ಶಿರೂರು ಶ್ರೀಗಳಿಗೆ ನೋಟೀಸ್! ನೋಟೀಸ್ ನಲ್ಲಿ ಏನಿದೆ ಗೊತ್ತಾ?

ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ವಿಚಾರ ವಾಗಿ ಸೋದೆ ಮಠ ಬಹಿರಂಗ ಕ್ಷಮೆ ಯಾಚಿಸುವಂತೆ ಶಿರೂರು ಸ್ವಾಮೀಜಿಗೆ ನೋಟಿಸು ನೀಡಿದ್ದಾರೆ.ಶಿರೂರು ಸ್ವಾಮೀಜಿ ಹೇಳಿಕೆ ಹಿನ್ನೆಲೆಯಲ್ಲಿ ಮಾರ್ಚ್ 15 ರಂದು ಅಷ್ಟಮಠಗಳ ಸಭೆ ರಹಸ್ಯವಾಗಿ ನಡೆದಿತು. ಪೇಜಾವರ ವಿಶ್ವೇಶ ಶ್ರೀಪಾದ ರ ನೇತೃತ್ವದಲ್ಲಿ ಏಳು ಮಠದ ಸ್ವಾಮೀಜಿಯವರು ರಹಸ್ಯ ಮಾತುಕತೆಯಲ್ಲಿ ನಡೆಸಿದ್ರು.

ರಹಸ್ಯ ಸಭೆಯಲ್ಲಿ ಶಿರೂರು ಸ್ವಾಮೀಜಿ ಗೈರು ಆಗಿದ್ರು. ಮಾತುಕತೆ ನಂತರ ಸೋದೆ ಮಠದ ಮೂಲಕ ಶಿರೂರು ಮಠಕ್ಕೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಶಿರೂರು ಮಠ ಹಾಗೂ ಸೋದೆ ಮಠ ದ್ವಂದ್ವಗಳು ಧರ್ಮಸೂಕ್ಷ ಸಂಧರ್ಭದಲ್ಲಿ ದ್ವಂದ್ವ ಮಠಗಳು ನಿರ್ಧಾರಿಸಬೇಕು ಆದ್ರೆ ಶಿರೂರು ಮಠದ ಚೌಕಟ್ಟನ್ನೂ ಮೀರಿ ಹೇಳಿಕೆ ನೀಡುವ ಮೂಲಕ ದ್ವಂದ್ವ ಮಠವಾದ ಸೋದೆ ಮಠದ ಹೆಸರಿಗೂ ದಕ್ಕೆಯಾಗಿದೆ. ಮಠದ ಕಾನೂನು ನಿಯಮವನ್ನು ಮೀರಿ ನಡೆದಿದ್ದಾರೆ.

ಮಠದ ಸ್ವಾಮೀಜಿಗಳಿಗೆ ಮಕ್ಕಳ ಇದ್ದಾರೆ ಎಂಬ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧವಾಗಿದೆ ಶಿರೂರು ಶ್ರೀಗಳು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಪತ್ರದಲ್ಲಿ ಸೂಚಿಲಾಗಿದೆ.ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿಯವರು ಶಿರೂರು ಮಠಕ್ಕೆ ಪತ್ರ ರವಾನಸಿದ್ದಾರೆ, ಆದ್ರೆ ಶಿರೂರು ಲಕ್ಷ್ಮಿವರ ಸ್ವಾಮೀಜಿ ಪತ್ರಕ್ಕೆ ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಎನ್ನುವುದು ಬಲ್ಲಮೂಲಗಳಿಂದ ತಿಳಿದು ಬಂದಿದೆ.