ಹಾಲಿನಲ್ಲಿ ಮೂಡಿತು ಹನುಮನ ಪಾದ- ಪವಾಡ ಕಣ್ತುಂಬಿಕೊಳ್ಳಲು ಜನಸಾಗರ!!

ಗಣೇಶ ಹಾಲು ಕುಡಿದಿದ್ದು, ಸಾಯಿಬಾಬಾ ವಿಭೂತಿ ಕೊಟ್ಟಿರೋ ವೈಚಿತ್ರ್ಯಗಳನ್ನೆಲ್ಲ ನೀವು ನೋಡಿದ್ದೀರಾ. ಇದೀಗ ಈ ಸಾಲಿಗೆ ಹುಬ್ಬಳ್ಳಿಯ ಆಂಜನೇಯನ ಪಾದವೂ ಸೇರಿದೆ. ಹೌದು ವಾಣಿಜ್ಯ ನಗರಯಲ್ಲಿ ಹಾಲಿನಲ್ಲಿ ಹನುಮನ ಪಾದ ಮೂಡಿಬಂದಿದ್ದು, ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ.


ಹಳೇಹುಬ್ಬಳ್ಳಿಯ ಶರಾವತಿ ನಗರದ ಮಾರುತಿ ದೇವಸ್ಥಾನದಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ. ಇಲ್ಲಿ ಕಳೆದ 24 ವರ್ಷದ ಹಿಂದೆ ಆಂಜನೇಯನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೇ ಅಲ್ಲಿ ಆಂಜನೇಯನ ಪಾದ ಸ್ಥಾಪಿಸಿರಲಿಲ್ಲ. ಇದೀಗ ದೇವರ ಪಾದ ಸ್ಥಾಪನೆಗಾಗಿ ಹೊಸ ಪಾದಗಳನ್ನು ತಂದು ಸಂಪ್ರದಾಯದಂತೆ ಹಾಲಿನಲ್ಲಿ ಪಾದಗಳನ್ನು ಇಡಲಾಗಿತ್ತು. ಹಾಲಿನಲ್ಲಿ ಇಡಲಾದ ಪಾದದ ಮೇಲ್ಬಾಗದಲ್ಲಿ ಹೀಗೆ ಅಚ್ಚು ಮೂಡಿ ಬಂದಿದೆ.

ಹೀಗೆ ಹಾಲಿನಲ್ಲಿ ಹನುಮನ ಪಾದ ಮೂಡಿ ಬಂದಿರುವ ಸುದ್ದಿ ಹಬ್ಬುತ್ತಿದ್ದಂತೆ ನೂರಾರು ಜನರು ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ಹನುಮನ ಪಾದದ ಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದು ದೇವರ ಪವಾಡ. ದೇವರು ಇಲ್ಲಿ ನೆಲೆಸಿದ್ದಾನೆ ಅನ್ನೋದಿಕ್ಕೆ ಇದು ಸಾಕ್ಷಿ ಅಂತಿದ್ದಾರೆ ಸ್ಥಳೀಯರು.