ನಿಮ್ಮ ಕಥೆ ಸಿನಿಮಾ ಆಗುವ ಸಮಯವಿದು: ಡೋಂಟ್ ಮಿಸ್..!

ಬೆಂಗಳೂರು (ಮಾ. 27): ಸಿನಿಮಾ ಮಾಡುವಂತಹ ಕಥೆಯೊಂದು ನಿಮ್ಮ ಬಳಿ ಇದೆಯಾ..? ನಿಮ್ಮಲ್ಲಿರುವ ಕಥೆ ಸಿನಿಮಾ ಮಾಡುವಂತಹದ್ದಾಗಿದ್ದರೆ ನಿಮಗೆ ಇಲ್ಲೊಂದು ಸುವರ್ಣಾವಕಾಶವಿದೆ. ನಿಮ್ಮೊಳಗೊಂದು ಕಥೆಯಿದ್ದು, ಅದೊಂದು ಒಳ್ಳೆಯ ಸಿನಿಮಾ ಆಗುತ್ತದೆ ಎಂಬ ನಂಬಿಕೆ ನಿಮಗಿದ್ದರೆ, ನಿಮ್ಮ ಕಥೆ ಕೇಳುವುದಕ್ಕೆ ನಾವಿದ್ದೇವೆ ಅಂತಿದ್ದಾರೆ ಜಮೀಲ್ ಸಾವಣ್ಣ ಹಾಗೂ ಆರ್.ಜೆ ಶ್ರೀನಿ.

WRITE KARNATAKA ಹೆಸರಲ್ಲಿ ನಿಮ್ಮ ಕಥೆ ಕೇಳಿ ಬಹುಮಾನ ನೀಡಲು ಸಾವಣ್ಣ ಪ್ರಕಾಶನದ ಮಾಲೀಕರು ಜಮೀಲ್, ನಿರ್ದೇಶಕರು ಶ್ರೀನಿ, ನಿರ್ದೇಶಕರು ಸತ್ಯ ಪ್ರಕಾಶ್, ಹಿರಿಯ ಪತ್ರಕರ್ತರು ಜೋಗಿ, ಬರಹಗಾರ್ತಿ ಹಾಗೂ ಪತ್ರಕರ್ತೆ ಶೃತಿ ಇರುವ ತಂಡ ಸಜ್ಜಾಗಿದೆ.

ಹೌದು.. ನಿಮ್ಮ ಕಥೆ ಸಿನಿಮಾ ಆಗುವ ಸಮಯವಿದು. ಸಿದ್ಧಿ ಎಂಟರ್’ಟೈನ್’ಮೆಂಟ್ಸ್ ವತಿಯಿಂದ ಸಾವಣ್ಣ ಪ್ರಕಾಶನದ ಜಮೀಲ್ ಹಾಗೂ ನಿರ್ದೇಶಕ ಶ್ರೀನಿ ನೇತೃತ್ವದಲ್ಲಿ ಕಥೆ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ನಿಮ್ಮ ಕಥೆ ಸಿನಿಮಾಗೆ ಆಯ್ಕೆಯಾದರೆ ಒಂದು ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಅಷ್ಟೇ ಅಲ್ಲ, ನೀವು ಬರೆದ ಕಥೆಗಳಲ್ಲಿ 20 ಕಥೆಗಳನ್ನು ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ. ಆಯ್ಕೆ ಆದ 20 ಕಥೆಗಳನ್ನು ಸಾವಣ್ಣ ಪ್ರಕಾಶನದಿಂದ ಪುಸ್ತಕ ಮಾಡಲಿದ್ದಾರೆ. ಜೊತೆಗೆ ಈ ಕಥೆಗಳನ್ನು ಬರೆದವರಿಗೆ ನಿರ್ದೇಶಕ ಪವನ್ ಕುಮಾರ್ ಅವರು ಸಕ್ರೀನ್’ಪ್ಲೇ ಮತ್ತು ಬರವಣಿಗೆ ಕುರಿತು ಒಂದು ದಿನದ ವರ್ಕ್’ಶಾಪ್ ನಡೆಸಲಿದ್ದಾರೆ.

ಇನ್ಯಾಕೆ ತಡ. ಬೇಗ ಬೇಗ ಕತೆ ಬರೆದು writekarnataka@gmail.com ಗೆ ಇ-ಮೇಲ್ ಮಾಡಿ. ಕಥೆ ಕಳುಹಿಸಲು ಏಪ್ರಿಲ್ 30 ಕೊನೆಯ ದಿನಾಂಕ.