತೆ. ನಂತರ ಕನಸಿನಲ್ಲೂ ದೇವರು ಬಂದು ತನಗೆ ಕೋಳಿ ನೈವೇದ್ಯ ಮಾಡು ಅಂತಾ ಕೇಳಿಕೊಂಡಿದ್ದರಿಂದ ದೇವಸ್ಥಾನವನ್ನ ಕಟ್ಟಲಾಯಿತಂತೆ. ಈ ಜಾತ್ರೆ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದ್ದು ಪ್ರತಿ ವರ್ಷ ಇದೇ ರೀತಿ ದೇವರಿಗೆ ಫಲ ಪುಷ್ಪ, ಹಣ್ಣು ಕಾಯಿಯಯನ್ನ ಸಮರ್ಪಿಸುವ ಜೊತೆಗೆ ಸಾರಾಯಿ ಸಿಗರೇಟ್ ಕೋಳಿ ಅರ್ಪಿಸುವ ಮೂಲಕ ದೇವರನ್ನು ಸಂತೃಪ್ತಗೊಳಿಸುತ್ತಾರೆ.

ಇನ್ನು ಖಾಪ್ರಿ ಜಾತ್ರೆಯಲ್ಲಿ ಕೇವಳ ಹಿಂದುಗಳು ಜೊತೆ ಕ್ರಿಶ್ಚಿಯನ್ ಸಮುದಾಯದವರು ಪಾಲ್ಗೊಳ್ಳುತ್ತಾರೆ. ಕ್ರಿಶ್ಚಿಯನ್ನರು ದೇವರಿಗೆ ಕ್ಯಾಂಡೆಲ್ ಗಳನ್ನ ಹಚ್ಚಿ ತಮ್ಮ ಹರಕೆಯನ್ನ ಈಡೇರಿಸುತ್ತಾರೆ. ಪ್ರತಿ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯುವ ಈ ಜಾತ್ರೆಗೆ ಕೇವಲ ಕಾರವಾರದಿಂದ ಮಾತ್ರವಲ್ಲದೇ ನೆರೆಯ ಗೋವಾ ಮಹಾರಾಷ್ಟ್ರದಿಂದ ಸಹ ಭಕ್ತರು ಆಗಮಿಸುವ ಜೊತೆಗೆ ದೇವರಿಗೆ ಹೆಂಡ, ಸಿಗರೇಟು ಕೋಳಿಯನ್ನ ನೀಡಿ ತಮ್ಮ ಹರಕೆಯನ್ನ ಈಡೇರಿಸಿಕೊಳ್ಳುತ್ತಾರೆ. ಒಟ್ಟಾರೆ ಜನ ದೇವರನ್ನು ಒಲಿಸಿಕೊಳ್ಳಲು ಏನು ಬೇಕಾದ್ರು ಮಾಡುತ್ತಾರೆ ಎಂಬುದಕ್ಕೆ ಖಾಪ್ರಿ ದೇವರ ಜಾತ್ರೆಯೇ ಸಾಕ್ಷಿ ಎನ್ನಬಹುದು..

ವರದಿ : ಉದಯ ಬರ್ಗಿ ಬಿಟಿವಿ ನ್ಯೂಸ್ ಕಾರವಾರ