ಈತ ೧೮ ವರ್ಷದಿಂದ ಆಹಾರವನ್ನೇ ಸೇವಿಸಿಲ್ಲ- ಅಚ್ವರಿಯಾದರೂ ಇದು ಸತ್ಯ

 

ad

ಹಿಂದೆಲ್ಲ ಋಷಿ ಮುನಿಗಳು ದೀರ್ಘ ಕಾಲದ ವರೆಗೆ ನಿರಾಹಾರಿಗಳಾಗಿ ಇದ್ದು ದೇಹದ ಸಮತೋಲನವನ್ನು ಕಾಯ್ದುಕೊಳ್ಳುತ್ತಿದ್ರು. ಆದ್ರೇ ಈ ಪದ್ಘತಿ ಇತ್ತೀಚಿನ ದಿನದಲ್ಲಿ ಪಾಲಿಸುತ್ತಿರಲಿಲ್ಲ. ಇಲ್ಲೊಬ್ಬ ಕಲಿಯುಗ ಕರ್ಣ ನಿರಾಹಾರಿಗಳಾಗಿ ಬದುಕುತ್ತಿದ್ದಾನೆ ಅಂದ್ರೇ ನೀವು ಅಚ್ಚರಿ ಪಡಲೇಬೇಕು. ಆಹಾರ ಸೇವಿಸದೇ ದೀರ್ಘ ಕಾಲದವರೆಗೆ ಬದುಕು ಬಾಳುತ್ತಿದ್ದಾನೆ. ಹಾಗಿದ್ರೇ ಆ ದೀರ್ಘ ಯೋಗಿ ಯಾರು ಅಂತೀರಾ? ಈ ಸ್ಟೋರಿ ಓಮ್ಮೆ ಓದಿ

ಮಾನವ ಆರೋಗ್ಯ ಸೇವಿಸದೇ ಬದುಕಿರಲು ಸಾಧ್ಯವಿಲ್ಲ ಅಂತಾರೆ. ಆದ್ರೇ ಯೋಗ.. ಪ್ರಾಣಾಯಾಮ ಕಲಿತಿರುವ ಯೋಗಿಗಳ ಅಲ್ಪ ಸ್ವಲ್ಪ ದಿನಗಳ ಕಾಲ ಆಹಾರ ಸೇವಿಸದೇ ಇರ್ತಾರೆ. ಬಹು ದೀರ್ಘ ಕಾಲದ ವರೆಗೆ ಆಹಾರ ಸೇವಿಸದೇ ಜೀವನ ಬಹುದು ಅನ್ನೋದನ್ನ ಇಲ್ಲೊಬ್ಬ ಮಹಾನುಭಾವ ತೋರಿಸಿದ್ದಾನೆ. ಈತನೇ ಕಲಿಯುಗದ ಕರ್ಣ ಅಮೇರಿಕಾ ಮೂಲದ 50 ವರ್ಷ ಪ್ರಾಯದ ಎಲಿ ಟಾಮ್. ಸಾಮಾನ್ಯವಾಗಿ ಆರೋಗ್ಯವಂತ ಮಾನವ ಆಹಾರವನ್ನೇ ಸೇವಿಸದೆ 21 ದಿನಗಳವರೆಗೆ ಜೀವಿಸಬಹುದು ಎಂದು ವಿಜ್ಞಾನ ನಮಗೆ ಹೇಳುತ್ತೆ. ಆಮೇರಿಕಾದ ಎಲಿ ಟಾಮ್ ಬರೋಬ್ಬರಿ 18 ವರ್ಷಗಳಿಂದ ನಿರಾಹಾರಿಯಾಗಿ ಇದ್ದು ತುಂಬಾ ಅಚ್ಚರಿ ಮೂಡಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಕಡ್ಲೆ ಗ್ರಾಮದಲ್ಲಿರೋ ಅಶ್ವಿನಿ ಆಯುರ್ವೇದಿಕ್ ಕೇಂದ್ರಕ್ಕೆ ಒಂದು ವಾರದ ಹಿಂದೆ ಬಂದಿರುವ ಎಲಿ ಟಾಮ್ ಈಗ ಎಲ್ಲರ ಕೇಂದ್ರಬಿಂದುವಾಗಿ ಮಾರ್ಪಟ್ಟಿದ್ದಾರೆ. ಇಷ್ಟಕ್ಕೂ ಎಲಿ ಟಾಮ್ ಬಹು ದೀರ್ಘ ಕಾಲದವರೆಗೆ ನಿರಾಹಾರಿ ಆಗಿರಲು ಪ್ರಯತ್ನ ನಡೆಸಿದ್ರು. ಅದು ಕ್ರಮೇಣ ಫಲ ನೀಡಲು ಆರಂಭಿಸಿತು. ಇದನ್ನೇ ಒಂದು ಪ್ರಯೋಗಾತ್ಮಕವಾಗಿ ಮಾಡಿಕೊಂಡ ಎಲಿ ಟಾಮ್ ಈಗ ಬಹು ದೀರ್ಘ ಕಾಲದವರೆಗೆ ಅಂದ್ರೇ ಕಳೆದ 18 ವರ್ಷದಿಂದ ಆಹಾರ ಸೇವಿಸದೇ ನಿರಾಹಾರಿ ಜೀವಿಸುತ್ತಿದ್ದಾರೆ.

ಅಮೇರಿಕಾದ ಎಲಿ ಟಾಮ್ ಈಗ ಜಗತ್ತಿನ ಕಣ್ಣು ತೆರಸಿದ ಮನುಷ್ಯ. ಇವರು ಇದ್ದಕ್ಕಿದ್ದಂತೆ ಆಹಾರ ಸೇವನೆ ಬಿಟ್ಟಿಲ್ಲ, ಹಂತಹಂತವಾಗಿ ನಿಲ್ಲಿಸುವ ಮೂಲಕ ಪ್ರಯೋಗ ನಡೆಸಿದ್ರು. ಆರಂಭದಲ್ಲಿ ವಾರಕ್ಕೆ ಒಂದು ದಿನ ಮಾತ್ರ ಉಪವಾಸ ಮಾಡಿದ್ರು. ಬಳಿಕ ವಾರಕ್ಕೆ ಎರಡು ದಿನ ನಿರಾಹಾರಿಯಾದ್ರು. ಇದನ್ನೇ ಪ್ರಯೋಗ ಮಾಡಿಕೊಂಡ ಎಲಿ ಟಾಮ್ ಬಳಿಕ ವಾರಕ್ಕೆ ಮೂರು ದಿನ ಉಪವಾಸವಿದ್ರು. ನಾಲ್ಕೈದು ವರ್ಷಗಳಾಗುವಾಗ ವಾರಕ್ಕೆ ಆರು ದಿನ ಆಹಾರ ತ್ಯಜಿಸಿದ್ರು. ಹೀಗೆ ಇವರು ನಿರಾಹಾರಿಯಾಗಿ ಜೀವಿಸುವುದನ್ನು ಕರಗತ ಮಾಡಿಕೊಂಡು ಈಗ 18 ವರ್ಷಗಳಾಗಿವೆ. ಮರದಂತೆ ಗಾಳಿ ಬೆಳಕನ್ನು ಸೇವನೆ ಮಾಡಿ ಬದುಕುತ್ತಿದ್ದಾರೆ. ಸದ್ಯ ಎಲಿ ಟಾಮ್ ಗೆ ಗಾಳಿ ಮತ್ತು ಸೂರ್ಯನ ಬಿಸಿಲೇ ಆಹಾರ. ಎಲಿ ಅವರ ಈ ಹಠ ಸಾಧನೆಯ ಬಗ್ಗೆ ಆಯುರ್ವೇದಿಕ್ ಕೇಂದ್ರದ ವೈದ್ಯ ಡಾ.ರವಿರಾಜ್ ಕಡ್ಲೆ ತುಂಬಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಟಾಮ್ ಮಾಡುತ್ತಿರುವುದು ಸಣ್ಣ ತಪಸ್ಸು ಅಲ್ಲ. ಅವರ ಮಾತುಗಳನ್ನು, ದಿನಚರಿಯನ್ನು ಗಮನಿಸಿದಾಗ ನನಗಲ್ಲಿ ಕಪಟ ಅನ್ನಲು ಸಾಧ್ಯವಿಲ್ಲ. ಕಳೆದ 10 ತಿಂಗಳ ಹಿಂದೆ ಒಮ್ಮೆ ಬಲವಂತವಾಗಿ ಆಹಾರ ಸೇವಿಸಿದ್ದ ಟಾಮ್ ತನ್ನ ದೇಹದೊಳಗಿನ ಕಲ್ಮಶವನ್ನು ಹೊರಹಾಕಲು ವಾರಕ್ಕೊಮ್ಮೆ 2 ಲೀಟರ್ ನೀರು ಸೇವಿಸಿದ್ರು. ಸದ್ಯ ಟಾಮ್ ಕಾಯಕಲ್ಪ ಚಿಕಿತ್ಸೆ ಪಡೆಯಲು ಡಾ. ರವಿರಾಜ್ ಕಡ್ಲೆ ಅವರ ಪಂಚಕರ್ಮ ಕೇಂದ್ರಕ್ಕೆ ಆಗಮಿಸಿದ್ದಾರೆ. ಇಷ್ಟಕ್ಕೂ ಎಲಿ ಟಾಮ್ ನಿರಾಹಾರಿಯಾಗಿ ಜೀವಸಬಹುದು ಎಂದು ತೋರಿಸಿಕೊಟ್ಟಿದೆ ಪ್ರಾಣಾಯಾಮ. ಪ್ರಾಣಾಯಾಮದಿಂದ ಟಾಮ್ ದೇಹ.. ಮಿದುಳು.. ಮಾತು ಕೇಳುವಂತೆ ಸಿದ್ದತೆ ಮಾಡಿಕೊಂಡಿದ್ದಾರೆ. ಹೀಗಾಗಿ ಟಾಮ್ ದೇಹ ಈಗ ಉಪವಾಸಕ್ಕೂ ಸಹಕರಿಸುತ್ತಿದೆ. ಅಮೇರಿಕಾ ಎಲಿ ಟಾಮ್ ಈಗ ಜಗತ್ತಿನ ಜನರು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಟಾಮ್ ಪ್ರಯೋಗ ಇನ್ನು ಮುಂದುವರಿಯಲಿ ಅನ್ನೋದೇ ಆಶಯ.