ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಧರ್ಮಸ್ಥಳಕ್ಕೆ ಆಗಮಿಸಿದ್ರು. -ಸಂಪ್ರದಾಯಿಕ ಪಂಚೆ, ಶಲ್ಯ ಧರಿಸಿ ಮೋದಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ರು.

ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಧರ್ಮಸ್ಥಳಕ್ಕೆ ಆಗಮಿಸಿದ್ರು. ಸಂಪ್ರದಾಯಿಕ ಪಂಚೆ, ಶಲ್ಯ ಧರಿಸಿ ಮೋದಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ರುದ್ರಾಭಿಷೇಕ, ಮಂಗಳಾರತಿ ನಮೋ. ಅಣ್ಣಪ್ಪಸ್ವಾಮಿ, ಅಮ್ಮನವರು, ಗಣೇಶನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು. ಪೂಜೆ ಬಳಿಕ ನಮೋ ಕೆಲಹೊತ್ತು ಧ್ಯಾನ ಮಾಡಿದ್ರು.

ಮಂಜುನಾಥಸ್ವಾಮಿಗೆ ಪೂಜೆ ಸಲ್ಲಿಸಿದ ರಸ್ತೆ ಮಾರ್ಗವಾಗಿ ಉಜಿರೆಗೆ ತಲುಪಿದ ಮೋದಿ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ್ರು. ಪ್ರಧಾನಿ ಮೋದಿಗೆ ಡಾ ವೀರೇಂದ್ರ ಹೆಗ್ಗಡೆ ಪೇಟ, ಶಾಲು, ಕಂಬಳ ಫೋಟೊ, ನೇಗಿಲು ಕೊಟ್ಟು ಸನ್ಮಾನಿಸಿದ್ರು. ಅಲ್ದೆ ಮೋದಿ ಕೂಡ ಹೆಗ್ಗಡೆಯವರನ್ನು ಕೂಡ ನಮೋ ಸನ್ಮಾನಿಸಿದ್ರು

ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ನನ್ನ ಬಂಧು ಭಗಿನಿಯರೇ ನಮಸ್ಕಾರಗಳು ಎಂದ್ರು. ಇದೇ ವೇಳೆ ಪ್ರಧಾನಿ ಮೋದಿ ವೀರೇಂದ್ರ ಹೆಗ್ಗಡೆಯವರ ಸಾಧನೆಯನ್ನು ಕೊಂಡಾಡಿದ್ರು.ಇದಕ್ಕೂ ಮೊದಲು ವೀರೇಂದ್ರ ಹೆಗ್ಗಡೆ, ತುಳುಗೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಭಾಷಾ ಸ್ಥಾನಮಾನ ನೀಡುವಂತೆ ಮನವಿ ಮಾಡಿದ್ರು.