ಇವತ್ತು ಅಮಾವಾಸ್ಯೆ.. ನಾವು ಸಭೆಗೆ ಬರಕ್ಕಾಗಲ್ರಿ..

ಮೌಢ್ಯ ನಿಷೇಧಿಸಬೇಕಾದವರಿಂದಲೇ ಮೌಢ್ಯಾಚರಣೆ

ಮೌಢ್ಯ ನಿಷೇಧ ಆಗಲೇಬೇಕು ಅಂತ ಸರಕಾರ ಪಟ್ಟು ಹಿಡಿದಿರುವ ಬೆನ್ನಲ್ಲೇ ಇತ್ತ ಕಾಂಗ್ರೆಸ್​ ಅಧಿಕಾರದಲ್ಲಿರುವ ವಿಜಯಪುರ ಜಿಲ್ಲಾ ಪಂಚಾಯಿತಿ ಸರ್ಕಾರವನ್ನು ಮುಜುಗರಕ್ಕೀಡು ಮಾಡುವಂತಹ ಕೆಲಸ ಮಾಡಿದೆ.

ಶನಿವಾರದಂದು ಆಯೋಜಿಸಲಾಗಿದ್ದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ. ಕಾರಣ ಏನೆಂದರೆ… ಚಟ್ಟಿ ಅಮವಾಸ್ಯೆ ಇರುವುದರಿಂದ ನಿಗದಿಯಾದ ಸಭೆಯನ್ನು ರದ್ದುಗೊಳಿಸಿರುವುದು ಸರ್ಕಾರವೇ ಮೌಢ್ಯಕ್ಕೆ ಜೋತು ಬಿತ್ತಾ ಎನ್ನುವಂತಿದೆ.

ಎಲ್ಲ ಸದಸ್ಯರು ಒತ್ತಡ ಹಾಕಿದ್ದಕ್ಕೆ ಅಧ್ಯಕ್ಷರು ಸಭೆಯನ್ನು ನವೆಂಬರ್​ 28ಕ್ಕೆ ನಿಗದಿ ಮಾಡಿರುವುದು ಸರ್ಕಾರದ ಮೌಢ್ಯ ನಿಷೇಧ ಕಾಯ್ದೆಗೆ ಹಿನ್ನೆಡೆಯಾದಂತಿದೆ.