ಕುಮಟಾದಲ್ಲಿ ಭಾರೀ ಟಿಕೆಟ್ ರಾಜಕೀಯ!! ಯಾರಿಗೆ ಸಿಗಲಿದೆ ಕೈ ಟಿಕೆಟ್?

ಈಗಾಗಲೇ ರಾಜ್ಯವಿಧಾನಸಭೆ ಚುನಾವಣೆಗೆ ಅಖಾಡ ಸಿದ್ದವಾಗಿದೆ. ಎಲ್ಲಾ ಪಕ್ಷದಲ್ಲಿಯೂ ಟಿಕೇಟ್ ಹಂಚಿಕೆ ಜೋರಾಗಿದೆ. ಯಾವ ಕ್ಷೇತ್ರದಿಂದ ಯಾರು ಸ್ಪರ್ಧೆಮಾಡಬಹುದು. ಈ ಬಾರಿ ಟಿಕೇಟ್ ಸಿಗಬಹುದಾ..? ಇಲ್ಲ ಕೈ ತಪ್ಪುತ್ತೆ ಎನ್ನುವ ಆತಂಕ ಆಕಾಂಕ್ಷಿಗಳಿಗೆ ಇದ್ರೆ. ಇನ್ನೂ ಯಾರಿಗೆ ಟಕೇಟ್ ತಪ್ಪಿಸಿ ಇನ್ನಯಾರಿಗೆ ಕೊಡಬಹುದು ಎನ್ನುವ ಕುತೂಹಲ ಮತದಾರಲ್ಲಿದೆ. ಹಾಗೇನೆ ಉತ್ತರಕನ್ನಡ ಜಿಲ್ಲೆಯ ಕುಮಟ ವಿಧಾನಸಭಾ ಕ್ಷೇತ್ರದಲ್ಲಿಗ ಹಾಲಿ ಕಾಂಗ್ರೆಸ್ ಶಾಸಕಿ ಶಾರದಾ ಮೋಹನ್ ಶೆಟ್ಟಿ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೇಟ್ ತಪ್ಪಿಸುವ ಬಗ್ಗೆ ಭಾರೀ ಕಸರತ್ತು ನಡೀತಾ ಇದೆ.

ಇದೀಗ ಮಾರ್ಗೇರೆಟ್ ಆಳ್ವಾ ಪುತ್ರ ನಿವೇದಿತಾ ಆಳ್ವಾ ಕುಮಟ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಇದುವರೆಗೂ ನಿವೇದಿತಾ ಆಳ್ವಾ ಶಿರಸಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಉತ್ಸಾಹ ತೋರಿಸಿದ್ರು. ಆದ್ರೆ ಇಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ಭೀಮಣ್ಣ ನಾಯ್ಕ ಅವರಿಗೆ ಬಹುತೇಕ ಕಾಂಗ್ರೆಸ್ ಟಿಕೇಟ್ ಪಕ್ಕಾ ಆಗಿದೆ ಆಂತಾ ಹೇಳಲಾಗ್ತಾ ಇದೆ. ಈ ಹಿಂದೆ ಉತ್ತರಕನ್ನಡ ಜಿಲ್ಲೆಯಲ್ಲಿ ದೇಶಪಾಂಡೆ ಬಣ ಹಾಗೂ ಆಳ್ವಾ ಎನ್ನುವ ಎರಡು ಬಣ ರಾಜಕೀಯ ಜಿಲ್ಲೆಯಲ್ಲಿ ಹುಟ್ಟಿಕೊಂಡಿತ್ತು. ಆದ್ರೆ ಈಗ ಆ ಎರಡು ನಾಯಕರು ಒಂದಾಗಿದ್ದಾರೆ.

ಶಾರದಾ ಶೆಟ್ಟಿ
ಶಾರದಾ ಶೆಟ್ಟಿ

ಭೀಮಣ್ಣ ನಾಯ್ಕ ಪ್ರಬಲ ಸಮಾಜಕ್ಕೆ ಸೇರಿರುವುದರಿಂದ ಅವರಿಗೆ ಈ ಬಾರಿ ಟಿಕೇಟ್ ತಪ್ಪಿಸಿದ್ರೆ ಕಷ್ಟವಾಗಲಿಗೆ. ಅಲ್ಲದೆ ಅವರಿಗೆ ಬಿಜೆಪಿಯವರು ಗಾಳ ಹಾಕತ್ತಾ ಇರೋದ್ರಿಂದ ಒಂದು ವೇಳೆ ಭೀಮಣ್ಣ ನಾಯ್ಕ ಬೆಜೆಪಿ ಸೇರಿದ್ರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ದೊಡ್ಡ ಆಘಾತ ಆಗತ್ತೆ ಎನ್ನುವುದನ್ನ ಅರಿತ ಕಾಂಗ್ರೆಸ್ ಭೀಮಣ್ಣ ನಾಯ್ಕ ಅವರಿಗೆ ಶಿರಸಿ ಕ್ಷೇತ್ರದಲ್ಲಿ ಟಿಕೇಟ್ ಕನ್ಫಾರ್ಮ ಮಾಡಲಾಗಿದೆ.

ಮಾರ್ಗರೇಟ್ ಆಳ್ವ

ಇನ್ನೂ ತನ್ನ ಮಗನಿಗೆ ರಾಜಕೀಯದಲ್ಲಿ ನೆನೆ ಕಾಣಿಸಬೇಕು ಅಂತಾ ಪಣತೊಟ್ಟಿರುವ ಮಾರ್ಗರೇಟ್ ಆಳ್ವ ಕುಮಟ ಕ್ಷೇತ್ರದ ಶಾಸಕಿ ಶಾರದಾ ಶೆಟ್ಟಿ ಅವರಿಗೆ ಟಿಕೇಟ್ ತಪ್ಪಿಸಿ ಅವರ ಜಾಗದಲ್ಲಿ ತನ್ನ ಮಗ ನಿವೇದಿತಾ ಆಳ್ವಾ ಅವರಿಗೆ ಟಿಕೇಟ್ ಕೊಡಿಸಲು ಕಾಂಗ್ರೆಸ್ ಹೈಕಮಾಂಡ್ ಮೇಲೆ ಭಾರೀ ಒತ್ತಡ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್ ವಿ ದೇಶಪಾಂಡೆ ಸಹ ಕೈ ಜೋಡಿಸಿರೋದು ಗುಟ್ಟಾಗಿ ಉಳಿದಿಲ್ಲ. ದೇಶಪಾಂಡೆ ಆಳ್ವಾ ಜೊತೆ ಕೈ ಜೋಡಿಸಿರೋದಕ್ಕೂ ಒಂದ ಕಾರಣ ಇದೆ. ಬರು ಲೋಕಸಭಾ ಚುನಾವಣೆಯಲ್ಲಿ ತನ್ನ ಮಗ ಪ್ರಶಾಂತ ದೇಶಪಾಂಡೆ ಗೆಲ್ಲಿಸಬೇಕಾದ್ರೆ ಇದೆ ಮಾರ್ಗರೇಟ್ ಆಳ್ವ ಅವರ ಆರ್ಶಿವಾದ ಬೇಕಾಗಿದೆ. ಹೀಗಾಗಿ ಈ ಇಬ್ಬರೂ ನಾಯಕರು ಸೇರಿ ತಮ್ಮ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಗೆದ್ದವರ ಸ್ಥಾನಕ್ಕೆ ಪೆಟ್ಟು ನೀಡಲು ಮುಂದಾಗಿರೋದಂತು ಸತ್ಯ.

ವರದಿ: ಉದಯ ಬರ್ಗಿ ಬಿಟಿವಿ ನ್ಯೂಸ್ ಕಾರವಾರ