ಈ ಊರಿನ ಜನರಿಗೆ ಈ ಬಾರಿ ಕಳೆಗುಂದಿದ ದೀಪಾವಳಿ.. ಯಾಕೆ ಅಂತೀರಾ? ಈ ಸುದ್ದಿ ನೋಡಿ

ದೀಪಗಳ ಹಬ್ಬ ದೀಪಾವಳಿ ಅಂದ್ರೆ ಎಲ್ಲೆಲ್ಲೂ ಸಂಭ್ರಮ. ಸಂಭ್ರಮದಿಂದ ದೀಪ ಹಚ್ಚಿ ಪಟಾಕಿ ಹೊಡೆಯೋದ್ರಲ್ಲಿ ಎಲ್ಲರೂ ಆನಂದಪಡ್ತಾರೆ. ಅದರ ಜೊತೆಗೆ ಲಕ್ಷ್ಮಿ ಪೂಜೆ ಮಾಡಿಕೊಂಡು ಮನೆ ಮಂದಿಯೆಲ್ಲ ಹೊಸ ಬಟ್ಟೆ ಧರಿಸಿ ಖುಷಿ ಪಡ್ತಾರೆ. ಆದ್ರೆ ಈ ಬಾರಿ ಬಿಸಿಲೂರಿನ ಮಟ್ಟಿಗೆ ದೀಪಾವಳಿ ಸ್ವಲ್ಪ ಕಳೆಗುಂದಿದೆ. ಯಾಕೆ ಅಂತೀರಾ. ಈ ಸ್ಟೋರಿ ನೋಡಿ…

ಈ ಬಾರಿಯ ದೀಪಾವಳಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ದೇಶಾಧ್ಯಂತ ಸಂಭ್ರಮ ಸಡಗರದಿಂದ ದೀಪಾವಳಿ ಆಚರಣೆಗೆ ಕಾತುರದಿಂದ ಕಾದು ಕುಳಿತಿದ್ದಾರೆ ಜನ. ಆದ್ರೆ ದೀಪಾವಳಿ ಆಚರಣೆ ಬಿಸಿಲೂರಿನ ಖ್ಯಾತಿಯ ರಾಯಚೂರಿನ ಮಟ್ಟಿಗೆ ಸ್ವಲ್ಪ ಕಳೆಗುಂದಿದೆ. ಯಥಾ ಪ್ರಕಾರವಾಗಿ ಹಬ್ಬ ಆಚರಣೆ ದೀಪಗಳನ್ನ ಹಚ್ಚಿ ಸಂಭ್ರಮಿಸೋದು ವಾಡಿಕೆ. ಇದೀಗ ರಾಯಚೂರು ಮಾರುಕಟ್ಟೆಗೆ ದೀಪಾಲಂಕರಕ್ಕೆ ಬೇಕಾದ ಪ್ರಣತಿಗಳು ಬಂದಿವೆ. ಆದ್ರೆ, ಮಾರುಕಟ್ಟೆ ಡಲ್ ಆಗಿದ್ದು ವ್ಯಾಪಾರವೇ ಇಲ್ಲದೆ ವ್ಯಾಪಾರಿಗಳು ಕೂಡಾ ಕಂಗಲಾಗಿದ್ದಾರೆ. ಪ್ರಣತಿಗಳ ಮಾರಾಟಕ್ಕೆ ಅಂತಾ ರಾಜಸ್ಥಾನದಿಂದ ಬಂದಿರುವ ಮಾರಾಟಗಾರರು ತಮ್ಮ ಅಳಲನ್ನ ತೋಡಿಕೊಂಡಿದ್ದು ಹೀಗೆ…

ಈ ಬಾರಿ ಮುಂಗಾರು ಕೈ ಕೊಟ್ಟು ರೈತರು ಬಿತ್ತಿದ್ದ ಬೆಳೆ ಕೂಡಾ ಕೈ ಕೊಟ್ಟಿದೆ. ಎರಡೆರಡು ಬಾರಿ ಬಿತ್ತನೆ ಮಾಡಿದ್ರೂ ಕೂಡಾ ಬೆಳೆ ಕೈ ಹಿಡಿದಿಲ್ಲ. ಮತ್ತೊಂದು ಕಡೆ ಜಿಲ್ಲೆಯ ರೈತರು ಅವಲಂಬಿತವಾಗಿರುವ ಕೃಷ್ಣಾ ಮತ್ತು ತುಂಗಭದ್ರ ನದಿಗಳೂ ಕೂಡಾ ಸಮರ್ಪಕ ನೀರು ಒದಗಿಸಲು ವಿಫಲವಾಗಿದ್ದು ರೈತರು ಹೈರಾಣಾಗಿದ್ದಾರೆ…

ಒಟ್ಟಾರೆ ಈ ಬಾರಿ ಮಳೆ ಕೈ ಕೊಟ್ಟಿದ್ದರಿಂದಾಗಿ ಸಂಭ್ರಮದಿಂದ ಆಚರಿಸಬೇಕಿರುವ ಹಬ್ಬ ಸಪ್ಪೆಯಾಗಲಿದೆ. ಸಹಜವಾಗಿ ಹಣಕಾಸಿನ ತೊಂದರೆಯಿಂದ ಜನ ಹಬ್ಬದ ಆಚರಣೆಯಲ್ಲಿ ಉತ್ಸಾಹ ತೋರುತ್ತಿಲ್ಲ…