ಗರಂ-ಗರಂ-ತಂದೂರಿ-ಚಾಯ್..

ತಂದೂರಿ ಚಿಕನ್, ತಂದೂರಿ ಮಟನ್ ಹೀಗೆ ತಂದೂರಿಯ ಬಗೆಬಗೆಯ ಖಾದ್ಯಗಳನ್ನು ತಿಂದಿರಬಹುದು. ಕೇಳಿರಬಹುದು.. ಆದರೆ ಈಗ ಉತ್ತರ ಭಾರತದಲ್ಲಿ ತಂದೂರಿ ಚಾಯ್ ನದ್ದೇ ಹವಾ..

ಏನಿದು ತಂದೂರಿ ಚಾಯ್​ ಅಂತಾನಾ..? ಮೊದಲು ಕೆಂಡದೊಳಗೆ ಪುಟ್ಟ ಪುಟ್ಟ ಮಣ್ಣಿನ ಮಡಿಕೆಗಳನ್ನು ಕಾಯಿಸಲಾಗುತ್ತೆ. ಸುಡುಬಿಸಿಯ ಮಡಿಕೆಯೊಳಗೆ ಬಿಸಿಯಾದ ಚಾಯ್ ನ್ನು ಸುರಿದಾಗ ಅದು ಬುಗ್ಗೆಂದು ಉಕ್ಕಿ ಕೆಳಗಿನ ಪಾತ್ರೆಯನ್ನು ತುಂಬುತ್ತದೆ. ಈ ಬಿಸಿ ಬಿಸಿ ಟೀಯನ್ನು ಕಪ್ ನಲ್ಲಿ ಹಾಕಿ ಗ್ರಾಹಕರಿಗೆ ಕೊಡಲಾಗುತ್ತದೆ.

 

ಮಸ್ತಾದ ಮಸಾಲಾ ಟೀಗೆ ಸುಟ್ಟ ಮಡಿಕೆಯ ಫ್ಲೆವರ್ ಸೇರಿ ಚಹಾದ ಸ್ವಾದ ಇಮ್ಮಡಿಯಾಗುತ್ತದೆ. ಫರಿದಾಬಾದ್ ನ ಸೂರಜ್​ ಕುಂಡ ಮೇಳದಲ್ಲಿ ಈ ತಂದೂರಿ ಚಹಾದ ಕಾರುಬಾರು ಬಲು ಜೋರಾಗಿದ್ದು ಗ್ರಾಹಕರ ದಿಲ್ ಖುಷ್ ಮಾಡುತ್ತಿದೆ.